ಮನೆ ರಾಜ್ಯ ಮಂಡ್ಯ: ಆನೆಗಳ ಕಾಡಿಗಟ್ಟಲು ಡ್ರೋನ್ ತಂತ್ರಜ್ಞಾನ ಬಳಕೆ

ಮಂಡ್ಯ: ಆನೆಗಳ ಕಾಡಿಗಟ್ಟಲು ಡ್ರೋನ್ ತಂತ್ರಜ್ಞಾನ ಬಳಕೆ

0

ಮಂಡ್ಯ: ಮಂಡ್ಯದಲ್ಲಿ ಕಾಡಾನೆ ಹಾವಳಿ ಮುಂದುವರೆದಿದ್ದು,  ಆನೆಗಳ ಕಾಡಿಗಟ್ಟಲು ಡ್ರೋನ್ ತಂತ್ರಜ್ಞಾನ ಬಳಕೆ  ಮಾಡಲಾಗುತ್ತಿದೆ.

ಒಂದು ವಾರದಿಂದ ನಾಡಿನಲ್ಲಿ 5 ಕಾಡಾನೆಗಳು ಬೀಡು ಬಿಟ್ಟಿದ್ದು, ಮಂಡ್ಯ ನಗರದ ಸಮೀಪವೇ ಬೀಡು ಬಿಟ್ಟು ಆತಂಕ ಸೃಷ್ಟಿ ಮಾಡಿವೆ.

ಆನೆಗಳನ್ನು ವಾಪಾಸ್ ಕಾಡಿಗಟ್ಟಲು ಅರಣ್ಯ ಇಲಾಖೆ ಸಿಬ್ಬಂದಿಗಳು ಹರಸಾಹಸ ಮಾಡುತ್ತಿದ್ದಾರೆ. ನಿನ್ನೆ ರಾತ್ರಿಯಿಂದ ಮುಂಜಾನೆ 5 ಗಂಟೆಯವರೆಗೆ ಡ್ರೋಣ್ ಬಳಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಡ್ರೋಣ್ ಮೂಲಕ ಶಬ್ಧ ಮಾಡುತ್ತ ಅರಣ್ಯ ಪ್ರದೇಶಕ್ಕೆ ಆನೆ ಕಳುಹಿಸಲು ಪ್ರಯತ್ನಪಡುತ್ತಿದ್ದು, ರಾತ್ರಿ ಇಡೀ ಕಾರ್ಯಾಚರಣೆಯಿಂದ 8 ಕಿಮೀ ದೂರದಷ್ಟು ಕಾಡಾನೆಗಳು ಸಾಗಿವೆ.

ಸಂಜೆ 6 ಗಂಟೆ ಬಳಿಕ ಅರಣ್ಯ ಇಲಾಖೆ ಮತ್ತೆ ಕಾರ್ಯಾಚರಣೆ ಆರಂಭಿಸಲಿದೆ. ಚಿಕ್ಕಮಂಡ್ಯದಿಂದ ಬೂದನೂರು ಕಡೆಗೆ ಕಾಡಾನೆಗಳ ಹಿಂಡು ತಲುಪಿವೆ.