ಮನೆ ಆರೋಗ್ಯ ಮಕ್ಕಳು ಬಾಯಿಗೆ ಬೆರಳು ಇಟ್ಟುಕೊಳ್ಳುವುದರಿಂದಾಗು ಸಮಸ್ಯೆಗಳು

ಮಕ್ಕಳು ಬಾಯಿಗೆ ಬೆರಳು ಇಟ್ಟುಕೊಳ್ಳುವುದರಿಂದಾಗು ಸಮಸ್ಯೆಗಳು

0

ಮಕ್ಕಳು ಬೆಳದಂತೆಲ್ಲಾ, ಬಾಯಿಗೆ ಬೆರಳು ಇಟ್ಟು ಚೀಪುವುದು. ಬೆರಳುಗಳನ್ನು ಕಚ್ಚುವುದು, ನಾಲಿಗೆಯಿಂದ ವಸಡುಗಳನ್ನು ಉಜ್ಜುವುದು ಮಾಡುತ್ತದೆ. ಈ ಕ್ರಿಯೆಯಿಂದ ಹಲ್ಲುಗಳ ವರೆಸಿಗೆ ಅಡ್ಡಿಯಾಗುತ್ತದೆ.. ಹಲ್ಲುಗಳು ಮುಂದಕ್ಕೆ ಹಿಂದಕ್ಕೆ ಬರುತ್ತದೆ.  ಉಬ್ಬಲ್ಲೂ ಕೂಡ ಆಗಬಹುದು. ಹೀಗಾಗಿ ಮಕ್ಕಳು ಬಾಯಿಗೆ ಬೆರಳು ಇಡುವ ರೂಡಿಯನ್ನು ತಪ್ಪಿಸಬೇಕು. ಹಲ್ಲುಗಳ ವರಸೆಯಲ್ಲಿ ವ್ಯತ್ಯಾಸವಾಗಿದ್ದರೆ ದಂತ ವೈದ್ಯರಿಗೆ ತೋರಿಸಬೇಕು.

ಬಹಳಷ್ಟು ಚಿಕ್ಕ ಮಕ್ಕಳ ಒಸಡುಗಳಿಂದ ರಕ್ತ ಸುರಿಯುವುದನ್ನು ನೋಡಬಹುದು. ಚಿಕ್ಕ ಮಕ್ಕಳಿಗೂ ಒಸಡುಗಳು ಮೃದುವಾಗಿರುತ್ತದೆ. ಬ್ರಷ್ ಮಾಡುವುದು ಗೊತ್ತಿಲ್ಲದೆ ಒರಟಾಗಿ ಉಜ್ಜಿ ಬಿಡುತ್ತಾರೆ. ಆದ್ದರಿಂದ  ಒಸಡುಗಳಿಗೆ ಪಟ್ಟಾಗಿ ರಕ್ತ ಸುರಿಯುತ್ತದೆ.  ಇಂಥ ಮಕ್ಕಳಿಗೆ ಬ್ರಷ್ ಮಾಡುವ ಕ್ರಮವನ್ನು ಹೇಳಿಕೊಡಬೇಕು.  ಹುಳುಕಲ್ಲಿನ ಆರಂಭದಲ್ಲಿ ಹಲ್ಲಿನ ಮೇಲೆ ಸ್ವಲ್ಪ ಕಪ್ಪಗೆ ಕಂಡುಬರುತ್ತದೆ. ಆದರೆ ಅದನ್ನು ಗುರುತಿಸಿ ಸ್ವಚ್ಛಗೊಳಿಸಿದರೆ ಹುಳುಕಲ್ಲು ಬರುವುದಿಲ್ಲ.

ಹಲ್ಲು ಶುಚಿಗೊಳಿಸುವ ಅಭ್ಯಾಸ :-

ಮಕ್ಕಳಿಗೆ ರಾತ್ರಿ ಮಲಗುವ ಮುಂಚೆ ತಪ್ಪದೇ ಹಲ್ಲುಜ್ಜುವುದನ್ನು ರೂಢಿ ಮಾಡಿಸಬೇಕು. ಹಲ್ಲುಜ್ಜದಿದ್ದರೆ ಹಲ್ಲಿನ ಮೇಲೆ ಉಳಿದಿರುವ ಆಹಾರ ಪದಾರ್ಥಗಳು ನಿದ್ರೆ ಮಾಡುವಾಗ ಬ್ಯಾಕ್ಟೀರಿಯಗಳು ಅಡಗುದಾಣವಾಗುತ್ತದೆ. ಬ್ಯಾಕ್ಟೀರಿಯಾಗಳು ಆಮ್ಲವನ್ನು ಉತ್ಪಾದನೆಮಾಡಿ ಎನಾಮಿಲ್ ಶಿಥಿಲವಾಗುವಂತೆ ಮಾಡುತ್ತವೆ. ಹಲ್ಲನ್ನು ಉಜ್ಜಿದರೆ ಬ್ಯಾಕ್ಟೀರಿಯಾ ನಿಲ್ಲಲು ಸಾಧ್ಯವಾಗುವುದಿಲ್ಲ.

