ಮನೆ ರಾಜ್ಯ ನೈಋತ್ಯ ರೈಲ್ವೆಯಿಂದ ಮೈಸೂರು ದಸರಾ ಪ್ರಯುಕ್ತ ವಿಶೇಷ ರೈಲು

ನೈಋತ್ಯ ರೈಲ್ವೆಯಿಂದ ಮೈಸೂರು ದಸರಾ ಪ್ರಯುಕ್ತ ವಿಶೇಷ ರೈಲು

0

ಬೆಂಗಳೂರು: ಮೈಸೂರು ದಸರಾ ಹಿನ್ನೆಲೆ ರಾಜ್ಯ, ಹೊರ ರಾಜ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮೈಸೂರಿಗೆ ಪ್ರಯಾಣಿಸುವ ಸಾಧ್ಯತೆ ಇದೆ. ಹೀಗಾಗಿ ಪ್ರಯಾಣಿಕರಿಗೆ ಸಮಸ್ಯೆಯಾಗುವುದನ್ನು ತಡೆಯಲು ನಾಡಹಬ್ಬ ದಸರಾಗೆ ನೈಋತ್ಯ ರೈಲ್ವೆ ವಲಯವು ವಿಶೇಷ ರೈಲುಗಳನ್ನು ಘೋಷಿಸಿದೆ. ನೈಋತ್ಯ ರೈಲ್ವೆಯು ಮೈಸೂರು, ಕೆಎಸ್ಆರ್ ಬೆಂಗಳೂರು, ಮೈಸೂರು ಮತ್ತು ಚಾಮರಾಜನಗರ ನಡುವೆ ವಿಶೇಷ ರೈಲುಗಳನ್ನು ಓಡಿಸಲಿದೆ.

ವಿಶೇಷ ರೈಲುಗಳ ವಿವರ: ರೈಲು ನಂ. 06279/06280 ಮೈಸೂರು-ಕೆಎಸ್ಆರ್ ಬೆಂಗಳೂರು-ಮೈಸೂರು ಅನ್ ರಿಸರ್ವ್ಡ್ ಸ್ಪೆಷಲ್ ರೈಲು ಐದು ಟ್ರಿಪ್ಗಳನ್ನು ಮಾಡಲಿದೆ. ರೈಲು ನಂ. 06279 ಅಕ್ಟೋಬರ್ 20, 21, 22, 23 ಮತ್ತು 24 ರಂದು ರಾತ್ರಿ 11.15 ಕ್ಕೆ ಮೈಸೂರಿನಿಂದ ಹೊರಟು ಬೆಳಿಗ್ಗೆ 2.30 ಕ್ಕೆ ಕೆಎಸ್ಆರ್ ಬೆಂಗಳೂರು ತಲುಪುತ್ತದೆ.

ರೈಲು ನಂ. 06280 ಕೆಎಸ್ಆರ್ ಬೆಂಗಳೂರು-ಮೈಸೂರು ವಿಶೇಷ ರೈಲು ಅಕ್ಟೋಬರ್ 21, 22, 23, 24 ಮತ್ತು 25 ರಂದು ಬೆಳಿಗ್ಗೆ 3 ಗಂಟೆಗೆ ಕೆಎಸ್ಆರ್ ಬೆಂಗಳೂರಿನಿಂದ ಹೊರಟು ಬೆಳಿಗ್ಗೆ 6.15 ಕ್ಕೆ ಮೈಸೂರು ತಲುಪಲಿದೆ.

ರೈಲು ನಂ. 06597/06598 ಮೈಸೂರು-ಕೆಎಸ್ಆರ್ ಬೆಂಗಳೂರು-ಮೈಸೂರು ಅನ್ರಿಸರ್ವ್ಡ್ ಸ್ಪೆಷಲ್ ರೈಲು ಐದು ಟ್ರಿಪ್ಗಳನ್ನು ಮಾಡುತ್ತದೆ.

