ಮೈಸೂರು: ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಅಕ್ಟೋಬರ್ 8 ರವರೆಗೆ 69ನೇ ವನ್ಯಜೀವಿ ಸಪ್ತಹ ಅಂಗವಾಗಿ ಮೃಗಾಲಯದ ವತಿಯಿಂದ ನಡೆಸಲಾಗುವ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಅಕ್ಟೋಬರ್ 4 ರಂದು ವಿಶ್ವದ ಎಲ್ಲಾ ಮೃಗಾಲಯಗಳು ಅಂತರರಾಷ್ಟ್ರೀಯ ಮೃಗಾಲಯ ಪ್ರಾಣಿ ಪಾಲಕರ ದಿನಾಚರಣೆ ಆಚರಿಸಲಿದ್ದು, ಇದರ ಅಂಗವಾಗಿ ಮೈಸೂರು ಮೃಗಾಲಯವು ಮೃಗಾಲಯ ಪ್ರಾಣಿ ಪಾಲಕರಿಗೆ ಆಟೋಟ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಹಾಗೂ ಎಲ್ಲಾ ಪ್ರಾಣಿ ಪಾಲಕರು ರಂಗನತಿಟ್ಟು ಪಕ್ಷಿಧಾಮಕ್ಕೆ ಭೇಟಿ ನೀಡಲಿದ್ದಾರೆ.
ಅಕ್ಟೋಬರ್ 5 ಮತ್ತು 6 ರಂದು (ಎರಡು ದಿನ) ಬೆಳಗ್ಗೆ 07 ರಿಂದ 8.30 ಗಂಟೆಯವರೆಗೆ ಕಾರಂಜಿ ಪ್ರಕೃತಿ ಉದ್ಯಾನವನದಲ್ಲಿ ಪ್ರಕೃತಿ ನಡಿಗೆ ಹಾಗೂ ಜೀವವೈವಿಧ್ಯತೆಯನ್ನು ತಿಳಿದುಕೊಳ್ಳುವ ಚಟುವಟಿಕೆಯನ್ನು ಆಯೋಜಿಸಲಾಗಿದೆ. ಆಸಕ್ತಿಯುಳ್ಳವರು https://form.le/56UMcedJLNDUzsWl7 ಲಿಂಕ್‌ನಲ್ಲಿ ಗೂಗಲ್ ಪಾರಂ ಭರ್ತಿಮಾಡಿ ಅ.4 ಸಂಜೆ 5.30 ರೊಳಗೆ ಸಲ್ಲಿಸಬಹುದು.
ಅಕ್ಟೋಬರ್ 7ರಂದು ಬೆಳಗ್ಗೆ 10 ಗಂಟೆಯಿAದ 12 ಗಂಟೆಯವರೆಗೆ 8 ರಿಂದ 12 ನೇ ತರಗತಿಯ ಶಾಲಾ-ಕಾಲೇಜು ಮಕ್ಕಳಿಗೆ ಹವಾಮಾನ ಬದಲಾವಣೆ ಹಾಗೂ ವನ್ಯಜೀವಿಗಳ ಮೇಲೆ ಅದರ ಪ್ರಭಾವ ಎಂಬುವ ವಿಚಾರಗಳ ಕುರಿತು ಪ್ರಬಂಧ ಹಾಗೂ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಆಸಕ್ತಿಯುಳ್ಳವರು https://form.le/56UMcedJLNDUzsWl7 ಲಿಂಕ್ ನಲ್ಲಿ ಗೂಗಲ್ ಪಾರಂ ಭರ್ತಿಮಾಡಿ ಅ.6 ಸಂಜೆ 5.30 ರೊಳಗೆ ಸಲ್ಲಿಸಬಹುದು.
ಸ್ಪರ್ಧೆಯಲ್ಲಿನ ವಿಜೇತರಿಗೆ ಅ.8 ರಂದು ಬೆಳಗ್ಗೆ 10.30 ಕ್ಕೆ ಸಮರೋಪ ಸಮಾರಂಭವನ್ನು ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಶ್ರೀ ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.