ಮನೆ ಆರೋಗ್ಯ ಅತಿಯಾದ ಮೊಟ್ಟೆ ಸೇವಿಸಿದರೆ ಆರೋಗ್ಯದ ಮೇಲೆ ಅಡ್ಡ ಪರಿಣಾಮ

ಅತಿಯಾದ ಮೊಟ್ಟೆ ಸೇವಿಸಿದರೆ ಆರೋಗ್ಯದ ಮೇಲೆ ಅಡ್ಡ ಪರಿಣಾಮ

0

ಮೊಟ್ಟೆಯನ್ನು ಸಂಪೂರ್ಣ ಆಹಾರವೆಂದು ಹೇಳಲಾಗುತ್ತದೆ. ಏಕೆಂದರೆ ಇದರಲ್ಲಿ  ಫ್ರೋಟೀನ್, ವಿಟಮಿನ್ ಬಿ2, ವಿಟಮಿನ್ ಬಿ 12, ವಿಟಮಿನ್ ಡಿ, ಸೆಲೆನಿಯಮ್, ಅಯೋಡಿನ್ ಮುಂತಾದ ಅಗತ್ಯ ಪೋಷಕಾಂಶಗಳು ಸಮೃದ್ಧವಾಗಿವೆ.

Join Our Whatsapp Group

ಅಲ್ಲದೆ ಇದರಲ್ಲಿ ಕೋಲಿನ್, ಕಬ್ಬಿಣ ಮತ್ತು ಫೋಲೆಟ್ ಅಂಶವೂ ದೊಡ್ಡ ಪ್ರಮಾಣದಲ್ಲಿ ಕಂಡುಬರುತ್ತದೆ. ಈ ಎಲ್ಲಾ ಪೋಷಕಾಂಶಗಳು ನಮ್ಮ ದೇಹಕ್ಕೆ ತುಂಬಾನೇ ಪ್ರಯೋಜನಕಾರಿಯಾಗಿದೆ.  ಮೊಟ್ಟೆ ತಿನ್ನುವುದರಿಂದ ಮೂಳೆಗಳು ಬಲಗೊಳ್ಳುವುದಲ್ಲದೆ ದೇಹದ ರೋಗನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ. ಮತ್ತು ಇದು ನಮ್ಮ ಆರೋಗ್ಯವನ್ನು ಸರಿಯಾದ ರೀತಿಯಲ್ಲಿ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.  ಇದಲ್ಲದೆ ಮೊಟ್ಟೆಗಳಲ್ಲಿ ಕೊಲೆಸ್ಟ್ರಾಲ್  ಅಂಶವೂ ಇದೆ. ಅತಿಯಾದ ಕೊಲೆಸ್ಟ್ರಾಲ್ ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಿದ್ದರೆ  ಕೊಲೆಸ್ಟ್ರಾಲ್ ಭರಿತ ಮೊಟ್ಟೆಗಳು ಹೃದಯದ ಆರೋಗ್ಯಕ್ಕೆ ಸರಿಯಾದ ಆಯ್ಕೆಯೇ? ಹಾಗೂ ದಿನದಲ್ಲಿ ಎಷ್ಟು ಮೊಟ್ಟೆಗಳನ್ನು ತಿನ್ನುವುದು ಸೂಕ್ತ ಎಂಬುದನ್ನು ನೋಡೋಣ.

ಖಂಡಿತವಾಗಿಯೂ ಮೊಟ್ಟೆ  ಪೋಷಕಾಂಶಗಳ ಸಮೃದ್ಧ ಮೂಲವಾಗಿದೆ. ಇದು ಮಾತ್ರವಲ್ಲದೆ ಇದರಲ್ಲಿ ಕೊಲೆಸ್ಟ್ರಾಲ್ ಕೂಡ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಹೌದು ಮೊಟ್ಟೆಯ ಹಳದಿ ಲೋಳೆಯಲ್ಲಿ ಬಹಳಷ್ಟು ಕೊಲೆಸ್ಟ್ರಾಲ್  ಇದೆ ಎಂದು ತಜ್ಞರು ಹೇಳುತ್ತಾರೆ. ಹಾಗಾಗಿ ಮೊಟ್ಟೆಗಳನ್ನು ಮಿತ ಪ್ರಮಾಣದಲ್ಲಿ ಸೇವನೆ ಮಾಡಬೇಕು. ಏಕೆಂದರೆ ಕೊಲೆಸ್ಟ್ರಾಲ್ ಹೆಚ್ಚಳವು ಹೃದಯಕ್ಕೆ ಗರಿಷ್ಟ ಪ್ರಮಾಣದಲ್ಲಿ ಹಾನಿಯನ್ನು ಉಂಟುಮಾಡುತ್ತದೆ. ಮತ್ತು ಹೃದಯಾಘಾತ ಅಪಾಯವು ಹೆಚ್ಚಾಗಬಹುದು. ಕೊಲೆಸ್ಟ್ರಾಲ್ನಲ್ಲಿ ಎರಡು ವಿಧಗಳಿವೆ.

