ಮನೆ ಆರೋಗ್ಯ ಟೆಸ್ಟಿಕ್ಯೂಲಾರ್ ಟಾರ್ಷನ್

ಟೆಸ್ಟಿಕ್ಯೂಲಾರ್ ಟಾರ್ಷನ್

0

ಜೀವಕೋಶದಲ್ಲಿ ಸ್ಪೆರ್ಮಾಟಿಕ್ ಕಾರ್ಡ್ ಆಧಾರದಿಂದ ಬೀಜಗಳು ತುಗಾಡುತ್ತಿರುತ್ತದೆ. ಒಮ್ಮೊಮ್ಮೆ ಬೀಜಗಳು ಹೊಸಯಲ್ಪಡುತ್ತದೆ. ಹಗ್ಗ ಹೊಸೆಯದಂತೆ ಹೊಸೆಯಲ್ಪಡುವುದರಿಂದ ವೃಷಣಗಳಿಗೆ ರಕ್ತಪೂರೈಕೆ ಸ್ಥಗಿತವಾಗುತ್ತದೆ. ರಕ್ತಪೂರೈಕೆ ಸಂಪೂರ್ಣ ಸ್ಥಗಿತವಾದಾಗ ವೃಷಣಗಳು ಘಾಸಿಗೊಳ್ಳುತ್ತದೆ. ವೃಷಣಗಳು ಹೊಸೆಯಲ್ಪಟ್ಟಾಗ ತೀವ್ರವಾದ ನೋವುಇರುತ್ತದೆ. ಈ ಪ್ರಕ್ರಿಯೆಯನ್ನು ಟೆಸ್ಟಿಕ್ಯೂಲರ್ ಟಾರ್ಷನ್ ಎನ್ನುತ್ತಾರೆ.

ಟೆಸ್ಟಿಕ್ಯೂಲರ್ ಟರ್ಷಾನ್ ಆದಾಗ ಬೀಜಗಳು ಸಹಜವಾಗಿ ಮೇಲಕೆಳೆಯಲ್ಪಟ್ಟಿರುತ್ತದೆ. ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡಿದಾಗ ಇದು ಸ್ಪಷ್ಟವಾಗಿ ತಿಳಿಯುತ್ತದೆ.

ಟೆಸ್ಟಿಕ್ಯೂಲರ್ ಟರ್ಷಾನ್ ಎಂಬುದು ಮಾಮೂಲಿಯಾಗಿ ಪರೀಕ್ಷೆ ಮಾಡಿದರೂ ತಿಳಿಯುತ್ತದೆ. ಇದು ನಿರ್ಧಾರವಾದ ತಕ್ಷಣ ಆಪರೇಷನ್ ಮಾಡಿ ಗಂಟಲನ್ನು ಬಿಡಿಸಬೇಕು. ವೃಷಣಗಳು ಮತ್ತು ಟ್ವಿಸ್ಟ್ ಆಗದಂತೆ ಫಿಕ್ಸ್ ಮಾಡಬೇಕು.

ಎಕ್ಯೂಟ್ ಅಬ್ಡಾಮಿನ್ :-

 ಕೆಲವು ಮಕ್ಕಳಿಗೆ ಇದ್ದಕ್ಕಿದ್ದಂತೆ ಹೊಟ್ಟೆಯಲ್ಲಿ ತೀವ್ರವಾದ ನೋವು ಬರುತ್ತದೆ. ಇಂತಹ ಪ್ರಸಂಗಗಳು ಕೆಲವಕ್ಕೆ ಆಪರೇಷನ್ ಮಾಡಬೇಕಾಗುತ್ತದೆ. ಇಂತಹ ಪ್ರಸಂಗಗಳಲ್ಲಿ ಕೆಲವು ಅಪಾಯಕಾರಿಯಾಗಿರುತ್ತದೆ. ಮಾರಣಾಂತಿಕವಾಗಿರುತ್ತದೆ. ಹಾಗಾಗಿ ಎಕ್ಯೂಟ್ ಅಬ್ಡಾಮಿನ್ ಏಕೆ, ಮತ್ತು ಅದು ಏನು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಅಗತ್ಯ.

