ಮನೆ ಜ್ಯೋತಿಷ್ಯ ಶುಕ್ರ ಗ್ರಹ

ಶುಕ್ರ ಗ್ರಹ

0

ಶುಕ್ರಗ್ರಹವು ಭೂಮಿ ಮತ್ತು ಸೂರ್ಯ ಇವೆರಡರ ನಡುವೆ ಇರುವ ಗ್ರಹವಾಗಿದೆ. ಇದು ಸೂರ್ಯ ಮತ್ತು ಚಂದ್ರರನ್ನು ಬಿಟ್ಟು ಉಳಿದ ನಕ್ಷತ್ರ ಸಮೂಹದಲ್ಲಿಯೇ ಅತ್ಯಂತ ದೇದೀಪ್ಯಮಾನವಾಗಿ ಹೊಳೆಯುವ ಗ್ರಹವಾಗಿರುವುದು. ಸೂರ್ಯೋದಯ ಅಥವಾ ಸಂಧ್ಯಾ ಪೂರ್ವ ಕಾಲದಲ್ಲಿ ಸ್ಪಷ್ಟವಾಗಿ ಶುಕ್ರ ಗ್ರಹವನ್ನು ನೋಡಬಹುದಾಗಿದೆ. “ಬೆಳ್ಳಿ ಚುಕ್ಕೆ” ಎಂದು ಶುಕ್ರಗ್ರಹವನ್ನು ಕರೆದಿದ್ದಾರೆ.

ಶುಕ್ರ ಗ್ರಹವು ಭೂಮಿಯಿಂದ 3 ಕೋಟಿ 43 ಲಕ್ಷ ಮೈಲುಗಳಷ್ಟು ದೂರವಿರುವುದು. ಒಮ್ಮೊಮ್ಮೆ ಭೂಮಿಗೆ ಸನಿಹ ಬರುವುದು. ಆಗ ಅತ್ಯಂತ ಪ್ರಕಾಶಮಾನವಾಗಿ ಕಾಣಿಸುವುದು. ಹತ್ತಿರ ಬಂದಾಗ ಕೇವಲ 20 ಲಕ್ಷ ಮೈಲು ದೂರವಿರುವುದು. ಒಮ್ಮೆ ಸೂರ್ಯನನ್ನು ಸುತ್ತಿ ಬರಲು 240 ದಿನಗಳು ಬೇಕಾಗುವವು. ಶುಕ್ರ ಗ್ರಹದಲ್ಲಿ ಬಹಳ ಉಷ್ಣತೆಯಿದೆ ಎಂದು ವಿಜ್ಞಾನಿಗಳು ನಂಬಿದ್ದಾರೆ.

 ಶುಕ್ರ ಗ್ರಹದ ವ್ಯಾಸವು ಭೂಮಿಗಿಂತ ಕಡಿಮೆ ಇರುವುದು ಸಸ್ಯಾ ಅಥವಾ ಪ್ರಾಣಿ ಜೀವಿಸಲು ಬೇಕಾದ ಪ್ರಾಣವಾಯು ಶುಕ್ರ ಗ್ರಹದಲ್ಲಿಲ್ಲ. ಆದುದರಿಂದ ಅಲ್ಲಿ ಯಾವುದೇ ಜೀವಿ ಇರುವುದು ಸಾಧ್ಯವಿಲ್ಲ. ಆದರೆ ಅಲ್ಲಿಯೂ ಸಹ ವಾಯುಮಂಡಲದ ಊಹೆಯನ್ನು ವಿಜ್ಞಾನಿಗಳು ನಿರಾಕರಿಸಿಲ್ಲ.

ಪಾಶ್ಚಾತ್ಯ ವಿದ್ವಾಂಸರು ಶುಕ್ರನನ್ನು ಕಲೆ, ಪ್ರೀತಿ, ಆಕರ್ಷಣೆ, ಸೌಂದರ್ಯಗಳ ಅಧಿಪತಿ ಎಂದಿದ್ದಾರೆ. ಒಂದು ರೀತಿಯಿಂದ ತಾಯಿಯಂತಿದ್ದು, ಇನ್ನೊಂದು ರೀತಿಯಿಂದ ಸಂಸಾರದಲ್ಲಿ ಆಸಕ್ತಿ ಹೊಂದುವಂತೆ ಮಾಡುತ್ತಾನೆ ಎಂದು ನಂಬಲಾಗಿದೆ. ಭಾರತೀಯ ಜ್ಯೋತಿಷಿಗಳು ಶುಕ್ರನನ್ನು ಕಾಮನ ಪ್ರತಿಕವೆಂದಿದ್ದಾರೆ. ಗುರುವಿನ ನಂತರದಲ್ಲಿ ಮಂತ್ರಿಯ ಸ್ಥಾನವನ್ನು ಶುಕ್ರನಿಗೂ ಸಹ ನೀಡಲಾಗಿದೆ.

