ಯಜ್ಞವಲ್ಕ್ಯ ನೋ ಈತ
ಶುಕ್ಲ ಯಜುರ್ಚೇದದ ಮುನಿ ಪ್ರಖ್ಯಾತ || ಪ
ಕಾತ್ಯಯಿನಿ, ಮೈತ್ರೇಯಿ ಪತಿ
ಗುರುಕುಲದ ಕುಲಾಧಿಪತಿ
ಹಲವಾರು ಶಿಷ್ಯರಗೆ ವಿದ್ಯೆಯನು ನೀಡಿ
ತೋರುತ ಧರ್ಮದ ಹಾದಿ
ಯಜ್ಞವಲ್ಕ್ಯ ನೋ ಈತ ||
ಸುರಧೇನುವಿನಂತೆ ಧರೆಗೆ ಬಂದೆ
ಸುಮನೋಹರ ಸ್ಮೃತಿಯ ಬರೆದೆ
ಧನ್ಯ ಧನ್ಯ ಜಗದೋಳು ಮಾನ್ಯ
ಗುರು ಯಾಜ್ಞವಲ್ಕ್ಯ ನಿಜದಿ ಗಣ್ಯ
ಯಾಕ್ಞವಲ್ಕ್ಯ ನೋ ಈತ ||
ಸರ್ವ ವಿದ್ಯಾನಿಧಿ ಗುರು ನೀನು
ಸರ್ವ ಪಾಂಡಿತ್ಯದ ಗಣಿ ನೀನು
ಬಣ್ಣಸಲಸದಳ ಗುರು ನಿನ್ನ ಮಹಿಮೆ
ಜಾಹ್ನವಿ ವಿಠ್ಠಲ ಭಜಿಸಿದ ಗರಿಮೆ
ಯಾಜ್ಞವಲ್ಕ್ಯ ನೋ ಈತ ||