ಮನೆ ಜ್ಯೋತಿಷ್ಯ ಸೌರಮಂಡಲದ ಗ್ರಹಗಳು

ಸೌರಮಂಡಲದ ಗ್ರಹಗಳು

0

ಪ್ರಾಚೀನ ಕಾಲದಿಂದಲೂ ಸೌರಮಂಡಲದಲ್ಲಿ ಎಷ್ಟು ಗ್ರಹಗಳಿವೆ? ಎಷ್ಟು ಉಪಗ್ರಹಗಳಿವೆ? ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ನಡೆದೇ ಇದೆ.  ಭೂಮಿಯ ಸನಿಹದಲ್ಲಿ ಯಾವ ಗ್ರಹಗಳಿವೆ ಎಂಬುದನ್ನು ತಿಳಿಯಲು ವಿದ್ವಾಂಸರು ಶೋಧನೆ ನಡೆಸಿದ್ದಾರೆ.

ʼಗ್ರಹʼ ಎನ್ನುವ ಶಬ್ದದ ಪರಿಭಾಷೆಯನ್ನು ಈ ರೀತಿ ಮಾಡಿದ್ದಾರೆ : “ನಿಶ್ಚಿತ ಕಕ್ಷೆಯಲ್ಲಿ ತಿರುಗುತ್ತ ಸೂರ್ಯನನ್ನು ಕೇಂದ್ರವನ್ನಾಗಿಸಿಕೊಂಡು, ಪೂರ್ವಭಿಮುಖವಾಗಿ ನಿಶ್ಚಿತ ಕಾಲದಲ್ಲಿ ಸುತ್ತುತ್ತಿರುವ ಹೊಳೆಯುವ ಪಿಂಡ” ಎಂದು ಗ್ರಹದ ವಿವರಣೆ ನೀಡಿದ್ದಾರೆ.

ನಕ್ಷತ್ರ ಪಟ್ಟಿಯ ಅಡಿಯಲ್ಲಿಯೇ ಎಲ್ಲ ಗ್ರಹಗಳಿದ್ದು, ಎಲ್ಲವೂ ಸೂರ್ಯನನ್ನೇ ಸುತ್ತು ಹಾಕುವವು. 20 ಶತಮಾನಗಳವರೆಗೆ ಮಾನವನು ಅನೇಕ ಸಾಧನೆಮಾಡಿದರೂ ಇಂದಿಗೂ ಎಲ್ಲಾ ಸೇರಿ ಬ್ರಹ್ಮಾಂಡದಲ್ಲಿ ಒಟ್ಟು ಎಷ್ಟು ಆಕಾಶಕಾಯಗಳಿವೆ ಎಂಬುದನ್ನು ತಿಳಿಯಲಾಗಲಿಲ್ಲ. ಆಕಾಶವೆಂಬ ಖಾಲಿ ಜಾಗದಲ್ಲಿರುವ ಗ್ರಹ, ನಕ್ಷತ್ರ, ಉಪಗ್ರಹ, ಸೌರಮಂಡಲದ ಸಂಖ್ಯೆ ಮತ್ತು ವಿವರಣೆ ನಮ್ಮ ದೇಶದ ಪುರಾಣಗಳಲ್ಲಿ ಹಲವು ರೀತಿಯಿಂದ ವರ್ಣಿತವಾಗಿದೆ.

