ಮನೆ ಆರೋಗ್ಯ ನೆಫ್ರೋಟಿಕ್ ಸಿಂಡ್ರೋಮ್

ನೆಫ್ರೋಟಿಕ್ ಸಿಂಡ್ರೋಮ್

0

ನೆಫ್ರೋಟಿಕ್ ಸಿಂಡ್ರೋಮ್ ಹಲವು ಸಮಸ್ಯೆಗಳ ಸಂಕೀರ್ಣ. ಮೂತ್ರದಲ್ಲಿ ಅಲ್ಬುಮಿನ್ ಹೆಚ್ಚಾಗಿರುತ್ತದೆ. ರಕ್ತದಲ್ಲಿ ಪ್ರೊಟೀನ್ ಪ್ರಮಾಣ ಕಡಿಮೆ ಇರುತ್ತದೆ. ಮುಖ ಮತ್ತು ಮೈಗೆ ನೀರು ಸೇರುತ್ತದೆ. ರಕ್ತದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗಿರುತ್ತದೆ.

ನೆಫ್ರೋಟಿಕ್ ಸಿಂಡ್ರೋಮ್ ಸ್ಪಷ್ಟವಾದ ಕಾರಣ ತಿಳಿದುಬಂದಿಲ್ಲ.

ರೋಗ ಲಕ್ಷಣಗಳು :-

ನೆಫ್ರೋಟಿಕ್ ಸಿಂಡ್ರೋಮ್ ಹೆಣ್ಣುಮಕ್ಕಳಿಗಿಂತಲೂ ಗಂಡು ಮಕ್ಕಳಲ್ಲಿ ಅದರ ಎರಡರಷ್ಟಿರುತ್ತದೆ. 2-6 ವರ್ಷ ವಯಸ್ಸಿನಲ್ಲಿ ಹೆಚ್ಚು. 6-12ತಿಂಗಳ ನಡುವೆ ಈ ರೋಗಕ್ಕೆ  ತುತ್ತಾದವರಿದ್ದಾರೆ.

ಈ ರೋಗ ಮೈಗೆ ನೀರು ಸೇರುವ ಮೂಲಕ ಪ್ರಕಟವಾಗುತ್ತದೆ. ಮೊದಲು ಕಣ್ಣುಗಳು ಉಬ್ಬಿದಂತೆ ಕಂಡುಬರುತ್ತದೆ. ನಂತರ ಶರೀರ, ಮುಖ ಉಬ್ಬುತ್ತದೆ. ಶ್ವಾಸಕೋಶಗಳ ಹೊರಗಿನ ಪದರಗಳಿವೆ, ಹೊಟ್ಟೆಗೆ ನೀರು ಸೇರುತ್ತದೆ. ನಿಧಾನವಾಗಿ ಮೂತ್ರ ವಿಸರ್ಜನೆ ಕಡಿಮೆಯಾಗುತ್ತದೆ. ಹಸಿವಿರುವುದಿಲ್ಲ, ಹೊಟ್ಟೆ ನೋಯುತ್ತಿರುತ್ತದೆ, ಸದಾ ನೀರಿನಂತೆ ಭೇದಿಯಾಗುತ್ತಿರುತ್ತದೆ.

ರೋಗ ನಿರ್ಧಾರ :-

ಮೂತ್ರದಲ್ಲಿ ಅಲ್ಬುಮಿನ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಸೀರಂ ಕೊಲೆಸ್ಟ್ರಾಲ್, ಟ್ರೈಗ್ಲಿಸರೈಡ್ಸ್ ಪ್ರಮಾಣ ಹೆಚ್ಚಾಗಿರುತ್ತದೆ. ಸೀರಂ ಅಲ್ಬುಮಿನ್ ಪ್ರಮಾಣ ಕಡಿಮೆಯಿರುತ್ತದೆ.

ಜಟಿಲತೆಗಳು :-

ಈ ರೋಗಭಾದೆಯಿಂದ ಬಳಲುತ್ತಿರುವ ಮಕ್ಕಳಿಗೆ ಸುಲಭವಾಗಿ ಸೋಂಕು ಹೊರಡುತ್ತದೆ. ಪೆರಿಟೋಸೈಟಿಸ್, ಸೆಪಿಸ್, ಸೆಲ್ಯುಲೈಟಿಸ್, ನ್ಯೂಮೋನಿಯಾ ಮೂತ್ರನಾಳದ ಸೋಂಕು ಈ ಮಕ್ಕಳಲ್ಲಿ ಹೆಚ್ಚಾಗಿರುತ್ತದೆ.

