ಮನೆ ರಾಜ್ಯ ಅ. 9ಕ್ಕೆ ರತ್ನ ಖಚಿತ ಸಿಂಹಾಸನ ಜೋಡಣೆ: ನವತಾತ್ರಿ ಕಾರ್ಯಕ್ರಮಗಳಿಗೆ ಅರಮನೆಯಲ್ಲಿ ಸಕಲ ಸಿದ್ಧತೆ

ಅ. 9ಕ್ಕೆ ರತ್ನ ಖಚಿತ ಸಿಂಹಾಸನ ಜೋಡಣೆ: ನವತಾತ್ರಿ ಕಾರ್ಯಕ್ರಮಗಳಿಗೆ ಅರಮನೆಯಲ್ಲಿ ಸಕಲ ಸಿದ್ಧತೆ

0

ಮೈಸೂರು : ನಾಡ ಹಬ್ಬದ ದಸರಾ ಮಹೋತ್ಸವಕ್ಕೆ ದಿನಗಳ ದಿನಗಣನೆ ಆರಂಭವಾಗಿದ್ದು, ಮೈಸೂರು ಅರಮನೆಯಲ್ಲಿ ನಡೆಯುವ ಖಾಸಗಿ ದರ್ಬಾರ್ ಸೇರಿದಂತೆ ಇನ್ನಿತರ ದಸರಾ ಕಾರ್ಯಕ್ರಮಗಳಿಗೆ ಸಕಲ ಸಿದ್ಧತೆ ನಡೆಯುತ್ತಿದೆ.

ಅಕ್ಟೋಬರ್ 9 ರಂದು ಅಂಬಾವಿಲಾಸ ಅರಮನೆಯಲ್ಲಿ ರತ್ನ ಖಚಿತ ಸಿಂಹಾಸನ ಜೋಡಣಾ ಕಾರ್ಯನಡೆಯಲಿದೆ. ಅಂದು ಬೆಳಗ್ಗೆ 7 ಗಂಟೆಗೆ ನವಗ್ರಹವನ್ನು ಸೇರಿದಂತಹ ಹಲವು ಪೂಜಾ ವಿಧಿ ವಿಧಾನಗಳು ನೆರವೇರಲಿದ್ದು, ಬೆಳಗ್ಗೆ 10:05 ರಿಂದ 10:35 ರ ಒಳಗೆ ಸಿಂಹಾಸನ ಜೋಡಣೆ ಕಾರ್ಯ ನಡೆಯಲಿದೆ. ಅಂದು ಸಿಂಹಾಸನ ಜೋಡಣೆ ಮಾಡುವವರು ರಾಜವಂಶಸ್ಥರು ಮತ್ತು ಸಿಬ್ಬಂದಿ ಹೊರತು ಪಡಿಸಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಅ. 15 ರಂದು ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಮೈಸೂರು ದಸರಾಗೆ ಚಾಲನೆ ದೊರೆಯಲಿದ್ದು, ಇತ್ತ ಅರಮನೆಯಲ್ಲಿ ಅಂದು ಬೆಳೆಗೆ 6:00 ಗಂಟೆಯಿಂದ 6.25ರ ಶುಭ ಮುಹೂರ್ತದಲ್ಲಿ ಸಿಂಹಾಸನ ಜೋಡಣೆ ನೆರವೇರಲಿದೆ. ಬೆಳಿಗ್ಗೆ 7.05 ರಿಂದ 7:45 ಶುಭ ಲಗ್ನದಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ  ಚಾಮರಾಜ ಒಡೆಯರ್ ಮತ್ತು ಯದುವೀರ್ ಪತ್ನಿ ತ್ರಿಷಿಕಾ  ಕುಮಾರಿ ಅವರಿಗೆ ಕಂಕಣ ಧಾರಣೆ ಮಾಡಲಾಗುತ್ತದೆ.

ಬೆಳಗ್ಗೆ 9.45ಕ್ಕೆ ಅರಮನೆ ಸವಾರಿ ತೊಟ್ಟಿ ಹಾಗೂ ಗೋಶಾಲೆಗೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಆಗಮಿಸಲಿದ್ದು, ಬೆಳಿಗ್ಗೆ 10.15ಕ್ಕೆ ಕಳಶಪೂಜೆ, ಸಿಂಹಾಸನ ಪೂಜೆ ನೆರವೇರಿಸಲಿದೆ. ಬೆಳಗ್ಗೆ 11:30 ರಿಂದ 11.50ಕ್ಕೆ ರಾಜವಂಶಸ್ಥ ಯಾದವೀರ್ ಅವರು ಸಿಂಹಾಸನ ವೇರಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಮಧ್ಯಾಹ್ನ 1:45 ರಿಂದ 2.05ರ ವೇಳೆಯಲ್ಲಿ ಚಾಮುಂಡೇಶ್ವರಿ ವಿಗ್ರಹವನ್ನು ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ರವಾನೆ ಮಾಡಲಿದ್ದಾರೆ.