ಇಡೀ ಬ್ರಹ್ಮಾಂಡವು ಐದು ತತ್ವಗಳಿಂದಾದದ್ದು, ಬ್ರಹ್ಮಾಂಡದ ಒಂದು ಭಾಗದ ತಮ್ಮ ಸೌರ ಮಂಡಲದಲ್ಲಿ ಭೂಮಿಯು ಸಹ ಸೇರಿಕೊಂಡಿರುವುದು. ಭೂಮಿಯು ಎರಡು ರೀತಿಯ ಚಲನೆಯನ್ನು ಹೊಂದಿರುವುದು. ಇದು ತನ್ನ ಸುತ್ತ ತಿರುಗುತ್ತ 23 ಗಂಟೆ 56 ನಿಮಿಷಗಳಲ್ಲಿ ಒಂದು ಆವರ್ತಿ ತಿರುಗುವುದು, ಸೂರ್ಯನನ್ನು 361 ದಿವಸ ಆರು ತಾಸುಗಳಲ್ಲಿ ಒಂದು ಸುತ್ತು ಹಾಕುವುದು. ಪೃಥ್ವಿಯ ದೈನಂದಿನ ಚಲನೆಯಿಂದ ಹಗಲು ರಾತ್ರಿಗಳಾಗುತ್ತದೆ. ಭೂಮಿಯ ಸೂರ್ಯನ ಸುತ್ತ ತಿರುಗುವುದರಿಂದ ವರ್ಷ ಋತುಮಾನಗಳು ಬದಲಾಗುವವು. ಹೀಗೆ ಇದರ ಆಧಾರದಿಂದ ದಿವಸದ ಅವಧಿ 24 ಗಂಟೆ ಮತ್ತು ವರ್ಷದ ಅವಧಿ 365 ದಿನಗಳು ಎಂದು ನಿಶ್ಚಿತವಾಗಿದೆ.

ಈ ಭೂಮಂಡಲದ ಹಾಗೂ ಇತರ ಗ್ರಹಗಳ ಸ್ಥಿತಿ ಹೇಗೆ ಉಂಟಾಯಿತು ಎಂಬುದರ ಬಗ್ಗೆ ವಿಜ್ಞಾನಿಗಳು ಈ ರೀತಿ ವರ್ಣ ನೀಡಿದ್ದಾರೆ. 300 ಕೋಟಿ ವರ್ಷಗಳ ಹಿಂದೆ ಪ್ರಚಂಡ ಸೂರ್ಯನು ಆಕಾಶ ಗಂಗೆಯಲ್ಲಿ ಸ್ಥಿರವಾಗಿದ್ದನು. ಈ ಸೌರಗೋಲದಲ್ಲಿ ಜಲಜನಕ, ಹೀಲಿಯಂ, ಅಮೋನಿಯಂ ಮುಂತಾದ ಅನಿಲಗಳು ಉರಿಯುತ್ತಿದ್ದವು. ಕಾಲಂತರದಲ್ಲಿ ಇನ್ನೊಬ್ಬ ಸೂರ್ಯನು ಆ ಸೂರ್ಯನ ಪಕ್ಕದಲ್ಲಿಯೇ ಹಾದು ಹೋದಾಗ ಅಗ್ನಿಮಯವಾದ ಬಿರುಗಾಳಿ ಉಂಟಾಯಿತು.

ಆಗ ಸೂರ್ಯನಿಂದ ಎಷ್ಟೋ ಪ್ರಕಾಶದುಂಡೆಗಳು ಉದುರಿದವು ಸೂರ್ಯನ ಗುರುತ್ವಾಕರ್ಷಣ ಶಕ್ತಿಯನ್ನು ಹೊಂದಿರುವ ಕಾರಣ ಅವು ಅವನ್ನನ್ನೇ ಸುತ್ತುತ್ತಿವೆ. ಗುರುತ್ವಾಕರ್ಷಣದಿಂದಾಗಿಯೇ ಅವುಗಳ ಗತಿ ಮತ್ತು ಭ್ರಾಮಣ ಪಥ ನಿರ್ಧಾರವಾಗಿರುವುದು. ಇದೇ ರೀತಿ ಉಲ್ಕೆಗಳು, ಧೂಮಕೇತು, ಉಪಗ್ರಹಗಳು, ಚಲನಶೀಲವಾದ ಕಾಯಗಳಾಗಿವೆ. ನಮ್ಮ ಸೌರಮಂಡಲದಲ್ಲಿ ಭೂಮಿಗಿಂತ ಒಳಗಿನ ಪ್ರದೇಶದಲ್ಲಿ ಸೂರ್ಯನಿಗಿಂತ ಹತ್ತಿರವಾದ ಬುಧ, ಶುಕ್ರ, ಗ್ರಹಗಳಿವೆ. ಭೂಮಿಗಿಂತ ದೂರದ ಆವರಣದಲ್ಲಿ ಮಂಗಳ ಗುರು ಶನಿಗಳಿವೆ.