ಎಕ್ಯೂಟ್ ಅಬ್ಡಾಮಿನ್ ಲಕ್ಷಣಗಳು :-

1. ತೀವ್ರವಾದ ಹೊಟ್ಟೆ ನೋವು

2. ವಾಂತಿ

3. ಹೊಟ್ಟೆ ಉಬ್ಬರ, ಮುಟ್ಟಿದರೆ ನೋವು, ಹೊಟ್ಟೆಯ ಸ್ನಾಯುಗಳು ಬಿಗಿಯುವುದು

4. ಹೊಟ್ಟೆಯೊಳಗಿನ ಕರುಳುಗಳಲ್ಲಿ ರಕ್ತಸ್ರಾವ

ಎಕ್ಯೂಟ್ ಅಬ್ಡಾಮಿನ್ ಇದ್ದಾಗ ಮಗು ನಿಸ್ತೇಜಕವಾಗಿರುತ್ತದೆ. ಇಂತಹ ಸಮಯದಲ್ಲಿ ಈ ಸಮಸ್ಯೆ ಔಷಧಿಯಿಂದ ವಾಸಿ ಮಾಡುವಂಥದ್ದೋ, ಆಪರೇಷನ್ ಮಾಡುವಂಥದ್ದೋ ತಿಳಿದುಕೊಳ್ಳಬೇಕು ಎ

ಔಷಧಿಯಿಂದ ವಾಸಿಯಾಗುವ ಎಕ್ಯೂಟ್ ಅಬ್ಡಾಮಿನ್ :-

1. ಎಂಟ್ರೈಟಿಸ್ ಕೊಲೈಟಿಸ್

2 .ಮಲ ಅಡ್ಡ ಬಿದ್ದಿರುವುದು

3. ಎಕ್ಯೂಟ್ ಹೆಪಟೈಟಿಸ್

4. ಎಕ್ಯೂಟ್ ಪ್ಯಾನ್ ಕ್ರಿಯಾಟೈಟೀಸ್

5. ಪ್ರೈಮರಿ ಪೆರಿಟನೈಟಿಸ್

6. ಎಕ್ಯೂಟ್ ವೈರಲ್ ಮಿಸೆಂಟ್ರಿಕ್ ಲಿಂಫೈಡಿನೈಟಿಸ್

7. ಮೂತ್ರನಾಳದ ಸೋಂಕು

8. ಪೋಲ್ ಫೈರಿಯಾ

ಆಪರೇಷನ್ ಅಗತ್ಯವಿರುವ ಎಕ್ಯೂಟ್ ಅಬ್ಡಾಮಿನ್ :-

1.ಇಂಟಸ್ಟೈನಲ್ ಅಬ್ ಸ್ಟ್ರಕ್ಷನ್

2.ಅಪೆಂಡಿಸೈಟಿಸ್

3.ಮೈಕಲ್ಸ್ ಡೈವರ್ಟಿಕುಲಂ

4.ಪೆರ್ಫರೇಷನ್

5.ಕೋಲಿಸಿಸ್ರೈಟಿಸ್, ಕೋಲಿ ಲಿಥಿಯಾಸಿಸ್

6. ಅಬ್ಡಾಮಿನಲ್ ಟ್ರೋಮಾ

 ಎಕ್ಯೂಟ್ ಅಪೆಂಡಿಸೈಟಿಸ್ :-

ಎಕ್ಯೂಟ್ ಅಪೆಂಡಿಸೈಟಿಸ್ ಗೆ ತುರ್ತು ಸರ್ಜರಿ ಅಗತ್ಯ. 10-12 ವರ್ಷದ ಮಕ್ಕಳಿಗೆ ಎಕ್ಯೂಟ್ ಅಪೆಂಡಿಸೈಟಿಸ್ ನಿಂದ ಹೊಟ್ಟೆ ನೋವು ಬರುವುದು. ಚಿಕ್ಕ ಮಕ್ಕಳಿಗೂ ಕೂಡ ಅಪೆಂಡಿಸೈಟಿಸ್ ಬರುತ್ತದೆ. ಇದನ್ನು ನಿರ್ಲಕ್ಷಿಸಿದರೆ 36-48 ಗಂಟೆಗಳಲ್ಲಿ ಕಿವು ತುಂಬಿ ಒಡೆಯುತ್ತದೆ.

 ಅಪೆಂಡಿಸೈಟಿಸ್ ಅನ್ನು ವೈದ್ಯಕೀಯ ಪರೀಕ್ಷೆಯಿಂದ ಸ್ಪಷ್ಟವಾಗಿ ಗುರುತಿಸಬಹುದು. ಆ ನೋವು ಆರಂಭದಲ್ಲಿ ಹೊಟ್ಟೆಯ ಸುತ್ತಲೂ ಇರುತ್ತದೆ. ಸಾಮಾನ್ಯವಾಗಿ ಮಕ್ಕಳು ನೋವು ಎಲ್ಲಿದೆ ಎಂಬುದು ಹೇಳಲಾರರು. ಆದರೆ ನೋವಿನಿಂದ ಅಳುತ್ತಾರೆ. ಜ್ವರವಿದ್ದು, ವಾಂತಿ ಕೂಡ ಆಗುತ್ತದೆ. ಎಕ್ಯೂಟ್ ಅಪೆಂಡಿಸೈಟಿಸ್ ಎಂಬ ಅನುಮಾನ ಬಂದ ತಕ್ಷಣ ನೋವಿನ ಮತ್ತು ನಿದ್ರೆಗುಳ್ಗೆಯನ್ನು ಕೊಟ್ಟು ನೋವು ಕಡಿಮೆಯಾಗಲು ಪ್ರಯತ್ನಿಸಬಾರದು. ತಕ್ಷಣ ಸರ್ಜರಿ ಮಾಡುವುದೊಂದೆ ಇದಕ್ಕಿರುವ ಮಾರ್ಗ.

