ಚಾಮರಾಜನಗರ : ಮಹಾರಾಷ್ಟ್ರದ ಪುಣೆಯಿಂದ ಕೊಯಮತ್ತೂರಿಗೆ ಪಿವಿಸಿ ಪೈಪ್ ತುಂಬಿದ ಈಚರ್ ವ್ಯಾನ್ ಬೆಳಿಗ್ಗೆ ಕರ್ನಾಟಕ ತಮಿಳುನಾಡು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ದಿಂಬಂ ಘಾಟ್ ನ ತೀವ್ರವಾದ ತಿರುವುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕೆಳಗೆ ಬೀಳುವ ಸ್ಥಿತಿಯಲ್ಲಿ ನಿಂತ ಘಟನೆ ನಡೆದಿದೆ.
ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಈರೋಡ್ ಜಿಲ್ಲೆಯ ದಿಂಬಂ ಘಾಟ್ ಮೂಲಕ ಮಹಾರಾಷ್ಟ್ರದ ಪುಣೆಯಿಂದ ಕೊಯಮತ್ತೂರಿಗೆ ಪಿವಿಸಿ ಪೈಪ್ ತುಂಬಿದ ಈಚರ್ ತೆರಳುವಾಗ ದಿಂಬಂ ಘಾಟ್ ನ ಒಂಬತ್ತನೇ ತೀವ್ರವಾದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಘಟನೆ ನಡೆದಿದೆ.
ಈಚರ್ ವಾಹನ ದಿಂಬಂನ ತಡೆಗೋಡೆಗೆ ಹೊಡೆದು ಬೀಳುವ ಸ್ಥಿತಿಗೆ ಬಂದು ನಿಂತಿತು. ಈ ಘಟನೆಯಿಂದ ನಾಲ್ಕು ಗಂಟೆಗಳ ಕಾಲ ಎರಡೂ ರಾಜ್ಯಗಳ ನಡುವೆ ವಾಹನ ಸಂಚಾರ ಸ್ಥಗಿತಗೊಂಡಿತು.
ಈ ಘಟನೆಯಲ್ಲಿ ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾನೆ. ತಮಿಳುನಾಡಿನ ಪೊಲೀಸರು ಕ್ರೇನ್ ಮೂಲಕ ಈಚರ್ ವಾಹವನ್ನು ಹೊರ ತೆಗೆದ ಬಳಿಕ ಸಂಚಾರ ಎಂದಿನಂತೆ ಸಾಗಿತು.