ಪರಾಶರರು “ ಮೈತ್ರೇಯಾ ! ದೂರ್ವಾಸ ಮಹರ್ಷಿಯ ಜನ್ಮ ವೃತ್ತಾಂತವು ನಿನಗೆ ತಿಳಿದಿರುವ ವಿಷಯವೇ ಅಲ್ಲವೇ ? ಅತನು ಅತ್ರಿ, ಅನಸೂಯರಿಗೆ ಈಶ್ವರಾಂಶದಿಂದ ಜನಿಸಿದನು. ಉಗ್ರಕೋಪಿಷ್ಟನು, ಅಭಿಮಾನದನನು ಅದ ಅತನು ಗರ್ವದಿಂದ ತನ್ನನ್ನು ಲೆಕ್ಕಿಸದೇ ಕಡೆಗಣಿಸಿದರೆ ಹರಿಹರ ಬ್ರಹ್ಮದಿಗಳನ್ನಾದರೂ ಲೆಕ್ಕಿಸುವವನಲ್ಲ. ಒಮ್ಮೆ ಆತನು ಸಮಸ್ತ ಭೂಮಂಡಲವನೆಲ್ಲಾ ಸುತ್ತಿ ದರ್ಶನೀಯವಾದಂತಹ ಸ್ಥಳಗಳನೆಲ್ಲಾ ದರ್ಶಿಸಿದ ನಂತರ ಆತನಿಗೆ ಇಂದರಲೋಕವನ್ನು ನೋಡಬೇಕೆಂಬ ಬಯಕೆ ಉಂಟಾಯಿತು.
ಕೊಡಲೇ ಆತನು ದೇವನಗರಕ್ಕೆ ಹೊರಟನು. ಅರೀತಿ ದೇವನಗರವನ್ನು ಪ್ರವೇಶಿಸಿತ್ತಿದ್ದ ದೂರ್ವಾಸರಿಗೆ ನಂದನವನದಲ್ಲಿನ ಪಾರಿಜಾತ ಹೂಗಳನ್ನು ಹಾರವನ್ನಾಗಿ ಧರಿಸಿ ಒಬ್ಬ ವಿದ್ಯಾಧರ ಕಾಂತೆಯು ಆತನಿಗೆ ಗೋಚರಿಸಿದಳು. ಮನೋಹರ ಚಂದ್ರ ಲೇಖವನ್ನು ಅಲಂಕರಿಸಿಕೊಂಡಿದ್ದ ಶರತ್ಕಾಲದ ಇರುಳಿನಂತೆ ಬಾಡದ ಪಾರಿಜಾತ ಮಾಲೆಯನ್ನು ಧರಿಸಿ ದ್ವಿಗುಣೀಕೃತ ಶೋಭಾಯಮಾನಳಾದ ಅ ವಿದ್ಯಾಧರಿಯನ್ನು ದೂರ್ವಾಸ ಮಹರ್ಷಿ ನಿಲ್ಲಿಸಿ ಆಕೆಯು ಧರಿಸಿದ ಮಾಲೆಯನ್ನು ಕೊಡುವಂತೆ ಕೇಳಿದನು. ಋಷೀಂದ್ರನ ಅಭೀಷ್ಟವನ್ನು ತಿರಸ್ಕರಿಸುವ ಧೈರ್ಯವಿಲ್ಲದೆ ಆಕೆ ಮಾಲೆಯನ್ನು ತೆಗೆದು ದೂರ್ವಾಸರಿಗೆ ಕೊಟ್ಟು ನಮಸ್ಕರಿಸಿ ಕೊಟ್ಟು ವಾಪಸ್ಸಾದಳು.
ಅದೇ ಸಮಯದಲ್ಲಿ ದೇವೇಂದ್ರನು ಐರಾವತವನ್ನು ಅಧಿರೋಹಿಸಿ ಗಂಧರ್ವ, ಕಿನ್ನರ, ಕಿಂಪುರುಷ, ಸಿದ್ದ, ಸಾಧ್ತ ; ವಿದ್ಯಾಧರೇಶ್ವರರೊಂದಿಗೆ ಸೇರಿ ಸಾಯಂಕಾಲ ವಿಹಾರಕ್ಕೆಂದು ವಿಹರಿಸುತ್ತಾ ಬಂದನು. ದೂರ್ವಾಸನು ಆತನನ್ನು ಕಂಡು ಮಾತನಾಡಿಸಿ ಉದ್ದನೆಯ ಜಡೆಯಲ್ಲಿ ನಿಬಿಡವಾಗಿದ್ದ ಪಾರಿಜಾತ ಹಾರವನ್ನು ಕಾಣಿಕೆಯನ್ನಾಗಿ ದೇವೇಂದ್ರನಿಗೆ ಅರ್ಪಿಸಿದನು. ದೂರ್ವಾಸ ಮಹರ್ಷಿಯು ಪ್ರೀತಿ ಪೂರ್ವಾಕವಾಗಿ ಅರ್ಪಿಸಿರುವ ಕಾಣಿಕೆಯನ್ನು ಗೌರವಾದರಣೆಗಳೊಂದಿಗೆ ಸ್ವಿಕರಿಸದೇ, ದೇವನಾಯಕನೆಂಬ ಗರ್ವದಿಂದ ದೆಔೇಂದ್ರನು ಐರಾವತದ ಮೇಲೆಯೇ ಕುಳಿತು ಕೈಯಲ್ಲಿನ ಅಂಕುಶವನ್ನು ಕೆಳಕ್ಕೆ ಚಾಚಿ ಅದರ ಸಾಹಾಯದಿಂದ ಅ ಮಾಲೆಯನ್ನು ತೆಗೆದುಕೊಂಡನು.
