ಮನೆ ರಾಜ್ಯ ಕೃತಿಗಿಂತ ವಿಚಾರ ದೊಡ್ಡದು

ಕೃತಿಗಿಂತ ವಿಚಾರ ದೊಡ್ಡದು

0

ಒಬ್ಬ ಸಾಮರ್ಥ್ಯ ಪರೀಕ್ಷಾ ತಜ್ಞನೊಬ್ಬ ಫೋರ್ಡ್ ಮೋಟಾರ್ ಕಂಪನಿಯಲ್ಲಿ ಹೆನ್ರಿ ಫೋರ್ಡ್ರಿಗೆ ಹೀಗೆಂದು ವರದಿಯನ್ನು ನೀಡಿದನು. “ಸರ್, ಪರಿಸ್ತಿತಿಯು ಬಹಳ ಚೆನ್ನಾಗಿದೆ. ಆದರೆ ನಾನು ಕೆಳಗಿರುವ ಹಾಲ್ನಲ್ಲಿ ಹೋದಾಗಲೆಲ್ಲ ಅಲ್ಲಿರುವ ವ್ಯಲ್ತಿಯು ಸುಮ್ಮನೆ ಡೆಸ್ಕಿನ ಮೇಲೆ ತನ್ನ ಕಾಲುಗಳನ್ನು ಇಟ್ಟು ಆರಾಮಾಗಿ ಕುಳಿತಿರುವುದನ್ನು ನೋಡುತ್ತೇನೆ. ಅವನು ನಿಮ್ಮ ಹಣವನ್ನು ವ್ಯರ್ಥ ಮಾಡುತ್ತಿದ್ದಾನೆ.”

ಹೆನ್ರಿ ಫೋರ್ಡ್ ಸುಮ್ಮನೆ ಮುಗುಳ್ನಕ್ಕರು. ನಂತರ ಅವನು ಹೇಳಿದ್ದನ್ನು ತಜ್ಞನಿಗೆ ಒಂದು ಜೀವನ ಪಾಠವಾಗಿತ್ತು.

ಪ್ರಶ್ನೆಗಳು :-

1.ಹೆನ್ರಿ ಫೋರ್ಡ್ ಏನು ಹೇಳಿದರು ? 2.ಈ ಕಥೆಯ ನೀತಿ ಏನು?  

ಉತ್ತರಗಳು :-

1.ಫೋರ್ಡ್ರವರು “ಇದೇ ಮನುಷ್ಯನ ವಿಚಾರವು ಒಮ್ಮೆ ನಮಗೆ ಅಪಾರಸಂಪತ್ತನ್ನು ಒದಗಿಸಿತು. ಈಗ ಅವನ ಕಾಲುಗಳು ಎಲ್ಲಿದ್ದವೋ ಆಗಲು ಅಲ್ಲೇ ಇದ್ದವು” ಎಂದು ಹೇಳಿದರು.

2. ನಾನು ಪ್ರಪಂಚದಲ್ಲಿ ಕಾಣುವುದೆಲ್ಲಾ ಬುದ್ಧಿಶಕ್ತಿಯ ಫಲವಾಗಿದೆ. ಆಲೋಚನೆ ಮತ್ತು ಕಲ್ಪನೆಗಳು ನಾವಿಂದು ಕಾಣುವ ಪ್ರಪಂಚವನ್ನು ನಿರ್ಮಿಸಿದೆ. ಆಧುನಿಕ ತತ್ವವೆಂದರೆ “ಚುರುಕಾಗಿ ಕೆಲಸ ಮಾಡಿ ಕಠಿಣವಾಗಿ ಅಲ್ಲ.” ನೀವು ಚುರುಕಾಗಿ ಕೆಲಸ ಮಾಡಬೇಕೆಂದರೆ ನಿಮ್ಮ ಬುದ್ಧಿಯನ್ನು ಬೆಳಸಿ. ಬಹಳ ಕಡಿಮೆ ಜನರು ಯೋಚಿಸುತ್ತಾರೆ. ಯೋಚಿಸುವವರು ಮಾತ್ರ ಫಲವನ್ನು ನೀಡುತ್ತಾರೆ.