ಮನೆ ರಾಜ್ಯ 100 ಅಡಿ ತಲುಪಿದ ಕೆ.ಆರ್.ಎಸ್ ಅಣೆಕಟ್ಟೆ

100 ಅಡಿ ತಲುಪಿದ ಕೆ.ಆರ್.ಎಸ್ ಅಣೆಕಟ್ಟೆ

0

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಅಲ್ಪ ಮಳೆಯಾದ ಹಿನ್ನಲೆ ಕೆ.ಆರ್. ಎಸ್ ಡ್ಯಾಂನ ಒಳ ಹರಿವು ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ.

ಇಂದು ಡ್ಯಾಂಗೆ 9052 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಡ್ಯಾಂನಿಂದ 1482 ಕ್ಯೂಸೆಕ್ ಹೊರಹರಿವು ಇದೆ. ನಿನ್ನೆ 99.54 ಅಡಿ ನೀರಿನ ಮಟ್ಟವಿದ್ದು, ಇಂದು 100.36 ಅಡಿಗೆ ನೀರಿನ ಮಟ್ಟ ಏರಿಕೆಯಾಗಿದೆ. 49.542 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ ಸದ್ಯ 23.095 ಟಿಎಂಸಿ ನೀರು ಸಂಗ್ರಹವಾಗಿದೆ.

ಅತ್ತ ತಮಿಳುನಾಡಿಗೆ ನೀರು ಬಿಡುಗಡೆ ಮುಂದುವರೆದಿದ್ದು, ಕೆ.ಆರ್.ಎಸ್ ಜೊತೆ ಕಬಿನಿ ಡ್ಯಾಂನಿಂದಲೂ ನೀರು ಬಿಡುಗಡೆ ಮಾಡಲಾಗುತ್ತಿದೆ. ಪ್ರಾಧಿಕಾರದ ಆದೇಶದಂತೆ ತಮಿಳುನಾಡಿಗೆ ಹರಿಯುತ್ತಿದೆ 3000 ಕ್ಯೂಸೆಕ್ ನೀರನ್ನು ಹರಿಬಿಡಲಾಗುತ್ತಿದೆ.

ಕೆ.ಆರ್.ಎಸ್ ಡ್ಯಾಂ ನ ನೀರಿನ ಮಟ್ಟ.

ಗರಿಷ್ಠ ಮಟ್ಟ- 124.80 ಅಡಿ

ಇಂದಿನ ಮಟ್ಟ- 100.36 ಅಡಿ

ಗರಿಷ್ಠ ಸಾಮರ್ಥ್ಯ- 49.452 ಟಿಎಂಸಿ

ಇಂದಿನ ಸಾಮರ್ಥ್ಯ- 23.095 ಟಿಎಂಸಿ

ಒಳಹರಿವು- 9052 ಕ್ಯೂಸೆಕ್

ಹೊರಹರಿವು- 1482 ಕ್ಯೂಸೆಕ್.