ಮನೆ ಆರೋಗ್ಯ ತಾರತಮ್ಯ ನಿವಾರಿಸುವಂತೆ ಆಗ್ರಹಿಸಿ ಬೆಂಗಳೂರು ದೂರದರ್ಶನದ ಮುಂದೆ ಪ್ರತಿಭಟನೆ ನಡೆಸಿದ ಪ್ರಸಾರ ಭಾರತಿ ಉದ್ಯೋಗಿಗಳು

ತಾರತಮ್ಯ ನಿವಾರಿಸುವಂತೆ ಆಗ್ರಹಿಸಿ ಬೆಂಗಳೂರು ದೂರದರ್ಶನದ ಮುಂದೆ ಪ್ರತಿಭಟನೆ ನಡೆಸಿದ ಪ್ರಸಾರ ಭಾರತಿ ಉದ್ಯೋಗಿಗಳು

0

ಬೆಂಗಳೂರು, ಅ, 5; ಕಳೆದ 2007 ರಲ್ಲಿ ನೇಮಕಗೊಂಡ ಉದ್ಯೋಗಿಗಳಲ್ಲಿ ಉಂಟಾಗುತ್ತಿರುವ ತಾರತಮ್ಯವನ್ನು ಪ್ರತಿಭಟಿಸಿ ಪ್ರಸಾರ ಭಾರತಿ ಉದ್ಯೋಗಿಗಳು ದೂರದರ್ಶನ ಚಂದನವಾಹಿನಿಯ ಮುಂಭಾಗ ಇಂದು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದರು.

ಆಕಾಶವಾಣಿ ಮತ್ತು ದೂರದರ್ಶನದ ಎಲ್ಲಾ ಪ್ರಮುಖ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಯಿತು. ಸಿಬ್ಬಂದಿಗೆ ಸಿಜಿಎಚ್ಎಸ್ ಸೌಲಭ್ಯಗಳು, ಎನ್.ಪಿ.ಎಸ್ ಯೋಜನೆಯಡಿ ಕುಟುಂಬ ಪಿಂಚಣಿ, ಸಮಾನ ಬಡ್ತಿ ಅವಕಾಶಗಳು, ಸಿಜಿ ನೌಕರರಿಗೆ ಸಮಾನವಾದ ವೇತನ ಶ್ರೇಣಿ, ಸಿಜಿಇಜಿಐಎಸ್ ಗುಂಪು ವಿಮೆ ಮತ್ತಿತರ ತಾರತಮ್ಯ ನಿವಾರಿಸುವಂತೆ ಉದ್ಯೋಗಿಗಳು ಒತ್ತಾಯಿಸಿದರು.

ಮನೆ ನಿರ್ಮಾಣ ಮುಂಗಡದ ನಿಬಂಧನೆಗಳನ್ನು ನಿವಾರಿಸುವ, ಇಎ ಮತ್ತು ತಂತ್ರಜ್ಞರ ಮುಂದಿನ ಬಡ್ತಿ ಹುದ್ದೆಗೆ ನೇಮಕಾತಿ ನಿಯಮಗಳನ್ನು ರೂಪಿಸುವ, ಎಇ ಎಲ್.ಡಿ.ಸಿ ಪರೀಕ್ಷೆಯಲ್ಲಿ ಎಂಜಿನಿಯರಿಂಗ್ ಸಹಾಯಕರಿಗೆ ಅವಕಾಶ ನೀಡಬೇಕು ಎಂದು ಉದ್ಯೋಗಿಗಳು ಈ ಸಂಬಂಧ ಪ್ರಸಾರ ಭಾರತಿ ಮುಖ್ಯಸ್ಥರಿಗೆ ಮನವಿ ಸಲ್ಲಿಸಿದರು.