ಫೈಮೋಸಿಸ್ :-

ಶಿಶ್ನದ ಕೊನೆಯಲ್ಲಿ ಚರ್ಮ ಪೂರ್ತಿಯಾಗಿ ಮುಚ್ಚಿಕೊಂಡಿರುವುದಕ್ಕೆ ಫೈಮೋಸಿಸ್ ಎನ್ನುತ್ತಾರೆ. ಪೂರ್ತಿ ಮುಚ್ಚಿಕೊಂಡಿರುವ ಚರ್ಮದಲ್ಲಿ ಸೂಜಿಮೊನೆಯಷ್ಟು ಮಾತ್ರ ರಂಧ್ರವಿದ್ದು. ಮೂತ್ರ ವಿಸರ್ಜಿಸುವಾಗ ಬೆಲೂನಿನಂತೆ ಮೂತ್ರದಿಂದ ಉಬ್ಬುತ್ತದೆ. ಮಗುವಿಗೆ ಮೂತ್ರ ವಿಸರ್ಜನೆ ಮಾಡಲು ತೊಂದರೆ ಪಡುತ್ತದೆ. ಮತ್ತೆ ಕೆಲವು ಮಕ್ಕಳಿಗೆ ಶಿಶ್ನದ ಮೇಲೆ ಮುಚ್ಚಿಕೊಂಡಿರುವ ಚರ್ಮದ ಕೆಳಗೆ ಪಾಚಿಗಟ್ಟಿ ಅದರಲ್ಲಿ ಬ್ಯಾಕ್ಟೀರಿಯಾ ಸೋಂಕು ಉಂಟಾಗಿ, ಹುಣ್ಣಾಗುತ್ತದೆ. ಆದ್ದರಿಂದ ಮೂತ್ರ ವಿಸರ್ಜನೆಗೆ ಕಷ್ಟವಾಗುವುದೆಲ್ಲದೆ ಹುಣ್ಣಿನಿಂದಾಗಿ ಜ್ವರ ಕೂಡ ಬರುತ್ತದೆ.

ಹುಡುಗರಿಗೆ ಐದು ವರ್ಷದ ನಂತರ ಶಿಶ್ನದ ಮೇಲಿರುವ ಚರ್ಮ ಹಿಂದಕ್ಕೆ ಸರಿಯುತ್ತದೆ. ನಂತರ ಸುಲಭವಾಗಿ ಹಿಂದಕ್ಕೆ ಮುಂದಕ್ಕೆ ಓಡಾಡುತ್ತದೆ. ಹಾಗೆ ಓಡಾಡದಿದ್ದರೆ ಚರ್ಮದ ಕೆಳಗೆ ಪಾಚಿ ಸಂಗ್ರಹವಾಗಿ ಸೋಂಕು ತಗುತ್ತದೆ.

ಮಕ್ಕಳಿಗೆ ಶಿಶ್ನದ ಮೇಲಿನ ಚರ್ಮ ಓಡಾಡದೆ ಮುಚ್ಚಿಕೊಂಡಿದ್ದರೆ ಸರ್ಕಮ್ ಸಿರ್ಷ ಆಪರೇಷನ್ ಮಾಡಬೇಕಾಗುತ್ತದೆ. ಈ ಆಪರೇಷನ್ ಗೆ ಸುನ್ನಿ ಎಂದು ಕರೆಯುತ್ತಾರೆ. ಯಾವಾಗಲೂ ಮೂತ್ರ ವಿಸರ್ಜಿಸುವಾಗ ಉರಿಯುತ್ತಿದ್ದರೆ, ಜ್ವರ ಬರುತ್ತಿದ್ದರೆ, ಫೈಮೋಸಿಸ್ ಇದೆತೇನೋ ಗಮನಿಸಬೇಕು. ಫೈಮೋಸಿಸ್ ಇದ್ದರೆ ಸುನ್ನಿ ಆಪರೇಷನ್ ಮಾಡಬೇಕಾಗುತ್ತದೆ.