ಮನೆ ದೇವಸ್ಥಾನ ಬಿಜಾಪುರ

ಬಿಜಾಪುರ

0


ಜಿಲ್ಲಾ ಕೇಂದ್ರ ಮಹಮದೀಯ ವಾಸ್ತು ಶೈಲಿಯ ಹಲವು ಕಟ್ಟಡಗಳಿವೆ.


ತತ್ವಜ್ಞಾನಿಗಳಾಗಿ, ಯೋಗಿಗಳಾಗಿ, ವೈದ್ಯರೂ, ಸಂಗೀತಗಾರರು ಆಗಿದ್ದ ರುಕ್ಮಂಗದ ಪಂಡಿತರು ಇಲ್ಲಿ ಅನೇಕ ಪವಾಡಗಳನ್ನು ಮೆರೆದಿದ್ದರು. ಇವರು ಔರಂಗಜೇಬನ ಮೊದಲನೆಯ ದಾಳಿಯನ್ನು ಎದುರಿಸಲು ಗಣನೀಯ ಪಾತ್ರವಹಿಸಿದ್ದರು.. ಇವರ ಸಮಾಧಿ ಇಲ್ಲಿರುತ್ತದೆ. ಊರ ಎಲ್ಲೆಯ ಹತ್ತಿರ ಆಗ್ನೇಯದಲ್ಲಿದೆ. ಪ್ರತಿ ವರ್ಷ ಜಾತ್ರೆ ನಡೆಯುತ್ತದೆ.
ಮುಧೋಳ ತಾಲೂಕಿನ ಮಹಾಲಿಂಗಪುರದ ಮಹಾಲಿಂಗೇಶ್ವರ, ಬಾದಾಮಿ ತಾಲೂಕಿನ ಮಹಾಕೂಟದ ಮಹಾಕೂಟೇಶ್ವರ ದೇವಾಲಯ ಪವಿತ್ರ ಸ್ಥಳವಾಗಿದೆ.
ಬಾದಾಮಿ ಇಂದ ಮಹಾಕೂಟಕ್ಕೆ ಹೋಗುವ ದಾರಿಯಲ್ಲಿ ಮಲಪ್ರಭ ನದಿ ತೀರದಲ್ಲಿ ಶಿವಯೋಗಮಂದಿರ ಪುಣ್ಯಸ್ಥಳ. ಇದನ್ನು ಹಾನಗಲ್ಲಿನ ಕುಮಾರಸ್ವಾಮಿಗಳು ಮತ್ತು ಇಣಕಲ್ನ ವಿಜಯ ಮಹಾಂತ ಸ್ವಾಮಿಗಳು ಜೀರ್ಣೋದ್ಧಾರ ಮಾಡಿದರು.

ಕೂಡಲಸಂಗಮ
ಬಾಗಲಕೋಟೆ ಜಿಲ್ಲೆ ಹನಗುಂದ ತಾಲೂಕಿಗೆ ಸೇರಿದ ಗ್ರಾಮ. ಪವಿತ್ರ ಕ್ಷೇತ್ರ ಹನಗುಂದ ಉತ್ತರಕ್ಕೆ 19 ಕಿಲೋಮೀಟರ್ ದೂರದಲ್ಲಿದೆ.
ಕೃಷ್ಣ ಮತ್ತು ಮಲಪ್ರಭಾ ನದಿಗಳು ಇಲ್ಲಿ ಕೂಡುತ್ತವೆ.
ಇಲ್ಲಿ ಚಾಲುಕ್ಯ ಶೈಲಿಯಲ್ಲಿ ಕಟ್ಟಿರುವ ಸಂಗಮೇಶ್ವರ ದೇವಾಲಯವಿದೆ. ಇಲ್ಲಿರುವ ಶಿವಲಿಂಗ ಪ್ರಸಿದ್ಧವಾದುದು.
ಕ್ರಿಸ್ತಶಕ 12ನೇ ಶತಮಾನದಲ್ಲಿ ಕನ್ನಡ ನಾಡಿನಲ್ಲಿ ಪ್ರಸಿದ್ಧರಾದ ಬಸವೇಶ್ವರರು ಜಾತವೇದ ಮುನಿಗಳ ಶಿಷ್ಯರು. ಜಾತವೇದ ಮುನಿಗಳು ಇಲ್ಲಿ ಆಗ ಒಂದು ವಿದ್ಯಾರ್ಥಿ ಕೇಂದ್ರವನ್ನು ಸ್ಥಾಪಿಸಿದ್ದರು. ಆ ವಿದ್ಯಾ ಕೇಂದ್ರದಲ್ಲಿ ಬಸವೇಶ್ವರ, ಚೆನ್ನಬಸವಣ್ಣ, ಅಕ್ಕ ನಾಗಮ್ಮ ಮೊದಲಾದವರು ಇದ್ದಾರೆ ಎಂದು ತಿಳಿದುಬರುತ್ತದೆ. ಬಸವೇಶ್ವರರ ಬಾಲ್ಯ ಮತ್ತು ವಿದ್ಯಾಭ್ಯಾಸ ಇಲ್ಲೇ ಆಯಿತು.
ಬಸವೇಶ್ವರರ ವಚನದ ಅಂಕಿತದ “ಕೂಡಲಸಂಗಮದೇವ” ಈ ಸಂಗಮನಾಥ. ಕೂಡಲಸಂಗಮದೇವ ಬಸವಣ್ಣನವರ ಆರಾಧ್ಯದೈವ. ಬಿಜ್ಜಳನ ಕಲ್ಯಾಣವನ್ನು ತೊರೆದ ಬಳಿಕ ಬಸವಣ್ಣನವರು ಕೂಡಲಸಂಗಮಕ್ಕೆ ಬಂದು ಅಲ್ಲಿ ಐಕ್ಯರಾದರು. ಕೂಡಲಸಂಗಮ ಒಂದು ಪುಣ್ಯಕ್ಷೇತ್ರ. ಪ್ರತಿ ವರ್ಷ ಇಲ್ಲಿ ಜಾತ್ರೆ ಸೇರುತ್ತದೆ.