ಚಿಕಿತ್ಸೆ :-

ಪ್ರೆಡ್ನಿಸಲಾನ್ ಗುಳಿಗೆಯನ್ನು ಒಂದು ನಿಗದಿತ ಪ್ರಮಾಣದಲ್ಲಿ ಕೆಲವು ತಿಂಗಳುಗಳ ಕಾಲ ಕೊಡಬೇಕು. ಬಹಳ ಮಕ್ಕಳು ಈ ಗುಳಿಗೆಗಳಿಗೆ ಸ್ಪಂದಿಸುತ್ತಾರೆ. ಆದರೆ ರೋಗಲಕ್ಷಣಗಳು ಮತ್ತೆ ಮತ್ತೆ ಕಾಣಿಸುತ್ತಲೇ ಕಾಣಿಸುತ್ತಲೇ ಇರುತ್ತದೆ. 20 ವರ್ಷ ತುಂಬುವಷ್ಟರಲ್ಲಿ ಬಹುಮಟ್ಟಿಗೆ ರೋಗಲಕ್ಷಣಗಳು ಕಡಿಮೆಯಾಗುತ್ತದೆ. ನೆಫ್ರೋಟಿಕ್ ಸಿಂಡ್ರೋಮ್ ವಂಶಪಾರಂಪರ್ಯಾವಾಗಿ ಬರುವುದಿಲ್ಲ. ಈ ರೋಗ ಗುಪ್ತವಾಗಿದ್ದು  ಮತ್ತೆ ಕಾಣಿಸಿಕೊಳ್ಳುವಂಥದ್ದಲ್ಲ. ಆರೋಗ್ಯವಾಗಿದ್ದಾಗ ಮಗು ಎಲ್ಲಾ ಆಹಾರವನ್ನು ಸೇವಿಸಬೇಕು. ರೋಗಲಕ್ಷಣಗಳಿಲ್ಲದಾಗ ಪ್ರೆಡ್ನಿಸಲಾನ್ ಔಷಧಿ ಕೊಡುವ ಅಗತ್ಯವಿಲ್ಲ. ಈ ಸಮಯದಲ್ಲಿ ಮಗುವಿಗೆ ಕೊಡಬೇಕಾದ ರೋಗನಿರೋಧಕ ವ್ಯಾಕ್ಸಿನ್ ಗಳನ್ನು ಕೊಡಬಹುದು.

ಮೂತ್ರನಾಳದ ಸೋಂಕು (ಯು.ಟಿ.ಐ) :-

ಮಕ್ಕಳಿಗೆ ಮೂತ್ರನಾಳದ ಸೋಂಕು ಸಾಮಾನ್ಯವಾಗಿ ಕಂಡುಬರುವ ಸಮಸ್ಯೆ. ಈ ಸೋಂಕಿನಿಂದಾಗಿ ಜ್ವರ ಬರುತ್ತದೆ. ತೂಕ ಕಡಿಮೆಯಾಗುತ್ತದೆ. ಮಕ್ಕಳ ಬೆಳವಣಿಗೆ ಸೂಕ್ತವಾಗಿರುವುದಿಲ್ಲ. ಆಗಾಗ ವಾಂತಿಯಾಗುತ್ತಿರುತ್ತದೆ. ಮೂತ್ರ ಹನಿ ಹನಿಯಾಗಿ ಸದಾ ಹೋಗುತ್ತದೆ. ಮೂತ್ರ ವಾಸನೆಯಿಂದ ಕೂಡಿರುತ್ತದೆ – ಇವೆಲ್ಲ ಈ ರೋಗದ ಲಕ್ಷಣಗಳು. ಈ ರೋಗವಿದ್ದಾಗ ಬಲಭಾಗದ ಅಥವಾ ಎಡ ಭಾಗದ ಕಿಬ್ಬೊಟ್ಟೆಯಲ್ಲಿ ನೋವು ಕೂಡ ಇರುತ್ತದೆ.

ರೋಗನಿರ್ಧಾರ :-

ಮೂತ್ರಪರೀಕ್ಷೆ, ಮೂತ್ರದಕಲ್ಚರ್, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್, ಮೂಲಕ ರೋಗವನ್ನು ನಿರ್ಧರಿಸಬಹುದು.

ಚಿಕಿತ್ಸೆ :-

ಸೂಕ್ತವಾದ ಆಂಟಿಬಯೋಟಿಕ್ ಚಿಕಿತ್ಸೆಯಿಂದ ಮೂತ್ರದ ಸೋಂಕನ್ನು ವಾಸಿ ಮಾಡಬಹುದು.