ನಂಜನಗೂಡು: ಸುರಿಯುತ್ತಿರುವ ಜಡಿಮಳೆಗೆ ಆಸ್ಪತ್ರೆಯ ಒಳಗೆ ರೋಗಿಗಳು ಮಲಗಿದ್ದ ವಾರ್ಡಗಳಿಗೆ ಮಳೆ ನೀರು ನುಗ್ಗಿದ ಘಟನೆ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ.
ಆ.11ರ ಬುಧವಾರ ರಾತ್ರಿ ಸುರಿದ ಮಲೆಗೆ ನೀರು ಅಸ್ಪತ್ರೆಯ ವಾರ್ಡ್ ಗಳಿಗೆ ಬಂದು ಶೇಖರಣೆಗೊಂಡ ಕಾರಣ ರೋಗಿಗಳು ತಾವಿರುವುದು ಅಸ್ಪತ್ರೆಯ ಒಳಗೋ ಹೊರಗೋ ಎಂಬ ಗೊಂದಲದಲ್ಲಿ ರಾತ್ರಿಕಳೆದರು.
ರೋಗಿಗಳು ಮಂಚದಿಂದ ಇಳಿದರೆ ಒಂದು ಅಡಿ ನೀರು ಮಂಚದ ಕೆಳಗೆ ತುಂಬಿತ್ತು ಎನ್ನಲಾಗುತ್ತದೆ.














