ಮನೆ ಸ್ಥಳೀಯ ಶನಿವಾರ ನಿನಾದ ಗೃಹ ಸಂಗೀತ ಕಚೇರಿ

ಶನಿವಾರ ನಿನಾದ ಗೃಹ ಸಂಗೀತ ಕಚೇರಿ

0

ಮೈಸೂರು:  ‘ನಿನಾದ ಗೃಹ ಸಂಗೀತ’ ಮೈಸೂರಿನಲ್ಲಿ ಪ್ರತಿ ತಿಂಗಳು ಆಯೋಜಿಸುವ ಸಂಗೀತ ಕಛೇರಿ ಸರಣಿಯ 9ನೆಯ  ಕಾರ್ಯಕ್ರಮ ಶನಿವಾರ ಅಕ್ಟೋಬರ್ 7  ಸಂಜೆ 6 ಗಂಟೆಗೆ ಮೈಸೂರಿನ ಕೇರ್ಗಳ್ಳಿ ರಿಷಭ್ ಸಿದ್ಧಿ ಲೇಔಟ್ ‘ನಿನಾದ’ , #37 ರಲ್ಲಿ ನಡೆಯಲಿದೆ.

ರಂಜನಿ ಮೆಮೋರಿಯಲ್ ಟ್ರಸ್ಟ್ ನಡೆಸುವ ಈ ಕಾರ್ಯಕ್ರಮದಲ್ಲಿ ಈ ಬಾರಿ ಆಯುಶ್ ಮೊರೊನಿ ಅವರಿಂದ ಸಿತಾರ್ ವಾದನ ನಡೆಯಲಿದೆ. 

ಕಲಾವಿದ  ಆಯುಶ್ ಮೊರೊನಿ ಕಿರು  ಪರಿಚಯ

ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್  ಆಫ್ ಸೈನ್ಸ್ ನಲ್ಲಿ  ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರರಾಗಿರುವ ಆಯುಶ್ ಮೊರೊನಿ ಅವರು  ಶ್ರೀಮಂತ ಸಂಗೀತ ಸಂಪ್ರದಾಯದ ಕುಟುಂಬದಲ್ಲಿ ಜನಿಸಿದರು. ಅವರ ಅಜ್ಜ ಪಂ. ಗೋಪಾಲ್ ಮೊರೊನಿ ಗ್ವಾಲಿಯರ್ ಘರಾನಾದ ಪ್ರಸಿದ್ಧ ಗಾಯಕರಾಗಿದ್ದರು. ಆಯುಶ್ ಅವರು ಚಿಕ್ಕ ವಯಸ್ಸಿನಲ್ಲೇ ತಮ್ಮ ತಂದೆ, ಖ್ಯಾತ ಸಿತಾರ್ ವಾದಕ ಪಂ. ಅರುಣ್ ಮೊರೊನಿ ಅವರಲ್ಲಿ ಸಿತಾರ್ ಕಲಿಕೆಯನ್ನು ಆರಂಭಿಸಿದರು. ಪಂ.ಅರುಣ್ ಅವರು  ಹೆಸರಾಂತ ದ್ರುಪದ್ ಗಾಯಕ ಉಸ್ತಾದ್ ಜಿಯಾ ಫರಿದ್ದುದಿನ್ ಡಾಗರ್ ಮತ್ತು ಇಮ್ದಾದ್‌ಖಾನಿ ಘರಾಣೆಯ ಹೆಸರಾಂತ ಸಂಗೀತಗಾರರಾದ ಪಂ. ಭೀಮಲೇಂದು ಮುಖರ್ಜಿ ಅವರ ಶಿಷ್ಯರು.

ಆಯುಶ್ ಅವರು ಆಲ್ ಇಂಡಿಯಾ ರೇಡಿಯೊದ “ಎ” ದರ್ಜೆಯ ಕಲಾವಿದರು. ಜೊತೆಗೆ ಅವರು  ಆಲ್ ಇಂಡಿಯಾ ರೇಡಿಯೋ ಸಂಗೀತ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಪಡೆದವರು. ಆಯುಶ್ ದೇಶದ ಅನೇಕ ಪ್ರತಿಷ್ಠಿತ ಸಮ್ಮೇಳನಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಈ ಹೆಮ್ಮೆಯ ಕಲಾವಿದ ಅಮೆಜಾನ್ ಇಂಡಿಯಾ ದಲ್ಲಿ ಮೆಷಿನ್ ಲರ್ನಿಂಗ್ ಸೈಂಟಿಸ್ಟ್ ಆಗಿ ಸೇವಾ ನಿರತರಾಗಿದ್ದಾರೆ. ಆಯುಶ್ ಅವರಿಗೆ ತಬಲಾದಲ್ಲಿ ಯುವ ಪೀಳಿಗೆಯ ಅತ್ಯಂತ ಪ್ರತಿಭಾವಂತ ಮತ್ತು ಹೆಚ್ಚು ಬೇಡಿಕೆಯಿರುವ ತಬಲಾ ವಾದಕರಾದ ಬೆಂಗಳೂರಿನ ರೂಪಕ್ ಕಲ್ಲೂರ್ಕರ್ ಸಾಥ್ ನೀಡಲಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ  9449676014ನ್ನು ಸಂಪರ್ಕಿಸಬಹುದು.