ಶನಿಗ್ರಹಕ್ಕಿಂತ ಮುಂದೆ ಇರುವ ಗ್ರಹಗಳ ಅಥವಾ 8 ಆಕಾಶ ಕಾಯಗಳ ಬಗ್ಗೆ ಗೆಲಿಲಿಯೋ ದೂರದರ್ಶಕವನ್ನು ಕಂಡುಹಿಡಿದ ನಂತರದಲ್ಲಿ ತಿಳಿಯಲು ಪ್ರಶ್ನಿಸಲಾಯಿತು. ಅಲ್ಲಿಯವರೆಗೆ ಭೂಮಿಯ ಚಂದ್ರರ ಸಂಪಾತ ಬಿಂದುಗಳನ್ನೇ ರಾಹು ಕೇಂದ್ರಗಳೆಂದು  ಹೆಸರಿಸಿದ್ದರು.  ಗೆಲಿಲಿಯೋ ದೂರದರ್ಶಕವನ್ನು ಕಂಡುಹಿಡಿದ ನಂತರ ವಿಜ್ಞಾನಿಗಳಿಗೆ, ಜ್ಯೋತಿಷ್ಯ ಆಸಕ್ತರಿಗೆ ಹಾಗೂ ಸಂಶೋಧಕರಿಗೆ ಬಾರಿ ಉಪಕಾರವಾಗಿದೆ.

ಗೃಹ, ನಕ್ಷತ್ರ ಮುಂತಾದ ಆಕಾಶ ಕಾಯಗಳ ಬಗ್ಗೆ ತಿಳಿಯುವ ಕುತೂಹಲವೇ ಗೆಲಿಲಿಯೋ ದೂರದರ್ಶಕವನ್ನು ಕಂಡುಹಿಡಿಯಲು ಪ್ರೇರಣೆ ನೀಡಿತು. ಅಲ್ಲಿಯವರೆಗೆ ವಿಶ್ವದ ಎಲ್ಲರ ಅಭಿಪ್ರಾಯಗಳು ಸಹ ಒಂದೇ ರೀತಿ ಇದ್ದವು. ದೂರ ವೀಕ್ಷಣೆಯ ಅವಕಾಶ ಉಂಟಾದಾಗ ಉಲ್ಕೆಗಳು, ಧೂಮಕೇತುಗಳು, ನಿಹಾರಿಕೆಗಳು ಮತ್ತು ಉಳಿದ ಕಾರ್ಯಗಳ ಬಗ್ಗೆ ಸುಳಿವು ಸಿಗಲಾರಂಭಿಸಿತು.

ಸರ್ ವಿಲಿಯಂ ಹರ್ಷಲ್ ಎಂಬ ಚರ್ಚಆರ್ಗನ್ ವಾದಕನು 1781ರ ಮಾರ್ಚ್ 13ರಲ್ಲಿ ಗ್ರಹ ನಕ್ಷತ್ರಗಳನ್ನು ತಿಳಿಯುವ ಪ್ರಯತ್ನ ಮಾಡಿದನು. ಒಂದು ವರ್ಷದವರೆಗೆ ನಿರೀಕ್ಷಣೆ ಮಾಡಿ ಆನಂತರ ಹರ್ಷಲ್ ಒಂದು ಗ್ರಹ ಶನಿ ಗ್ರಹದಿಂದಾಚೆ ಇದ್ದು ಸೂರ್ಯ ಮಂಡಲವನ್ನು ಸುತ್ತುತ್ತಿದೆ ಎಂದು ಘೋಷಿಸಿದನು. ಆ ಗ್ರಹಕ್ಕೆ ಮೊದಲು ಹರ್ಷಲ್ ಎಂದೆ ಇಡಲಾಯಿತು. ನಂತರ ಯುರೇನಸ್ ಎಂದು ಹರ್ಷಲ್ ಅದಕ್ಕೆ ಹೆಸರು ಕೊಟ್ಟಿದ್ದನು. ಜನಾರ್ಧನ ವಾಸಾಜಿಯವರು ಈ ಗ್ರಹಕ್ಕೆ ಪ್ರಜಾಪತಿ ಎಂದು ಹೆಸರಿಸಿದ್ದಾರೆ.