ಶುಕ್ರಗ್ರಹ ಸ್ವಭಾವದಿಂದ ಕಾಮುಕ, ಸ್ವಾರ್ಥಿ, ಸಂಗೀತ, ಕಲಾ ವಿಲಾಸಿ ಅನುರಾಗಿ ಸ್ತ್ರೀಪ್ರಿಯಾ, ರಜೋಗುಣಿ ಯುವಾವ್ಯವಸ್ಥೆಯ ಸ್ತ್ರೀ ಗ್ರಹವೇನಿಸಿರುವುದು. ಶುಕ್ರಗ್ರಹದ ಭಾಗ್ಯಂಕವು 6 ಆಗಿದೆ. ಶುಕ್ರ ಗ್ರಹದಿಂದ ಪತ್ನಿ ಅಥವಾ ಪ್ರಿಯತಮೆಯ ಸುಖ, ತ್ರಿವರ್ಗದಿಂದ ಆಗುವ ಲಾಭ ಮುಂತಾದವನ್ನು ತಿಳಿಯುತ್ತಾರೆ. ಬಲಿಷ್ಠವಾದ ಶುಕ್ರನಿಂದಾಗಿ ವ್ಯಕ್ತಿಯು ಶ್ರೀಮಂತ ವ್ಯಾಪಾರಿ, ರೂಪವಂತ, ವಾಹನವುಳ್ಳವನು ಕಾಮೇಚ್ಛೆ ಇರುವವನಾಗುವನು. ಈ ಗ್ರಹವು ವೀರ್ಯ, ಚರ್ಮ, ಹಾವಭಾವಗಳು ಅಭಿವ್ಯಕ್ತಿ ಮತ್ತು ಆಕರ್ಷಣೆಗಳಿಗೆ ಕಾರಕವಾಗಿರುವುದು.

ಬ್ರಾಹ್ಮಣ ಜಾತಿಯ ಶುಕ್ರಗ್ರಹದಿಂದ ಹತೋಟ ಭವನಗಳು ಶಯನಾಗರಗಳು, ವಸ್ತು ಬಂಡಾರಗಳು, ವಸ್ತ್ರಾಲಂಕಾರ ಸಾಮಗ್ರಿ, ಭವನಗಳು, ಗಾನನೃತ್ಯ ಮಂದಿರಗಳು ಮುಂತಾದವನ್ನು ನಿರ್ಧರಿಸಲಾಗುವುದು. ಪುರಾಣಗಳಲ್ಲಿ ಶುಕ್ರಾಚಾರ್ಯರು ಒಂದು ಕಣ್ಣೀರುವವನೆಂದು ರಾಕ್ಷಸರ ಗುರುವೆನೆಂದು ನಂಬಲಾಗಿದೆ. ಪ್ರಭಾವಶಾಲಿ ಅನಿಸಿದ ಗ್ರಹವಾಗಿದ್ದಾನೆ.

ವಜ್ರ, ಬಂಗಾರ, ಅಲಂಕಾರಗಳು ಎಲ್ಲಾ ರೀತಿಯ ರತ್ನಗಳು ಮತ್ತು ರತ್ನ ವ್ಯಾಪಾರಿಯ ಸ್ಥಾನವನ್ನು ಶುಕ್ರನಿಗೆ ನೀಡಲಾಗಿದೆ. ಸ್ಪಟಿಕ, ಹತ್ತಿ, ರೇಶಿಮೆ, ಅರಳೆ, ಟೆರಳಿನ್, ಪಾಲಿಸ್ಟರ್ ಮತ್ತು ಸಿಂಥೆಟಿಕ್ ವಸ್ತುಗಳ ಅಧಿಪತ್ಯವು ಶುಕ್ರನಿಗಿರುವುದು.

ಶುಕ್ರನಿಂದ ಅಕ್ಕಿ, ಸಕ್ಕರೆ, ಗೋಧಿ, ಸುಗಂಧ ಪುಷ್ಪಗಳು, ಮಿಠಾಯಿಗಳು ತಿಳಿಯಲ್ಪಡುತ್ತದೆ. ಶುಕ್ರಗ್ರಹದ ಸ್ಥಿತಿಯಿಂದ ಸ್ತ್ರೀ ಪ್ರಸಂಗ, ಭೋಗವಿಲಾಸ, ಮದಿರಪಾನ, ಸಂಗೀತ ಮತ್ತು ಲಲಿತ ಕಲೆಗಳಲ್ಲಿ ಪರಿಣತಿ, ಸಂತೋಷ, ವ್ಯಾಪಾರ, ಮನೋರಂಜನೆ, ವಾಹನ ಸಂಚಲನ, ಭೂಮಿಯಲ್ಲಿರುವ ಹಣ, ಹೋಟೆಲ್, ವ್ಯವಸಾಯ, ಕಾವ್ಯ ರಚನೆ, ಪ್ರೇಮ ಸಂಬಂಧ, ವ್ಯವಹಾರಗಳನ್ನು ತಿಳಿಯುವರು.

