ಮನೆ ದೇವಸ್ಥಾನ ವಿದುರಾಶ್ವತ್ಥ   

ವಿದುರಾಶ್ವತ್ಥ   

0

ಗೌರಿಬಿದನೂರು ತಾಲೂಕಿನಲ್ಲಿ ಬೆಂಗಳೂರಿಗೆ ಉತ್ತರದಲ್ಲಿ 85 ಕಿ.ಮೀದೂರದಲ್ಲಿ ಈ ಕ್ಷೇತ್ರವಿದೆ. ಇಲ್ಲಿ ಮಹಾಭಾರತ ಕಾಲದ ಪ್ರಸಿದ್ಧ ವ್ಯಕ್ತಿಯಾದ ವಿದುರನು ನೆಟ್ಟನೆಂದು ಹೇಳಲಾದ ಪುರಾತನವಾದ ಒಂದು ಅಶ್ವತ್ಥ ವೃಕ್ಷವಿದೆ. ಈ ವೃಕ್ಷವನ್ನು ಪೂಜಿಸಲು ಭಕ್ತರು ನಾನಾ ಕಡೆಗಳಿಂದ ಹೆಚ್ಚು ಸಂಖ್ಯೆಯನ್ನು ಬರುತ್ತಾರೆ.

Join Our Whatsapp Group

ಇಲ್ಲಿ ಚೈತ್ರ ಶುದ್ಧ ಪೂರ್ಣಿಮೆಯಂದು ರಥೋತ್ಸವವು, ಎಂಟು ದಿನಗಳ ಕಾಲ ದನಗಳ ಜಾತ್ರೆಯೂ ನಡೆಯುತ್ತದೆ. ಈ ಊರು ಉತ್ತರ ಪಿನಾಕಿನಿ ನದಿಯ ಎಡದಡದಲ್ಲಿದ್ದು ನದಿಯಲ್ಲಿ ರುದ್ರಪಾದ ಇದೆ. ಇದು ಪ್ರಸಿದ್ಧ ಯಾತ್ರಾಸ್ಥಳ.

ಸ್ವಾತಂತ್ರ್ಯ ಪೂರ್ವಕಾಲದಲ್ಲಿ ಈ ಊರು ಒಮ್ಮೆ ಚಳುವಳಿಯ ಕೇಂದ್ರವಾಗಿತ್ತು.

++++++++++++++

ಅಂಕಾಲೆ ಬೊಮ್ಮಪ್ಪನ ತೋಪು

ಗೌರಿಬಿದನೂರು ಪಶ್ಚಿಮಕ್ಕೆ ಗೌರಿಬಿದನೂರು-ಮಧುಗಿರಿ ರಸ್ತೆಯ ಎಡಗಡೆಯಲ್ಲಿ 10 ಕಿ.ಮೀ ದೂರದ ಹೊಸೂರು ಒಂದು ಗ್ರಾಮ ಇಲ್ಲಿಂದ ಈಶಾನ್ಯಕ್ಕೆ ಎರಡು ಕಿಲೋಮೀಟರ್ ದೂರದಲ್ಲಿರುವ ಮುದಗೆರೆ ಗ್ರಾಮ ಹಾಗೂ ಸಮೀಪದ ಅಂಕಾಲೆ ಬೊಮ್ಮಪ್ಪನ ತೋಪು ಕುಮುದ್ವತಿ ನದಿಯ ಎಡದಡದ ಮೇಲಿರುವವು..

ಮುದಗೆರೆಯಲ್ಲಿ ಚೆನ್ನಕೇಶವಸ್ವಾಮಿ ದೇವಾಲಯವಿದೆ. ಬೊಮ್ಮಪ್ಪನ ತೋಪು ಒಂದು ಪುಣ್ಯಕ್ಷೇತ್ರ. ಹಾಲು ಕರೆಯುವ ಹಸು ಎಮ್ಮೆಗಳಿಗೆ ಏನಾದರೂ ರೋಗ ಬಂದರೆ ಮತ್ತು ಮನೆಗಳಲ್ಲಿ ಹಾಲು, ಮೊಸರು, ತುಪ್ಪ, ಮಜ್ಜಿಗೆಗಳಿಗೆ ಇರುವೆ ಮುತ್ತಿದ್ದರೆ, ಜನರು ಬೊಮ್ಮಪ್ಪನಿಗೆ ಹರಕೆ ಮಾಡುವ ಹೊರುತ್ತಾರೆ. ಪ್ರತಿ ಸೋಮವಾರ ಇಲ್ಲಿಗೆ ನೂರಾರು ಜನ ಬಂದು ದೇವರಿಗೆ ಹಾಲು, ಮೊಸರು, ತುಪ್ಪಗಳಿಂದ ಅಭಿಷೇಕ ಮಾಡುತ್ತಾರೆ.