ಮನೆ ಜ್ಯೋತಿಷ್ಯ ಗುರು ಗ್ರಹ

ಗುರು ಗ್ರಹ

0

ಸೌರಮಂಡಲದಲ್ಲಿರುವ ಎಲ್ಲಾ ಗ್ರಹಗಳಲ್ಲಿ ಅತ್ಯಂತ ಬಾರಿ ಗಾತ್ರವನ್ನು ಗುರುಗ್ರಹವು ಹೊಂದಿರುವುದು. ಇದು ಭೂಮಿಯ ನಂತರದ ಹೊರಗಿನ ಭಾಗದಲ್ಲಿದ್ದ ಮಂಗಳಗ್ರಹದ ಕಕ್ಷೆಗಿಂತಲೂ ಹೊರಗಿರುವುದು. ಗುರುಗ್ರಹದ ವ್ಯಾಸವು ಸೂರ್ಯನನ್ನು ಬಿಟ್ಟರೆ ಅತ್ಯಂತ ದೊಡ್ಡದೆನಿಸುವಂತಿದೆ. ಸುಮಾರು 9 ಕೋಟಿ 87 ಲಕ್ಷ ಮೈಲುಗಳಷ್ಟು ವ್ಯಾಸ ಹೊಂದಿರುವ ಪ್ರತಿ ಸೆಕೆಂಡಿಗೆ 8 ಮೈಲು ಚಲಿಸುತ್ತಲಿರುವ ಗುರುಗ್ರಹ ಸೂರ್ಯನನ್ನು ಸುತ್ತಿ ಬರಲು 12 ವರ್ಷ ಸಮಯ ತೆಗೆದುಕೊಳ್ಳುವುದು.

ಗುರು ಗ್ರಹಕ್ಕೆ 12 ಚಂದ್ರರಿದ್ದಾರೆ. ಗುರು ಗ್ರಹದಲ್ಲಿ ಘನವಾದ ಬಿರುಗಾಳಿಯಿರುವುದರಿಂದ ಯಾವುದನ್ನು ಸ್ಪಷ್ಟವಾಗಿ ತಿಳಿಯಲಾಗಿಲ್ಲ. ವೈಯಿಕಿಂಗ್ ಉಪಗ್ರಹಗಳ ಮೂಲಕ ಹತ್ತಿರದಿಂದ ಚಿತ್ರಗಳನ್ನು ಸಂಗ್ರಹಿಸಲಾಗಿದೆ. ಅಲ್ಲಿಯೂ ಯಾವುದೇ ರೀತಿಯ ಜೀವ ಜಂತುಗಳಿಲ್ಲವೆಂದು ತಿಳಿದು ಬಂದಿದೆ. ಇದು ಸಹ ಉರಿಯುವ ಅನಿಲಗಳನ್ನು ಹೊಂದಿದ ಗ್ರಹವಾಗಿರುವುದು, ಲಾವಾರಸ ಇದರಲ್ಲಿ ಉಕ್ಕುತ್ತಿರುವುದು.

ಪುರಾಣಗಳಲ್ಲಿ ಗುರುಗ್ರಹವನ್ನು ಅಧಿಕ ಬಲಶಾಲಿ ಮತ್ತು ಅತ್ಯಂತ ಶುಭಗ್ರಹವೆನ್ನಲಾಗಿದೆ. ಸಂಪತ್ತು ಜ್ಞಾನವನ್ನು ಕೊಡುವ ಉತ್ತಮ ಗ್ರಹವೆನ್ನಲಾಗಿದೆ. ಮಾನವನಿಗೆ ಹಿತಕಾರಿ ಎನಿಸಿ, ದೇವತೆಗಳಿಗೂ ಗುರುವೆನಿಸಿದ ಈ ಗ್ರಹವನ್ನು ದೇವಗುರು ಎಂದು ಗೌರವಿಸಲಾಗಿದೆ.

