ಗುಂಡ್ಲುಪೇಟೆ : ಪಟ್ಟಣದಲ್ಲಿ 5 ದಿನಗಳ ಹಿಂದೆ 4 ಹಸಗಳನ್ನು ಕಳ್ಳತನ ಮಾಡಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಪಟ್ಟಣದ ಮಹಮ್ಮದ್, ನಯೀಂ ಪಾಷಾ, ಇಮ್ರಾನ್ ಪಾಷಾ, ಅಬ್ದುಲ್ ವಹೀದ್ ಎಂಬುವರನ್ನು ಅ.1 ರಂದು ಬಂಧಿಸಿ 2 ಬೈಕ್ ಹಾಗೂ 98,000ಗಳನ್ನು ವಶಪಡಿಸಿಕೊಂಡಿದ್ದಾರೆ.
ಪಟ್ಟಣದ ಸಿದ್ಧಾರ್ಥ ಎಂಬವರು ತಮ್ಮ ಮನೆಯ ಹಿಂಭಾಗ ಕಟ್ಟಿ ಹಾಕಿದ್ದ 3 ಹಸುಗಳನ್ನು ಸೆಪ್ಟಂಬರ್ 26ರ ರಾತ್ರಿ ಮತ್ತು ಸಂತೋಷ ಅವರ 1 ಹಸುವನ್ನು ಸೆಪ್ಟೆಂಬರ್ 27ರ ರಾತ್ರಿ ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ಸಿದ್ಧಾರ್ಥ ಅವರು ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದರು.
ಈ ಹಿನ್ನಲೆಯಲ್ಲಿ ಗುಂಡ್ಲುಪೇಟೆ ಠಾಣೆಯ ಇನ್ಸ್ಪೆಕ್ಟರ್ ಪರಶಿವಮೂರ್ತಿ, ಎಸ್ಐ ಸಾಹೇಬಗೌಡ ನೇತೃತ್ವದ ತಂಡವನ್ನು ರಚಿಸಿ ಹಸುಗಳ ಕಳ್ಳರ ಹುಡುಕಾಟ ನಡೆಸಿ ಅ.1 ರಂದು ನಾಲ್ವರನ್ನು ಬಂಧಿಸಿದ್ದಾರೆ.
ಈ ನಾಲ್ವರ ಮೇಲೆ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ 3 ಮತ್ತು ಬೇಗೂರು ಠಾಣೆಯಲ್ಲಿ 1 ಕಳ್ಳತನ ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.