ರೈಲು ನಂ. 06597 ಮೈಸೂರಿನಿಂದ ಅಕ್ಟೋಬರ್ 20, 21, 22, 23 ಮತ್ತು 24 ರಂದು ಮಧ್ಯಾಹ್ನ 12.15 ಕ್ಕೆ ಹೊರಟು ಮಧ್ಯಾಹ್ನ 3.30 ಕ್ಕೆ ಕೆಎಸ್ಆರ್ ಬೆಂಗಳೂರಿಗೆ ಆಗಮಿಸುತ್ತದೆ.

ರೈಲು ನಂ. 06598 ಕೆಎಸ್ಆರ್ ಬೆಂಗಳೂರು-ಮೈಸೂರು ವಿಶೇಷ ರೈಲು ಅಕ್ಟೋಬರ್ 20, 21, 22, 23 24 ರಂದು ಮಧ್ಯಾಹ್ನ 3.45 ಕ್ಕೆ ಕೆಎಸ್ಆರ್ ಬೆಂಗಳೂರಿನಿಂದ ಹೊರಟು ರಾತ್ರಿ 7.20 ಕ್ಕೆ ಮೈಸೂರಿಗೆ ತಲುಪಲಿದೆ.

ರೈಲು ನಂ. 06281/06282 ಮೈಸೂರು-ಚಾಮರಾಜನಗರ-ಮೈಸೂರು ಅನ್ರಿಸರ್ವ್ಡ್ ಸ್ಪೆಷಲ್ ಒಂದು ಟ್ರಿಪ್ ಮಾಡಲಿದೆ.

ರೈಲು ನಂ. 06281 ಮೈಸೂರು-ಚಾಮರಾಜನಗರ ವಿಶೇಷ ರೈಲು ಅಕ್ಟೋಬರ್ 24 ರಂದು ರಾತ್ರಿ 11.30 ಕ್ಕೆ ಮೈಸೂರಿನಿಂದ ಹೊರಟು 1.15 ಕ್ಕೆ ಚಾಮರಾಜನಗರ ತಲುಪುತ್ತದೆ.

ರೈಲು ನಂ. 06282 ಚಾಮರಾಜನಗರ-ಮೈಸೂರು ವಿಶೇಷ ರೈಲು ಅಕ್ಟೋಬರ್ 25 ರಂದು ಸಂಜೆ 5 ಗಂಟೆಗೆ ಚಾಮರಾಜನಗರದಿಂದ ಹೊರಟು ಬೆಳಿಗ್ಗೆ 6.50 ಕ್ಕೆ ಮೈಸೂರು ತಲುಪುತ್ತದೆ.

ರೈಲು ನಂ. 06283/06284 ಮೈಸೂರು-ಚಾಮರಾಜನಗರ-ಮೈಸೂರು ಪ್ರವಾಸಕ್ಕೆ ಕಾಯ್ದಿರಿಸಿದೆ.

ರೈಲು ನಂ. 06283 ಮೈಸೂರಿನಿಂದ ಅಕ್ಟೋಬರ್ 24 ರಂದು ರಾತ್ರಿ 9.15 ಕ್ಕೆ ಹೊರಟು ರಾತ್ರಿ 11.10 ಕ್ಕೆ ಚಾಮರಾಜನಗರ ತಲುಪಲಿದೆ.

ರೈಲು ನಂ. 06284 ಚಾಮರಾಜನಗರ-ಮೈಸೂರು ವಿಶೇಷ ರೈಲು ಅಕ್ಟೋಬರ್ 24 ರಂದು ರಾತ್ರಿ 11.30 ಕ್ಕೆ ಚಾಮರಾಜನಗರದಿಂದ ಹೊರಟು ಬೆಳಗ್ಗೆ 1.30ಕ್ಕೆ ಮೈಸೂರು ತಲುಪುತ್ತದೆ.