ಮಕ್ಕಳಿಗೆ ಚರ್ಮ ರೋಗಗಳು ಕೆಲವು ವಂಶಪಾರಂಪರ್ಯವಾಗಿ ಬಂದರೆ ಮತ್ತೆ ಕೆಲವು ಸೋಂಕಿನಿಂದ ಬರುತ್ತದೆ.
ಸಾಮಾನ್ಯವಾಗಿ ಕಂಡುಬರುವ ಚರ್ಮರೋಗಗಳು :
1.ಸೋಂಕಿನಿಂದ ಬರುವಂತಹವು
2.ಎಗ್ಜಿಮಾ
3. ಅರ್ಟಿಕೆರಿಯಾ
4. ಪರ್ಪೂರಾ
5.ಡ್ರಗ್ ರಿಯಾಕ್ಷನ್
6.ಕೊಲ್ಲಾಜಲ್ ಮಾಸ್ಕ್ಯುಲಾರ್ ಡಿಸಾರ್ಡರ್ಸ್
7. ಪಾಪ್ಯುಲೊ ಸ್ಕಾಮಸ್ ಡಿಸಾರ್ಡರ್ಸ್
8.ಕರೆಟಿನೈಜೇಷನ್ ಡಿಸಾರ್ಡರ್ಸ್
9.ಪಿಗ್ಮಂಟೇಷನ್ ಡಿಸಾರ್ಡರ್ಸ್
10.ಬುಲ್ಲಸ್ ಡಿಸಾರ್ಡರ್ಸ್
11. ಅಪೆಂಡಿಜೆಯಲ್ ಡಿಸಾರ್ಡರ್ಸ್
12.ಮ್ಯೂಕೋಜೆಲ್
13.ಟ್ಯೂಮರ್
14.ಜೆನಿಡಿಕ್ ಡಿಸಾರ್ಡರ್ಸ್
15.ಪ್ಯಾರಾಸೈಟಿಕ್ ಇನ್ಫೆಕ್ಷನ್
ಇಂಪೆಂಡಿಗೊ :
ಸ್ಟೆಫಲೋಕೋಕೈ, ಸ್ಟ್ರೇಪ್ಟೊಕೋಕೈ ಸೊಂಕಿನಿಂದ ಈ ಚರ್ಮರೋಗ ಬರುತ್ತದೆ. ಮೈ ಮೇಲೆ ಕೀವು ಗುಳ್ಳೆಗಳೇಳುತ್ತದೆ. ಇವು ಹೊಡೆದು ದ್ರವ ಸುರಿಯುತ್ತದೆ. ಈ ದ್ರವದ ಹಳದಿ ಬಣ್ಣದಲ್ಲಿರುತ್ತದೆ. ಇಂಪೆಂಡಿಗೋ ಕಿವುಗುಳ್ಳೆಗಳು ಹೆಚ್ಚಾಗಿ ಮುಖದ ಮೇಲೆ ಬರುತ್ತದೆ. ಇದೆ ಕೀವು ಅಂಟಿಕೊಳ್ಳುವುದರಿಂದ ಇರರರಿಗೂ ಈ ರೋಗ ಬರುತ್ತದೆ. ಈ ಸೋಂಕಿನಿಂದ ಎಕ್ಯೂಟ್ ಗ್ಲೋಮರ್ ನಲ್ಲಿ ನೆಫ್ರೈಟಿಸ್ ಕಿಡ್ನಿ ರೋಗ ಕೂಡ ಬರಬಹುದು. ಹಾಗಾಗಿ ಇದಕ್ಕೆ ಸೂಕ್ತವಾದ ಆಂಟಿಬಯಾಟಿಕ್ಸ್ ನಿಂದ ಚಿಕಿತ್ಸೆ ಮಾಡಬೇಕು. ಎರಿತ್ರೋಮೈಸಿಸ್, ಪೆನ್ಸಿಲಿನ್, ಇದಕ್ಕೆ ಸೂಕ್ತವಾಗಿ ಕೆಲಸ ಮಾಡುತ್ತವೆ. ಗುಳ್ಳೆಗಳ ಮೇಲೆ ನಿಯೋಮೈಸಿನ್, ಪ್ಯೂಸಿಡಿಕ್ ಆಸಿಡ್, ಬಾಸಿಟ್ರೇಸಿನ್ ಆಯಿಂಟ್ ಮೆಂಟ್ ಗಳನ್ನು ಲೇಪಿಸಬೇಕು.
ಫರನ್ ಕ್ಲೋಸಿನ್ (ಬಾಯಿಲ್ಸ್) :
ಇದು ಕೂದಲ ಬುಡದಲ್ಲಿ ಬರುತ್ತದೆ. ಇದಕ್ಕೆ ಸೆಫಿಲೋಕೋಕಸ್ ಬ್ಯಾಕ್ಟೀರಿಯಾ ಕಾರಣ. ಇವು ಒಡೆದು ಕೀವುಬರುತ್ತದೆ. ಈ ಕೀವುಗಡ್ಡೆಗಳು ಬಂದಾಗ ಜ್ವರ ಬರುತ್ತದೆ. ಸರಿಯಾದ ಆಂಟಿಬಯೋಟಿಕ್ ಕ್ರೀಮ್ ಬಳಸಿದರೆ ಫರನ್ ಕ್ಲೋಸಿನ್ ವಾಸಿಯಾಗುತ್ತದೆ.
