ಬಾಗಲಕೋಟೆ (Bagalkote)- ಅಕ್ಷಯ ತೃತೀಯಕ್ಕೆ (Akshaya Tritiya) ಮುಸ್ಲಿಂರ ಚಿನ್ನಾಭರಣ ಮಳಿಗೆಗಳಲ್ಲಿ ಚಿನ್ನ ಖರೀದಿಸಬೇಡಿ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod muthalik) ಕರೆ ನೀಡಿದ್ದಾರೆ.
ಅಕ್ಷಯ ತೃತೀಯಕ್ಕೆ ಹಿಂದೂಗಳ ಮಳಿಗೆಗಳಲ್ಲಿ ಚಿನ್ನ ಖರೀದಿಸಿ ಎಂಬ ಟ್ವಿಟರ್ ಅಭಿಯಾನದ ಕುರಿತು ಮಾತನಾಡಿದ ಅವರು, ಅಭಿಯಾನಕ್ಕೆ ಶ್ರೀರಾಮ ಸೇನೆ ಸಂಪೂರ್ಣ ಬೆಂಬಲ ಇದೆ. ಅಕ್ಷಯ ತೃತೀಯಕ್ಕೆ ಹಿಂದೂ ಜುವೇಲರ್ಸ್ ನಲ್ಲೇ ಖರೀದಿ ಮಾಡಿ. ರಾಜ್ಯದಲ್ಲಿ ಇರುವ ಕೇರಳ ಮೂಲದ ಮುಸ್ಲಿಂರ ಚಿನ್ನಾಭರಣ ಮಳಿಗೆಗಳಲ್ಲಿ ಚಿನ್ನ ಖರೀದಿಸಬೇಡಿ ಎಂದಿದ್ದಾರೆ.
ಹಲಾಲ್ ಅಭಿಯಾನದ ಮೂಲಕ ಜಾಗೃತಿ ಮೂಡಿಸುವ ಕೆಲಸ ಯಶಸ್ವಿಯಾಗಿದೆ. ಈಗ ಅಕ್ಷಯ ತೃತೀಯ ಸಂದರ್ಭದಲ್ಲಿ ಈ ಅಭಿಯಾನ. ರಾಜ್ಯದಲ್ಲಿ ಕೇರಳ ಮೂಲದ ಮುಸ್ಲಿಂರ ಚಿನ್ನಾಭರಣ ಅಂಗಡಿಗಳಿವೆ. ಹಿಂದೂಗಳು ಅಲ್ಲಿ ಬಂಗಾರ ಖರೀದಿ ಮಾಡಬೇಡಿ ಎಂದು ಆಗ್ರಹಿಸಿದರು.
ಕೇರಳದಲ್ಲಿ 800 ಹಿಂದೂಗಳ ಕೊಲೆಯಾಗಿದೆ. ನೀವು ಅಲ್ಲಿ ಖರೀದಿ ಮಾಡಿದ್ರೆ ಅದರ ಲಾಭ ಕೇರಳದ ಮುಸ್ಲಿಂ ಸಂಘಟನೆಗಳಿಗೆ ಹೋಗುತ್ತೆ. ಹಿಂದೂಗಳ ಕೊಲೆ ಆಗುತ್ತಿದೆ. ದೌರ್ಜನ್ಯ ಆಗುತ್ತಿದೆ. ಲವ್ ಜಿಹಾದ್ ಆಗುತ್ತಿದೆ. 12 ಸಾವಿರ ಹುಡುಗಿಯರನ್ನ ಮುಸ್ಲಿಂ ಮತಾಂತರ ಮಾಡಿದ್ದಾರೆ. ನೀವು ಅವರ ಅಂಗಡಿಯಲ್ಲಿ ಬಂಗಾರ ಖರೀದಿ ಮಾಡಿದ್ರೆ ಅದೆಲ್ಲ ದುಡ್ಡು ನಮ್ಮ ತಲೆ ಮೇಲೆ ಚಪ್ಪಡಿ ಎಳೆದುಕೊಂಡಂತಾಗುತ್ತದೆ. ಹೀಗಾಗಿ ಅಕ್ಷಯ ತೃತೀಯಕ್ಕೆ ಹಿಂದೂ ಜುವೇಲರ್ಸ್ ಕಡೆಗೆ ಖರೀದಿ ಮಾಡಿ ಎಂದು ಮುತಾಲಿಕ್ ಮನವಿ ಮಾಡಿದರು.