 ಒಂದು ಆರೋಗ್ಯಕರ ಮತ್ತು ಇನ್ನೊಂದು ಅನಾರೋಗ್ಯಕರ ಕೊಬ್ಬು.  ಆರೋಗ್ಯಕರ ಕೊಲೆಸ್ಟ್ರಾಲ್ ಆರೋಗ್ಯಕರ ಜೀವಕೋಶಗಳು, ಈಸ್ಟ್ರೋಜೆನ್, ಟೆಸ್ಟೋಸ್ಟೆರಾನ್ ಮತ್ತು ಅಡ್ರಿನಾಲಿನ್ ನಂತಹ ಹಾರ್ಮೋನುಗಳನ್ನು ಉತ್ಪತ್ತಿ ಮಾಡುತ್ತದೆ. ಇದು ದೇಹಕ್ಕೆ ತುಂಬಾ ಒಳ್ಳೆಯದು. ಆದರೆ ದೇಹದಲ್ಲಿ ಅನಾರೋಗ್ಯಕರ ಕೊಲೆಸ್ಟ್ರಾಲ್ (LDL) ಹೆಚ್ಚಾದರೆ ತೂಕ ಹೆಚ್ಚಾಗುವಂತಹದ್ದು, ಜೀರ್ಣಕ್ರಿಯೆಯ ಸಮಸ್ಯೆ  ಮುಂತಾದ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ.  ಅಲ್ಲದೆ ಹೆಚ್ಚಿನ ಮಟ್ಟದ ಕೆಟ್ಟ ಕೊಲೆಸ್ಟ್ರಾಲ್ ಹೃದ್ರೋಗ ಮತ್ತು ಪಾರ್ಶವಾಯುವಿಗೆ ಕಾರಣವಾಗುತ್ತದೆ. ಈ ಕಾರಣದಿಂದಲೇ ಮೊಟ್ಟೆಯನ್ನು ಸರಿಯಾದ ಪ್ರಮಾಣದಲ್ಲಿ ಸೇವನೆ ಮಾಡುವುದು ಮುಖ್ಯವಾಗಿದೆ.

ಹಾಗಿದ್ದರೆ ದಿನಕ್ಕೆ ಎಷ್ಟು ಮೊಟ್ಟೆಗಳನ್ನು ತಿನ್ನುವುದು ಒಳ್ಳೆಯದು:

ಒಂದು ಮೊಟ್ಟೆಯಲ್ಲಿ ಸುಮಾರು 186 ಮಿಗ್ರಾಂ ಕೊಲೆಸ್ಟ್ರಾಲ್ ಇರುತ್ತದೆ. ಈ ಕೊಲೆಸ್ಟ್ರಾಲ್ ಮೊಟ್ಟೆಯ ಹಳದಿ ಭಾಗದಲ್ಲಿ ಕಂಡುಬರುತ್ತದೆ.   ʼದಿ ಕೊರಿಯನ್ ಜರ್ನಲ್ ಫುಡ್ ಸೈನ್ಸ್ ಆಫ್ ಅನಿಮಲ್ ರಿಸೋರ್ಸಸ್ʼ ನಿಯತಕಾಲಿಕೆಯಲ್ಲಿ  ಪ್ರಕಟವಾದ ಸಂಶೋಧನೆಯು ವಾರಕ್ಕೆ 2 ರಿಂದ 7 ಮೊಟ್ಟೆಗಳನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಮೆಟಾಬಾಲಿಕ್ ಸಿಂಡ್ರೋಮ್ ಅಪಾಯವನ್ನು ಕಡಿಮೆ ಮಾಡು ತ್ತದೆ ಎಂಬುದನ್ನು ಕಂಡುಹಿಡಿದಿದೆ. ಆದರೆ ಪ್ರತಿದಿನ ಎರಡು ಮೊಟ್ಟೆಗಳನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಯಾವುದೇ ಹಾನಿಯಾಗುವುದಿಲ್ಲ.