ಮನೆ ಅಂತಾರಾಷ್ಟ್ರೀಯ ಆಪರೇಷನ್ ಅಜಯ್ ಕಾರ್ಯಾಚರಣೆಯ ಭಾಗವಾಗಿ ಇಸ್ರೇಲ್ನಿಂದ 274 ಭಾರತೀಯರನ್ನು ಹೊತ್ತು ಸ್ವದೇಶದತ್ತ ಬರುತ್ತಿರುವ ನಾಲ್ಕನೇ ವಿಮಾನ

ಆಪರೇಷನ್ ಅಜಯ್ ಕಾರ್ಯಾಚರಣೆಯ ಭಾಗವಾಗಿ ಇಸ್ರೇಲ್ನಿಂದ 274 ಭಾರತೀಯರನ್ನು ಹೊತ್ತು ಸ್ವದೇಶದತ್ತ ಬರುತ್ತಿರುವ ನಾಲ್ಕನೇ ವಿಮಾನ

0

ಟೆಲ್ ಅವೀವ್ (ಇಸ್ರೇಲ್) : ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ಸಂಘರ್ಷ ಮುಂದುವರೆದಿದ್ದು, ಈ ಸಂಬಂಧ ಯುದ್ಧ ಪೀಡಿತ ಇಸ್ರೇಲ್ನಲ್ಲಿ ನೆಲೆಸಿರುವ ಭಾರತೀಯರನ್ನು ಕರೆತರುವ ಕಾರ್ಯ ಭರದಿಂದ ಸಾಗುತ್ತಿದೆ. ಆಪರೇಷನ್ ಅಜಯ್ ಕಾರ್ಯಾಚರಣೆಯ ಭಾಗವಾಗಿ 274 ಭಾರತೀಯರನ್ನು ಹೊತ್ತ ನಾಲ್ಕನೇ ವಿಮಾನವು ಭಾನುವಾರ ಮುಂಜಾನೆ ಇಸ್ರೇಲ್ನಿಂದ ಭಾರತಕ್ಕೆ ಹೊರಟಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್, ಆಪರೇಷನ್ ಅಜಯ್ ಭಾಗವಾಗಿ ಭಾನುವಾರ ಬೆಳಗ್ಗೆ 274 ಭಾರತೀಯರನ್ನು ಒಳಗೊಂಡ ನಾಲ್ಕನೇ ವಿಮಾನವು ಇಸ್ರೇಲ್ನಿಂದ ಹೊರಟಿದೆ. ಇದು ಇಸ್ರೇಲ್ನಿಂದ ಭಾನುವಾರ ಹೊರಟಿರುವ ಎರಡನೇ ವಿಮಾನ ಎಂದು ಹೇಳಿದ್ದಾರೆ.

ಆಪರೇಷನ್ ಅಜಯ್ ಕಾರ್ಯಾಚರಣೆ : ಸಂಘರ್ಷ ಪೀಡಿತ ಇಸ್ರೇಲ್ನಿಂದ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಅಂಗವಾಗಿ ಭಾರತ ಸರ್ಕಾರವು ಆಪರೇಷನ್ ಅಜಯ್ ರಕ್ಷಣಾ ಕಾರ್ಯಾಚರಣೆ ಹಮ್ಮಿಕೊಂಡಿದೆ. ಈ ಮೂಲಕ ಇಸ್ರೇಲ್ನಲ್ಲಿ ಸಿಲುಕಿರುವ ಸುಮಾರು 18000 ಭಾರತೀಯ ನಾಗರೀಕರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆ ತರಲು ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಳೆದ ಗುರುವಾರದಿಂದ ಇಸ್ರೇಲ್ನಿಂದ ಭಾರತೀಯರನ್ನು ಕರೆತರುವ ಕಾರ್ಯ ನಡೆಯುತ್ತಿದೆ. ಈ ಸಂಬಂಧ ನೋಂದಣಿಯೂ ಆರಂಭವಾಗಿದೆ. ಇಸ್ರೇಲ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಸಂಕಷ್ಟದಲ್ಲಿರುವ ಭಾರತೀಯ ನಾಗರೀಕರಿಗೆ ಸಹಾಯವಾಣಿಯನ್ನು ಸ್ಥಾಪಿಸಿದೆ. ಜೊತೆಗೆ ಯಾವುದೇ ತುರ್ತು ಸಂದರ್ಭದಲ್ಲಿ ರಾಯಭಾರ ಕಚೇರಿಯನ್ನು ಸಂಪರ್ಕಿಸುವಂತೆ ಸೂಚಿಸಿದೆ.

ಇದಕ್ಕೂ ಮೊದಲು, ಇಸ್ರೇಲ್ನಿಂದ 197 ಜನರನ್ನು ಹೊತ್ತ ವಿಮಾನವು ದೆಹಲಿಗೆ ಆಗಮಿಸಿತ್ತು. ಶನಿವಾರದಂದು ಮೂರನೇ ವಿಮಾನವು ಇಸ್ರೇಲ್ನ ಟೆಲ್ ಅವೀವ್ನಿಂದ ದೆಹಲಿಗೆ ಆಗಮಿಸಿತ್ತು. ಶನಿವಾರ ಬೆಳಗ್ಗೆ 235 ಭಾರತೀಯ ನಾಗರೀಕರನ್ನು ಹೊತ್ತ ಎರಡನೇ ವಿಮಾನವು ಟೆಲ್ ಅವೀವ್ ನಿಂದ ನವದೆಹಲಿಯ ಇಂದಿರಾಗಾಂಧಿ ಇಂಟರ್ನ್ಯಾಷನಲ್ ಏರ್ಪೋರ್ಟ್ಗೆ ಆಗಮಿಸಿತ್ತು. ಶುಕ್ರವಾರ 212 ಜನರನ್ನು ಒಳಗೊಂಡಿದ್ದ ಮೊದಲ ವಿಮಾನವು ಶುಕ್ರವಾರ ದೆಹಲಿಗೆ ಆಗಮಿಸಿತ್ತು.

ಮುಂದುವರೆದ ಸಂಘರ್ಷ : ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ಕಳೆದ ಒಂದು ವಾರದಿಂದ ಸಂಘರ್ಷ ನಡೆಯುತ್ತಿದೆ. ಸಂಘರ್ಷದಲ್ಲಿ ಸಾವಿರಾರು ಸಾವನ್ನಪ್ಪಿದ್ದಾರೆ. ಇಸ್ರೇಲ್ ಕೂಡ ಹಮಾಸ್ ಉಗ್ರ ಮೇಲೆ ದಾಳಿ ನಡೆಸುತ್ತಿದೆ. ಈ ಸಂಬಂಧ ಗಾಜಾಪಟ್ಟಿಯಲ್ಲಿರುವ ನಾಗರೀಕರಿಗೆ ಬೇರೆಡೆ ಸ್ಥಳಾಂತರಗೊಳ್ಳುವಂತೆ ಇಸ್ರೇಲ್ ಸೇನಾಪಡೆ ಸೂಚನೆ ನೀಡಿತ್ತು