ಅ. 20ರಂದು ಬೆಳಿಗ್ಗೆ 10.05 ರಿಂದ 10.25 ರವರೆಗೆ ಸರಸ್ವತಿ ಪೂಜೆ, ಅ. 21 ರಂದು ಕಾಳರಾತ್ರಿ ಪೂಜೆ, ಅ.22 ರಂದು ದುರ್ಗಾಷ್ಟಮಿ, ಅ. 23ರಂದು ನವಮಿಆಚರಣೆ ನಡೆಯಲಿದೆ. ಬೆಳಗ್ಗೆ 5:30ಕ್ಕೆ ಚಂಡಿ ಹೋಮದೊಂದಿಗೆ ಪೂಜೆ ಆರಂಭವಾಗಲಿದೆ.

ಬೆಳಗ್ಗೆ 5:30ಕ್ಕೆ ಆನೆ ಬಾಗಿಲಿಗೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಆಗಮಿಸಲಿದ್ದು, ಬೆಳಗ್ಗೆ 6.05ರಿಂದ 6.15ರೊಳಗೆ ಖಾಸಾ ಆಯುಧಗಳನ್ನು ಅರಮನೆ ಕೋಡಿಸೋಮೇಶ್ವರ ದೇಗುಲಕ್ಕೆ ರವಾನೆ ಮಾಡಲಾಗುತ್ತದೆ. ನಂತರ ಬೆಳಗ್ಗೆ 9.30ಕ್ಕೆ ಚಂಡಿ ಹೋಮ ಪೂರ್ಣಾಹುತಿ ನಡೆಯಲಿದೆ. ಬೆಳಗ್ಗೆ 11:45 ಕ್ಕೆ ಕಲ್ಯಾಣ ಮಂಟಪಕ್ಕೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಆಗಮಿಸಲಿದೆ. ಮಧ್ಯಾಹ್ನ 12:20ಕ್ಕೆ ಪೂಜಾ ಆರಂಭವಾಗಲಿದ್ದು, 12:45 ರವರೆಗೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಂದ ಆಯುಧಗಳಿಗೆ ಪೂಜೆ ನೆರವೇರಲಿದೆ.

ಸಂಜೆ ಖಾಸಗಿ ದರ್ಬಾರ್ ನಂತರ ಸಿಂಹ ವಿಸರ್ಜನೆಯಾಗಲಿದೆ. ಅ. 24ರಂದು ಬುಧವಾರ ವಿಜಯದಶಮಿ ಆಚರಣೆ ನಡೆಯಲಿದ್ದು, ಬೆಳಗ್ಗೆ 9:45 ಕ್ಕೆ ಅರಮನೆ ಆನೆ ಬಾಗಿಲಿಗೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟ ಹಸು ಆಗಮಿಸಲಿದೆ. ಕಲ್ಯಾಣ ಮಂಟಪದಲ್ಲಿ ಖಾಸಾ ಆಯುಧಗಳಿಗೆ ಪೂಜೆ, ಬೆಳಗ್ಗೆ 11 ರಿಂದ 11:40 ರವರೆಗೆ ವಿಜಯದಶಮಿ ಮೆರವಣಿಗೆ. ಅರಮನೆ ಆನೆ ಬಾಗಿಲಿನಿಂದ ಅರಮನೆ ಭುವನೇಶ್ವರಿ ದೇಗುಲದವರೆಗೂ ಮೆರವಣಿಗೆ, ಭುವನೇಶ್ವರಿ ದೇಗುಲದಲ್ಲಿ ಶಮಿ ಪೂಜೆ ನಡೆಯಲಿದೆ. ನ 8ರಂದು ಸಿಂಹಾಸನವನ್ನು ವಿಸರ್ಜಿಸಿ ಭದ್ರತಾ ಕೊಠಡಿಗೆ ರವಾನೆ ಮಾಡಲಾಗುತ್ತದೆ.