ಯುರೇನಸ್ ಗ್ರಹದ ಶೋಧನೆಯ ಅನಂತರದಲ್ಲಿ ಕೆಂಬ್ರಿಜ್ ವಿಶ್ವವಿದ್ಯಾನಿಲಯದ ಜಾನ್ ಕಾಉಚ್ ರವರು ಮತ್ತು ಜ್ಯೋತಿರ್ವಿಜ್ಞಾನಿ ಲೆವಿರಂರವರು ಯುರೇನಸ್ಗ್ರ ಗ್ರಹವು ಅನಿಯಮಿತವಾಗಿ ಚಲಿಸುವುದೆಂದು ಸ್ಪಷ್ಟಪಡಿಸಿದರು. ಬರ್ಲಿನ್ ನಿರೀಕ್ಷಣಾಲಯದ ಸಂಚಾಲಕ ಡಾ. ಗೈಲೆಯವರು 26 ಸೆಪ್ಟೆಂಬರ್ 1846ರಲ್ಲಿ ʼನೆಚ್ಚುನ್ ಎಂಬಗ್ರಹವನ್ನು ಕಂಡುಹಿಡಿದರು. ಅದನ್ನು ಜಲದೇವತೆಯೆಂದು ಯುನಾನಿ ಜನರು ಹೇಳಿದರು. ಅದನ್ನು ಭಾರತೀಯರು ಜ್ಯೋತಿರ್ ವಿಜ್ಞಾನಿಗಳು ʼವರುಣʼ ಎಂದು ಕರೆದರು.

ಈ ಎರಡೂ ಗ್ರಹಗಳ ಸಹ ಸೌರಮಂಡಲದಲ್ಲಿರುವುನ್ನು ತಿಳಿದಾಗ ಪಂಚಾಂಗದಲ್ಲಿಯೂ ಸೇರಿಕೆಯಾದವು.. 1930ರಲ್ಲಿ ಒಬ್ಬ ಯುವ ವಿಜ್ಞಾನಿ ಇನ್ನೊಂದು ಗ್ರಹವನ್ನು ಕಂಡುಹಿಡಿದನು. ಅದಕ್ಕೆ “ಎಕ್ಸ್” ಎಂದು ಹೆಸರು ಕೊಟ್ಟನು. ಅದಕ್ಕೆ ಯುನಾನಿಗಳು ʼಪ್ಲೇಟೋʼ ಎಂದು ಹೆಸರು ಕೊಟ್ಟರೆ, ಭಾರತೀಯರು ಅದನ್ನು ʼಯಮ ಎಂದು ಕರೆದರು.

ಈ ರೀತಿಯಲ್ಲಿ ಸೂರ್ಯ, ಬುಧ, ಶುಕ್ರ, ಮಂಗಳ, ಗುರು, ಶನಿ, ಯುರೇನಸ್, ನೆಪ್ಟ್ಯೂನ್, ಪ್ಲೋಟೋ ಇವುಗಳೊಂದಿಗೆ ಭೂಮಿ ಸಹ ಆಕಾಶ ಕಾಯವಾಗಿದೆ ಎಂದು ತಿಳಿಯಲಾಯಿತು. ಚಂದ್ರ ಭೂಮಿ ಉಪಗ್ರಹವೆಂದು ನಂಬಲಾಯಿತು. ಭೂಮಿಯು ಸೌರಮಂಡಲದ ಮಧ್ಯದಲ್ಲಿದ್ದು ಎಲ್ಲಾ ಗ್ರಹಗಳು ಸೂರ್ಯನ ಪ್ರಕಾಶವನ್ನು ಪ್ರತಿಫಲಿಸಿ ತಮ್ಮದೇ ಆದ ಬೇರೆ ಬೇರೆ ವಾತಾವರಣಗಳನ್ನು ಹೊಂದಿರುವುದು ಸಂಶೋಧನೆಯಿಂದ ತಿಳಿದುಬಂದಿದೆ.