ಎಟೋಪಿಕ್ ಎಗ್ಜಿಮ :
ಈ ಚರ್ಮರೋಗ ಆರು ತಿಂಗಳ ವಯಸ್ಸಿನಲ್ಲಿ ಇಲ್ಲವೇ ಅದಕ್ಕಿಂತ ಮೊದಲೇ ಬರುತ್ತದೆ. ಎಟೋಪಿಕ್ ಎಗ್ಜಿಮ ಹೆಚ್ಚಾಗಿ ಮುಖದ ಮೇಲೆ ಬರುತ್ತದೆ. ಇದು ಬಂದ ಮಕ್ಕಳನ್ನು ಶುಚಿಯಾಗಿಟ್ಟುಕೊಳ್ಳಬೇಕು. ಆಂಟಿ ಅಲರ್ಜಿಗುಳ್ಳೆಗಳನ್ನು ಕೊಡಬೇಕು. ಸ್ಥಿರಾಯಿಡ್ ಆಯಿಂಟ್ ಮೆಂಟನ್ನು ಲೇಪಿಸಬೇಕು.
ಕಜ್ಜಿ :
ಕಜ್ಜಿ ಮಕ್ಕಳಿಗೆ ಹೆಚ್ಚಾಗಿ ಬರುತ್ತದೆ. ವ್ಯಕ್ತಿಗತವಾಗಿ ಶುಭ್ರಾತೆಯನ್ನು ಪಾಲಿಸದಿದ್ದರೆ ಇದರ ಹಾವಳಿ ಹೆಚ್ಚು. ಕಜ್ಜಿ ಬಂದಾಗ ಮಗುವಿಗೆ ಪ್ಯಾರಾಮಿಥ್ರಿನ್ 5% ಕ್ರೀಮನ್ನು ರಾತ್ರಿ ಸಮಯದಲ್ಲಿ ಮೈಗೆಲ್ಲ ಬಳಿದು, ಬೆಳಿಗ್ಗೆ ಸ್ನಾನ ಮಾಡಬೇಕು. ಸಾಮಾನ್ಯವಾಗಿ ಒಂದು ಸಾರಿ ಬಳದರೆ ಕಜ್ಜಿ ಕಡಿಮೆ ಆಗುತ್ತದೆ. ಕಜ್ಜಿ ಬಂದ ಕೆಲವರಿಗೆ ಬ್ಯಾಕ್ಟೀರಿಯಾ ಸೋಂಕು ಜೊತೆಗೂಡಿ ಕಿವು ಗುಳ್ಳೆಗಳೆತ್ತದೆ. ಇಂಥಹವರಿಗೆ ಆಂಟಿಬಯಾಟಿಕ್ ಔಷದಿ ಬಳಸಬೇಕು. ಮನೆಯಲ್ಲಿ ಒಬ್ಬರಿಗೆ ಕಜ್ಜಿ ಬಂದಿದ್ದರೆ ಉಳಿದವರು ಕಜ್ಜಿ ಇಲ್ಲದಿದ್ದರೂ ಮೇಲಿನ ಔಷಧಿ ಬಳಸಬೇಕು.
ನ್ಯಾಪ್ಕಿನ್ ಡೆರ್ಮಟೈಟಿಸ್ :
ಮಕ್ಕಳಿಗೆ ಡೈಪರ್ ಬಳಸುವುದರಿಂದ ಜನನೇಂದ್ರಿಯ ಮತ್ತು ತೊಡೆಗಳ ಹತ್ತಿರ ಕೆಂಪಗೆ ಸುಟ್ಟಂತಾಗಿ, ನವೆಯಾಗುತ್ತದೆ. ಇದನ್ನೇ ನ್ಯಾಪ್ ಕಿನ್ ಡೆರ್ಮಟೈಟಿಸ್ ಎನ್ನುವುದು. ಇಂತಹ ಪ್ರಸಂಗದಲ್ಲಿ ಡೈಪರ್ ಬಳಸದಿರುವುದು ಒಳ್ಳೆಯ ಕ್ರಮ. ರಾಷ್ ಬಂದ ಭಾಗಕ್ಕೆ ಮೈಲ್ಡ್ ಸ್ಥಿರಾಯ್ಡ್ ಅಂಡ್ ಆಯೊಂಟ್ ಮೆಂಟ್ ಬಳಸಬೇಕು. ಆ ಭಾಗಕ್ಕೆ ಗಾಳಿಯಾಡುವಂತೆ ನೋಡಿಕೊಳ್ಳಬೇಕು.