ತನ್ನ ಕಣ್ಣ ಮುಂದೆಯೇ ನಡೆಯುತ್ತಿರುವ ಈ ಅವಮಾನಕರವಾದ ದೃಶ್ಯವನ್ನು ಕಂಡು ತಡೆಯಲಾರದೆ ಕ್ರೋಧಾವೇಶದಿಂದ ಕಂಪಿಸುತ್ತಿರುವ ದೂರ್ವಾಸ ಮುನೀಂದ್ರನ ಕಣ್ಣುಗಳಲ್ಲಿ ಘೋರವಾದ ದಾವಾಗ್ನಿ ಜ್ವಾಲೆಗಳು ಹೊರಬರುತ್ತಿದ್ದವು. ಅಷ್ಟರಲ್ಲಿಯೇ ಬೆಂಕಿಗೆ ತುಪ್ಪವನ್ನು ಸುರಿದಂತೆ ಮತ್ತೊಂದು ಅವಾಂಛನೀಯ ಘಟನೆಯು ನಡೆಯಿತು. ದೇವೇಂದ್ರನು ಅಧಿರೋಹಿಸಿದ “ಭದ್ರ” ಎಂಬ ಗಜದ ಮುಖದಿಂದ ಸ್ರವಿಸುತ್ತಿದ್ದ ಮದ ಧಾರೆಗಳನ್ನು ಆಸ್ವಾದಿಸುತ್ತಾ ಮತ್ತಿನಿಂದ ಕೂಡಿದ್ದ ಜೇನುನೊಣಗಳು ಪಾರಿಜಾತ ಹೂಗಳ ಸುಗಂಧ ಸೌರಭಕ್ಕೆ ಪರವಶವಾಗಿ ಜೋರಾಗಿ ಶಬ್ದ ಮಾಡುತ್ತಾ ಪಾರಿಜಾತ ಹಾರದ ಸುತ್ತಲೂ ಸುತ್ತುವರಿದವು. ಆ ಝೇಂಕಾರ ಶಬ್ದದಿಂದ ಬೆಚ್ಚಿಬಿದ್ದ ಐರಾವತವು ತನ್ನ ಸುತ್ತಲೂ ಸುತ್ತುಕೊಂಡಿರುವ ನೊಣಗಳನ್ನು ಕಂಡು ಜೋರಾಗಿ ಶಬ್ದಮಾಡುತ್ತಾ ತನ್ನ ಸೋಂಡಿಲನ್ನು ಚಾಚಿ ಪಾರಿಜಾತ ಹಾರವನ್ನು ತೆಗೆದಕೊಂಡು ನೆಲಕ್ಕೆ ಎಸೆದು ಕಾಲುಗಳಿಂದ ತುಳಿದು ಎಸೆಯಿತು. ದೂರ್ವಾಸನ ಕೋಪವು ಮುಗಿಲು ಮುಟ್ಟಿತು.
ಹಣೆಯನ್ನು ಅಗಲಮಾಡಿ,ಕಣ್ಣುರೆಪ್ಪೆಗಳನ್ನು ಮೇಲಕ್ಕೆತ್ತಿ ಪ್ರಕಂಪಮಾನ ದೇಹನಾಗಿ ಉಗ್ರನಾಗಿ ಹೀಗೆಂದನು. “ ಎಲೈ ! ಇಂದ್ರನೇ! ಐಶ್ವರ್ಯದ ಮದದಿಂದ ಕಣ್ಣು ಕಾಣದೇ, ತ್ರೀಲೋಕ ರಾಜ್ಯಲಕ್ಷೀ ಮಹನೀಯ ಸಂಪದಗಳಿಗೂ ಮಿಗಿಲಾದ ಹೂಮಾಲೆಯನ್ನು ತಂದು ಪ್ರೀತಿಯಿಂದ ನಿನಗೆ ಅರ್ಪಿಸಿದರೆ ಗೌರವಯುತವಾಗಿ ಅದನ್ನು ಸ್ವೀಕರಿಸದೇ ನಿರ್ಲಕ್ಷಿಸಿದೆ. ಅದಕ್ಕೆ ಪ್ರತಿಯಾಗಿ ನಿನ್ನ ಐಶ್ವರ್ಯವೆಲ್ಲಾ ಜಲಮಯವಾಗುತ್ತದೆ. ರಾಜ್ಯ ಭೋಗಗಳೆಲ್ಲವೂ ನಾಶವಾಗಿತ್ತದೆ. “ ಎಂದು ಶಪಿಸಿದನು.