ಗುರುಗ್ರಹದಿಂದ ಧರ್ಮ, ನ್ಯಾಯ, ನೀತಿ, ಪಾಂಡಿತ್ಯ, ಗೌರವರ್ಣ, ಶರೀರದ ಸ್ತೂಲತೆ, ಚತುರತೆಗಳನ್ನು ತಿಳಿಯುವರು. ಇದು ಬ್ರಾಹ್ಮಣ ಜಾತಿಯ ಗ್ರಹವಾಗಿದ್ದು, ಸತ್ವಗುಣವನ್ನು ಹೊಂದಿರುವುದು. ಮಧುರ ರಸದ ಅಧಿಪತಿಯಾಗಿದ್ದು, ಹೇಮಂತ ಋತು ಮತ್ತು ಮೇದಸ್ಸುಗಳ ಸ್ವಾಮಿ ಎನಿಸಿರುವದು. ಗುರು ಗ್ರಹದ ಭಾಗ್ಯ ಅಂಕವು 3 ಆಗಿರುವುದು. ಅಂಕಶಾಸ್ತ್ರದಂತೆ ಗುರುಗ್ರಹಕ್ಕೆ ಸೂರ್ಯಚಂದ್ರರ ನಂತರದಲ್ಲಿ ಎರಡನೇ ಸ್ಥಾನ ನೀಡಲಾಗಿದೆ. ಸೂರ್ಯನು ಆತ್ಮ, ಚಂದ್ರನು ಮನಸ್ಸು, ಗುರು ಗ್ರಹವು ಶರೀರ ಪುಷ್ಠಿ ಮತ್ತು ಜ್ಞಾನಕಾರಕವೆನಿಸಿರುವನು. ಗುರುವಿನಿಂದ ಹಣ, ನ್ಯಾಯ, ಸಂತಾನ, ಮಕ್ಕಳು, ಧರ್ಮ, ಕರ್ಮ, ಇಹಲೋಕ ಮತ್ತು ಪರಲೋಕದಲ್ಲಿ ಸುಖ, ಆಧ್ಯಾತ್ಮ ವಿದ್ಯೆ ವಿಜ್ಞಾನ ವಿಷಯಗಳಲ್ಲಿ ತಿಳಿಯಲಾಗುವುದು.

ವಿವೇಕ, ನಡತೆ, ಬುದ್ಧಿ, ಆರೋಗ್ಯಗಳ ಮೇಲೆ ಗುರು ಗ್ರಹವು ಅಧಿಕ ಪ್ರಭಾವ ಬೀರಿದೆ. ಬಂಗಾರ, ಕಂಚು, ಬೇಳೆ ಕಡಲೆ, ಗೋಧಿ, ತುಪ್ಪ, ಹಳದೀ ವಸ್ತ್ರ, ಹಣ್ಣು, ಹೂವು, ಸಿಹಿಯಾದ ರಸಮಯ ಪದಾರ್ಥಗಳು ಗುರು ಗ್ರಹದ ವಸ್ತುಗಳೆನಿಸಿವೆ. ಇಷ್ಟಲ್ಲದೇ ಆಚಾರ್ಯರು, ಧರ್ಮ ಗ್ರಂಥ, ಕುದುರೆ, ಹಳದಿ, ಬೆಳ್ಳುಳ್ಳಿ, ಉಳ್ಳಾಗಡ್ಡೆ, ಹಾಗೂ ಮೇಣಗಳಿಗೆ ಗುರು ಅಧಿಪತಿಯಾಗಿರುವನು. ಸಿದ್ಧಾಂತ ನಿರೂಪಣೆ, ಉದಾರತೆ, ಉಚ್ಚಅಭಿಲಾಷೆ, ಶಾಂತಿಪ್ರಿಯತೆ, ಮಂತ್ರಿಯಾಗುವುದು, ಪುರೋಹಿತನಾಗುವುದು, ರಾಜನೀತಿ ನಿಪುಣನಾಗುವುದು, ಗುರುವಿನ ಅಧಿಕಾರ ವ್ಯಾಪ್ತಿಯಿಂದ ತಿಳಿಯುವವು, ಸ್ತ್ರೀಯರಿಗೆ ಗಂಡ ಮತ್ತು ಸಂತಾನಗಳನ್ನು ತಿಳಿಯುತ್ತಾರೆ.