ಕೆಲ ಮಕ್ಕಳು ಒಂದು ನಿಮಿಷದಲ್ಲಿ ಹಲ್ಲುಜ್ಜಿ ನಿಲ್ಲಿಸಿ ಬಿಡುತ್ತಾರೆ. ಹಲ್ಲು ಶುಭ್ರವಾಗಲು 3-4 ನಿಮಿಷಗಳಾದರೂ ಬೇಕಾಗುತ್ತದೆ. 

ಪ್ರತಿ 2-3 ತಿಂಗಳಿಗೊಮ್ಮೆ ಟೂತ್ ಬ್ರಷ್ ಬದಲಿಸಬೇಕು. ಟೂತ್ ಬ್ರಷ್ ಚೆನ್ನಾಗಿರುವಂತೆ ಕಂಡರೂ ಬ್ರಿಜಿಲ್ಸ್ ಗೆಪೆಟ್ಟಾಗಿರುತ್ತದೆ.

ಮಗುವಿಗೆ ಆರನೇ ತಿಂಗಳಿನಲ್ಲಿ 1-2 ಹಲ್ಲು ಬರುತ್ತದೆ. ಆ ಒಂದೆರಡು ಹಲ್ಲುಗಳನ್ನು ಒದ್ದೆ ಹತ್ತಿಯಿಂದ ಒರೆಸಿ ಶುಚಿಗೊಳಿಸಬೇಕು. 9 ನೇ ತಿಂಗಳು ತುಂಬಿದ ಮೇಲೆ ಮೃದುವಾದ ಟೂತ್ ಬ್ರಷ್ ನಿಂದ ನಿಧಾನವಾಗಿ ಬ್ರಷ್ ಮಾಡಬೇಕು. ಈ ವಯಸ್ಸಿನಲ್ಲಿ ಬ್ರಷ್ ಮಾಡಲು ಟೂತ್ಪೇಸ್ಟ್ ನ ಅಗತ್ಯವಿರುವುದಿಲ್ಲ. ಎರಡು ವರ್ಷ ತುಂಬಿದ ಮೇಲೆ ದಿನಕ್ಕೆರಡು ಬಾರಿ ಮಾಡಬೇಕು. 4-5 ವರ್ಷಗಳ ನಂತರ ಮಕ್ಕಳೇ ಸ್ವತಃ ಬ್ರಷ್ ಮಾಡಿಕೊಳ್ಳಬೇಕು. ಅದುವರೆವಿಗೂ ತಂದೆ ತಾಯಿಯರೇ ಮಕ್ಕಳಿಗೆ ಬ್ರಷ್ ಮಾಡಬೇಕು.

ಹಾಲು ಹಲ್ಲುಗಳ ವಿಷಯ :-

ಹಾಲುಹಲ್ಲುಗಳು ಅವಷ್ಟಕವೇ ಬಿದ್ದುಹೋಗಿ, ನಂತರ ಹಲ್ಲುಗಳು ಕ್ರಮಬದ್ಧವಾಗಿ ಹುಟ್ಟುತ್ತದೆ. ಹಾಲು ಹಲ್ಲುಗಳಿದ್ದಾಗ ಹುಳುಕು ಹಲ್ಲಿನ ಸಮಸ್ಯೆಯಿಂದಲೇ ಹಲ್ಲು ಮುರಿದಿರುವುದರಿಂದಲೋ,  ಹಾಲು ಹಲ್ಲುಗಳಲ್ಲಿ ಒಂದನ್ನು ತೆಗೆಯಬೇಕಾಗಿ ಬಂದರೆ, ಹಲ್ಲು ತೆಗೆದ ಕಡೆ ಏನಾದರೂ ಇಡಬೇಕು. ಇದನ್ನು ಡೆಂಟಲ್ ಸರ್ಜನ್ ಮಾಡುತ್ತಾರೆ. ಹಲ್ಲು ಕಿತ್ತು ಹಾಗೆಯೇ ಬಿಟ್ಟರೆ, ನಂತರ ಬರುವ ಹಲ್ಲು ಮೊದಲ ಹಲ್ಲನ್ನು ಪಕ್ಕಕ್ಕೆ ತಳ್ಳುತ್ತದೆ ಹಲ್ಲಿನ ಮೇಲೆ ಹಲ್ಲು ಬಂದರೂ ಅಲ್ಲಿನ ವರಸೆ ತಪ್ಪುತ್ತದೆ. ವಿಕಾರವಾಗಿರುತ್ತದೆ. ಹಾಗಾಗಿ ಹಾಲು ಹಲ್ಲುಗಳ ವಿಷಯದಲ್ಲಿಯೂ ಶ್ರದ್ದೆವಹಿಸಬೇಕು.

ಹಾಲು ಹಲ್ಲುಗಳು ಇಪ್ಪತ್ತಿರುತ್ತದೆ. ಶಾಶ್ವತ ಹಲ್ಲುಗಳು 32 ಇರುತ್ತದೆ. ಹಾಲು ಹಲ್ಲುಗಳು ಹೋಗಿ ಶಾಶ್ವತ ಹಲ್ಲುಗಳು ಒಂದು ವರ್ಷದಲ್ಲಿ ಬರಬೇಕಾದರೆ, ಹಾಲು ಹಲ್ಲುಗಳ ವಿಷಯದಲ್ಲಿ ಶ್ರದ್ಧೆ ವಹಿಸುವುದು ಬಹು ಅಗತ್ಯ.