ಶುಕ್ರನು ಅಶುಭನಾಗಿದ್ದರೆ, ಅಪ್ರಿಯ, ಶರೀರಿ, ರೋಗಿ, ಸ್ತ್ರೀ ಸಂಘದಿಂದ ಹಾನಿ ಒಳಗಾಗುವನು. ಚರ್ಮರೋಗಿ ಅಥವಾ ಮೈಥುನ ರೋಗಿ ಆಗುವನು. ಶುಕ್ರನು ಪ್ರಭಾವಶಾಲಿಯಾಗಿದ್ದರೆ, ವ್ಯಕ್ತಿಯ ಬಾಲ್ಯದಲ್ಲಿ ಸ್ತ್ರೀ ಪ್ರೇಮಿಯೂ, ಗೋಲ ಮುಖದವನು, ಗುಂಗುರು ಕೂದಲಿನವನು, ಶ್ರೀಮಂತನು, ಬಿಳಿ ಬಣ್ಣದವನು, ಪ್ರಾಣಿ ಪ್ರಿಯನು ಆಗುವನು.

ಆಧುನಿಕ ಮನೋರಂಜನ ಜಗತ್ತಿನ ಕ್ಯಾಬರೆ, ಥೇಟರ್, ರೇಡಿಯೋ, ಟಿವಿ ಮತ್ತು ಸಿನಿಮಾ ಜಗತ್ತಿನ ಪ್ರಮುಖ ಅಂಗಗಳಾದ ನಟ, ನಟಿ, ಗಾಯಕ, ನಿರ್ದೇಶಕ, ನಿರ್ಮಾಪಕ, ನಾಟಕಕಾರ, ಗೀತಕಾರ, ಕವಿ, ಜಾದುಗಾರ, ಹೋಟೆಲ್ ವ್ಯವಸ್ಥಾಪಕ ಮುಂತಾದವರ ಬಗ್ಗೆ ಶುಕ್ರನಿಂದ ತಿಳಿಯಲು ಸಾಧ್ಯವಿರುವುದು.

ವಜ್ರ, ಬೆಳ್ಳಿ, ಸುಗಂಧ ವಸ್ತುಗಳು ಮುಂತಾದವುಗಳನ್ನು ಶುಕ್ರಗ್ರಹವು ನಿಯಂತ್ರಿಸುವುದು. ಶುಕ್ರನು ಪ್ರಭಾವಹೀನನಾದರೆ ನಿಶ್ಚಲ ಪ್ರೇಮ, ಸ್ತ್ರೀಯಿಂದ ವಂಚನೆ, ನಿರ್ಬಲ ಕಾಮೇಚ್ಛೆ ಅಥವಾ ಮಹಿಳೆಯ ತ್ಯಾಗ ಮಾಡುವುದು ಮುಂತಾದ ಪ್ರಸಂಗಗಳು ಸಂಭವಿಸುತ್ತದೆ.

ಈ ಜಗತ್ತಿನಲ್ಲಿರುವವನು ಶುಕ್ರನ ಪ್ರಭಾವದಿಂದ ತಪ್ಪಿಸಿಕೊಳ್ಳಲಾರರು. ಸಂಚಾರಿಕ ಸುಖ, ದೈನಂದಿನ ಅವಶ್ಯಕತೆಗಳು ಶುಕ್ರನಿಂದ ಪೂರ್ತಿ ಗೊಳ್ಳುವವು. ಶುಕ್ರನ ಒಳ್ಳೆಯ ಪ್ರಭಾವವು ಉಂಟಾಗಲು ವಜ್ರಧಾರಣೆ, ಲಕ್ಷ್ಮಿ ಸ್ತೋತ್ರ ಹಿತಕಾರಿಗಳಾಗಿವೆ. ಶುಕ್ರನು ಪ್ರಭಾವ ಹೀನನಾಗಿದ್ದರೆ, ಅಂತಹ ವ್ಯಕ್ತಿಯ ಜೀವನ ನಿರಾಸವೆನಿಸುವುದು, ಏಕಾಂತಮಯನಾಗಿದ್ದು ಸುಖ-ದುಃಖಗಳಿಲ್ಲದ ಬಡತನ ಅಥವಾ ಸಾಧುವಿನಂತೆ ಜೀವನ ನಡೆಸುವುದು ಉಂಟಾಗುವವು. ಶುಕ್ರಗ್ರಹದ ಪ್ರಭಾವವು 24 ರಿಂದ 42 ವರ್ಷಗಳಲ್ಲಿ ಅಧಿಕವಾಗಿರುವುದು.