ಮನೆ ಮನೆ ಮದ್ದು ಕೊನ್ನಾರಿ ಗೆಡ್ಡೆ (CYPERUS ROTUDUS)

ಕೊನ್ನಾರಿ ಗೆಡ್ಡೆ (CYPERUS ROTUDUS)

0

ಜವುಗ ನೆಲ, ಗದ್ದೆ, ಬಂಜರು ಪ್ರದೇಶದ ಸಾಮಾನ್ಯ ಕಳೆ ಹುಲ್ಲು ಕೊನ್ನಾರಿ. ಇದು ನೀರಿನ ಆಸರೆ ಸಸ್ಯವಾಗಿದೆ. ಹಾಗಾಗಿ ನೀರು ಮತ್ತು ಮೋಡ ಶಬ್ದದ ಪರ್ಯಾವಾಚಕ ಎಲ್ಲಾ ಹೆಸರು ಗಿಡಕ್ಕಿದೆ. ಮಳೆಗಾಲದ ತರುವಾಯ ನೆಲದಡಿಯ ಒಳಗೆ ಏಕಾಏಕಿ ಚಿಗುರಿ ಹುಲ್ಲು ರೂಪದ ಎಲೆ ದಂಟು ಮೇಲೆ ಬಿಟ್ಟೇಳುತ್ತದೆ.

ಕೊಂಚ ಗಟ್ಟಿ ಕಾಂಡ ತುದಿಯಲ್ಲಿ ಪುಷ್ಪಮಂಜರಿ, ನೆಲದಡಿಯಲ್ಲಿ ಪುಟಾಣಿ ಬುಗುರಿ ಆಕಾರದ ಹಲವು ಬೇರು ಸಹಿತವಾದ ತುಸು ಕರಿಬಣ್ಣದ ಗೆಡ್ಡೆ. ರೋಮಶ ಬೇರುಗಳವು. ಮೇಲ್ಭಾಗದ ದಂಟು ಪುಷ್ಕಳ ಭೂಮಿಯಲ್ಲಿ ಕಾಲು ಅಡಿಯಿಂದ ಎರಡಡಿ ತನಕ ಚಿಗುರುತದೆ. ತ್ರಿಕೋನಾಕೃತಿಯ ಕಿರಿ ಹೂಗಳೇ ಬೀಜಗಳಾಗುತ್ತವೆ. ಮುಂದಿನ ಮಳೆಗಾಲದ ಹೊತ್ತಿಗೆ ಮತ್ತೆ ಭೂಮಿಗೆ ಬಿದ್ದ ಹುಲ್ಲು ಬೀಜಗಳಿಂದ ನೂರಾರು ಹೊಸ ಸಸಿಗಳು ಹುಟ್ಟುತ್ತವೆ.
ಗೆಡ್ಡೆಯಲ್ಲಿ ಸುಗಂಧಿ ತೈಲಾಂಶವಿರುತ್ತದೆ. ಅಂಟು, ಶರ್ಕರಾಂಶ, ಕ್ಷಾರ ಸತ್ವಗಳಿವೆ. ಹಸಿ ಗಡ್ಡೆಯಲ್ಲಿ ತೈಲಾಂಶದ ಹೆಚ್ಚಳದಿಂದ ಸುಗಂಧ ತೀವ್ರ ಒಣಗಿದರೆ ಕೊಂಚ ಕಡಿಮೆ ಸುಗಂಧ, ಗಂದಿಗೆ ಅಂಗಡಿಗಳಲ್ಲಿ ಒಣಗಿದ ಕೊನ್ನಾರಿ ಗೆಡ್ಡೆಗಳು ಸಿಗುತ್ತವೆ. ಕೊನ್ನಾರಿಯ ಬಾಹ್ಯಾಭ್ಯಾಂತರ ಉಪಯೋಗ ಹಲವು
ಔಷಧೀಯ ಗುಣಗಳು :-

  • ಅಜೀರ್ಣ, ವಾಂತಿ, ಹೊಟ್ಟೆನೋವು, ಹೊಟ್ಟೆ ಉಬ್ಬರ, ಬಾಯಿ ರುಚಿ ಇಲ್ಲದ ಇಲ್ಲದಿರುವಿಕೆಗೆ ಕಷಾಯ ಸೇವಿಸುವುದು ಹಿತಕಾರಿ. ಕೊನ್ನಾರಿಯ ಕಷಾಯದ ಜೊತೆ ಹಾಲು ಕುಡಿಸಿ ಕುಡಿಯುವುದರಿಂದ ಹೊಟ್ಟೆಯ ತೊಂದರೆಗೆ ಅದು ರಾಮಬಾಣವಾಗಿದೆ.
  • ಶುಂಠಿ ರಸದ ಜೊತೆಗೆ ಕೊನ್ನಾರಿ ಪುಡಿ ಸೇವಿಸಿದರೆ ಅಜೀರ್ಣ, ಆಮಶಂಕೆಯು ನಿವಾರಣೆಯಾಗುತ್ತದೆ.
  • ಜ್ವರ, ಭೇದಿ, ಮೂತ್ರಕಟ್ಟು, ಎದೆ ಹಾಲು ಕುಂಠಿತವಾದರೆ, ಮುಟ್ಟಿನ ತೊಂದರೆ, ಜಂತುಹುಳಾದೆ ಹುಣ್ಣು, ಗಾಯ, ಗರ್ಭಾಶಯದ ತೊಂದರೆ ಮತ್ತು ಕೂದಲು ಸಮಸ್ಯೆ ಪರಿಹಾರವಾಗುತ್ತದೆ.
  • ಹಸುವಿನ ತುಪ್ಪದಲ್ಲಿ ಅರೆದು ಲೇಪಿಸಿದರೆ ಹಳೆ ಹುಣ್ಣು, ಗಾಯ ಪರಿಹಾರವಾಗುತ್ತದೆ.
  • ಕಣ್ಣಿನ ಉರಿಯುತ, ಗಾಯ ಮಾಯಿಸಲು, ಆಡಿನ ಹಾಡಿನಲ್ಲಿ ಕೊನ್ನಾರಿ ಅರೆದು ಹಚ್ಚಬಹುದು. ಕಣ್ಣಿನ ರೆಪ್ಪೆಗೆ ಕಾಡಿಗೆ ರೂಪದಲ್ಲಿ ಬಳಸಬಹುದಾಗಿದೆ. ಹಾಲಲ್ಲಿ ಅರೆದು ರೆಪ್ಪೆ ಮೇಲೆ ಲೇಪಿಸಬಹುದು.