ಮಹರ್ಷಿಯ ಶಾಪಕ್ಕೆ ದೇವೇಂದ್ರನು ಭಯಭೀತನಾಗಿ ಅತನ ಪಾದಗಳನ್ನಿಡಿದು ಕ್ಷಮಾರ್ಪಣೆಯನ್ನು ಕೇಳಿದನು. ತನಗೆ ಶಪ ಮೋಕದಷವನ್ನು ಅನುಗ್ರಹಿಸುವಂತೆ ಪ್ರಾರ್ಥಿಸಿದನು. ಆದರೂ ಸಹ ದೂರ್ವಾಸನ ಕೋಪ ಕಡಿಮೆಯಾಗಲಿಲ್ಲ. ಮತಷ್ಟು ಕೋಪಿಸಿಕೊಂಡು “ದೇವೇಂದ್ರಾ! ಅಂದು ಮಿನಿ ಪತ್ನಿ ಅಹಲ್ಯಳನ್ನು ಮಾಯಾವೇಷದಲ್ಲಿ ವಂಚಿಸಿದ ನಿನ್ನನ್ನು ಕ್ಷಮಿಸುವುದಕ್ಕೆ ನಾನು ಗೌತಮನಲ್ಲ. ನಿನ್ನ ಪಾಪಕ್ಕೆ ಪ್ರಾಯಶ್ಚಿತವಿಲ್ಲ. ನನ್ನನ್ನು ಅಗ್ರಹಪಡಿಸಿದರೆ ನಿನಗೆ ಈ ಲೋಕದಲ್ಲಿ ಸ್ಥಾನವಿಲ್ಲದಂತೆ ಮಾಡುತ್ತೇನೆ ಎಂದು ಗರ್ಜಿಸಿದನು.
ಮೌನಿಯ ಶಾಪ ಪ್ರಭಾವದಿಂದ ನಿರ್ಜರೇಶ್ವರನ ಅನಂತ ಭೋಗಭಾಗ್ಯ್ಳೆಲ್ಲವೂ ಇಂದ್ರ ಜಾಲವೆಂಬಂತೆ ಅದೃಶ್ಯವಾದವು. ಚಿಂತಾಮಣಿ, ಕಾಮಧೆನು, ಕಲ್ಪವೃಕ್ಷ, ಐರಾವತಗಳೆಲ್ಲವೂ ಕಾಣೀಸದೇ ಹೋದವು. ಈ ವಿಷಯವು ಭೂಲೋಕದಲ್ಲೆಲ್ಲ ವ್ಯಾಪಿಸಿತು. ದೇವತೆಗಳೆಂದರೇ ಪೂಜ್ಯ ಭಾವನೆಯು ಕ್ಷೀಣಿಸಿ, ಜನರು ಉತ್ತಮ ಲೋಕಗತಿ ಪ್ರಾಪ್ತಿಗಾಗಿ ಮಾಡುವಂತಹ ದಾನ ಧರ್ಮಗಳನ್ನು ಮಾಡುವುದನ್ನು ತ್ಯಜಿಸಿದರು, ಧರ್ಮವು ಕ್ಷೀಣಿಸಿದ್ದರಿಂದ ಭಾಲೋಕದಲ್ಲಿ ಅನಾವೃಷ್ಟಿ ವ್ಯಾಪಿಸಿತು. ಸಸ್ಯ ಶ್ಯಾಮಲವೆಲ್ಲಾ ಒಣಗಿಹೋಯಿತು. ಯಜ್ಙ ಯಾಗಾದಿಗಳಿಗೆ ವಸ್ತುಗಳು ಲಭಿಸದೇ ಹೋದವು. ಯಜ್ಙ ಹವಿಸ್ಸುಗಳಿಲ್ಲದೇ ದೇವತೆಗಳೆಲ್ಲರೂ ನಿರಾಹಾರರಾಗಿ ತೇಜೋರಹಿತರಾದರು. ಶಾಪಗ್ರಗಿತರಾದ ಅಮರರ ನಿಸ್ಸಾಹಾಯತೆಯನ್ನು ಕಂಡು ದಾನವ ನಾಯಕನಾದ ವಿಪ್ರ ಚಿತ್ತನು ದೇವಲೋಕದ ಮೇಲೆ ದಂಡೆತ್ತಿ ಹೋಗಿ ಇಂದ್ರನ ಮೇಲೆ ಯುಧ್ಧ ಮಾಡಿ ದೇವಲೋಕವನ್ನು ಜಯಿಸಿ ವಶಪಡಿಸಿಕೊಂಡನು.