ಮನೆ ರಾಜ್ಯ ಪಿಎಸ್ಐ ನೇಮಕಾತಿ ಅಕ್ರಮ: ಪುಣೆಯಲ್ಲಿ ಕಿಂಗ್ ಪಿನ್‌ ರುದ್ರಗೌಡ ಪಾಟೀಲ್‌ ಬಂಧನ

ಪಿಎಸ್ಐ ನೇಮಕಾತಿ ಅಕ್ರಮ: ಪುಣೆಯಲ್ಲಿ ಕಿಂಗ್ ಪಿನ್‌ ರುದ್ರಗೌಡ ಪಾಟೀಲ್‌ ಬಂಧನ

0

ಬೆಂಗಳೂರು (Bengaluru)- ಪಿಎಸ್ಐ ನೇಮಕಾತಿ ಪರೀಕ್ಷೆ ಹಗರಣಕ್ಕೆ (PSI Recruitment Scandal) ಸಂಬಂಧಿಸಿದಂತೆ ಮತ್ತೋರ್ವ ಕಿಂಗ್​ಪಿನ್‌ (KingPin) ಅನ್ನು ಪೊಲೀಸರು ಬಂಧಿಸಿದ್ದಾರೆ.

ರುದ್ರಗೌಡ ಪಾಟೀಲ್‌ (Rudragowda Patil) ನನ್ನು ಸಿಐಡಿ (CID) ಪೊಲೀಸರು ಕಳೆದ ತಡರಾತ್ರಿ 3 ಗಂಟೆ ಸುಮಾರಿಗೆ ಮಹಾರಾಷ್ಟ್ರದ ಪುಣೆ (Pune) ಹೊರವಲಯದಲ್ಲಿಬಂಧಿಸಿದ್ದಾರೆ.

ರುದ್ರೇಗೌಡ ನನ್ನು ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಕೋರಲಿದೆ.

ಈ ಮೂಲಕ ಪರೀಕ್ಷಾ ಅಕ್ರಮದಲ್ಲಿ ತೊಡಗಿದ್ದವರಿಗೆ ಆತಂಕ ಎದುರಾಗಿದ್ದು ಪಿಎಸ್ಐ, ಕಾನ್ಸ್ ಟೇಬಲ್, ಎಫ್ ಡಿಎ, ಎಸ್ ಡಿಎ  ಸೇರಿದಂತೆ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ಎಸಗಿದ ಅನುಮಾನ ಕಿಂಗ್ ಪಿನ್ ರುದ್ರಗೌಡ ಪಾಟೀಲ್ ಮೇಲಿದೆ. ನೇಮಕಾತಿ ವಿಭಾಗದಿಂದ ಕೆಳಹಂತದವರೆಗೆ ಪಾಟೀಲ್ ಗೆ ಸಂಪರ್ಕವಿದೆ ಎಂದು ಹೇಳಲಾಗುತ್ತಿದೆ. 

ಪಿಎಸ್ಐ ನೇಮಕಾತಿ ಪರೀಕ್ಷೆ ಹಗರಣ ರಾಜ್ಯಾದ್ಯಂತ ತೀವ್ರ ಸುದ್ದಿ ಮಾಡಿದ್ದು, ರಾಜಕೀಯ ಪಕ್ಷಗಳ ಪ್ರಮುಖ ಅಸ್ತ್ರವಾಗಿದೆ.