ಬೇರೆ ಬೇರೆ ಸ್ಥಿತಿಗಳನ್ನು ಬಂದಂತೆ ಗುರುಗ್ರಹವು ನೀತಿಜ್ಞತೆ, ಕ್ಷಮಾದಾನ, ಸುಖ, ಬಹುಸಂತಾನ ಹೊಂದುವುದು. ದಾನ, ಧೀರತನ, ವ್ಯವಸಾಯಗಳನ್ನು ತಿಳಿಯುವುದು. ಅಶುಭ ಕಾರಕನಾದ ಗುರುವಿನಿಂದ ಮೂಗು, ಕಿವಿಗಳಲ್ಲಿ ಹಾಗೂ ಗಂಟಲಲ್ಲಿ ರೋಗಗಳು ಉಂಟಾಗುವವು. ಕೊಬ್ಬಿನಿಂದಾದ ರೋಗಗಳು ಬರುವವು. ಸ್ಥೂಲ ಶರೀರ ಉಂಟಾಗಿ ತೊಂದರೆಗೀಡಾಗುವುದು.

ಅಂಕಶಾಸ್ತ್ರದಲ್ಲಿ ಗುರುವಿಗೆ ʼ3ʼ ಅಂಕ ನೀಡಲಾಗಿದೆ. ಗುರು ಬಲಿಷ್ಠನಾಗಿದ್ದರೆ ವ್ಯಕ್ತಿಯು ಪ್ರಸನ್ನ ಚಿತ್ತನಾಗಿ ಲೇಖಕ, ಶಿಕ್ಷಕ, ವಕೀಲ, ಸಾಹಿತಿ, ಜ್ಯೋತಿಷಿ, ಸಂಪಾದಕ, ಸಲಹೆಗಾರ ,ಮಂತ್ರಿ ಅಥವಾ ವ್ಯವಹಾರ, ಕುಶಲ ಪುರೋಹಿತನಾಗಬಹುದಾಗಿದೆ. ದುರ್ಬಲನಾದ ಗುರುವಿದ್ದರೆ, ಮಂದಬುದ್ಧಿಯುಳ್ಳವನು. ಚಿಂತಿತನು, ಗ್ರಹಸ್ಥ ಜೀವನದಲ್ಲಿ ದುಃಖ ಪಡುವವನು, ಸಂತಾನರಹಿತನು ಮತ್ತು ಸದಾ ರೋಗಿಯು ಆಗಬಹುದಾಗಿದೆ. ಗುರು ಗ್ರಹದ ದೋಷ ನಿವಾರಣೆಗಾಗಿ ಪದ್ಮರಾಗ ಮಣಿಧಾರಣ ಮಾಡಲು ತಿಳಿಸಿದ್ದಾರೆ.

ಗುರು ಗ್ರಹವು ಸೌರಮಂಡಲದಲ್ಲಿಯೇ ದೊಡ್ಡ ಗ್ರಹವೆನಿಸಿದೆ. ಮುಖ್ಯವಾಗಿ ಬುದ್ಧಿಯ ವಿಷಯವಾಗಿ ಈ ಗ್ರಹದಿಂದ ಎಲ್ಲರೂ ತಿಳಿಯುವರು. ಜ್ಯೋತಿಷ್ಯ ಶಾಸ್ತ್ರಜ್ಞರು ʼಗುರುಬಲʼವೆಂದೇ ಗುರು ಗ್ರಹದ ಮಹಿಮೆಯನ್ನು ವಿವರಿಸಿದ್ದಾರೆ.

ಭಾರತದಲ್ಲಿ ಅನೇಕ ವಿದ್ಯೆಯ ಸಂಬಂಧಿ ಸಂಸ್ಕಾರಗಳಿಗೆ ಗುರು ಬಲವನ್ನೇ, ನೋಡಿ ಮಾಡುವ ರೂಢಿ ಇದೆ. ಗುರು ದುರ್ಬಲನಾಗಿದ್ದಲ್ಲಿ ಗುರು ಶಾಂತಿ ಮಾಡಿಕೊಳ್ಳುತ್ತಾರೆ.