ಮನೆ ಸ್ಥಳೀಯ ಅಕ್ಟೋಬರ್ 18 ರಿಂದ 21 ರವರೆಗೆ ಯುವ ದಸರಾ

ಅಕ್ಟೋಬರ್ 18 ರಿಂದ 21 ರವರೆಗೆ ಯುವ ದಸರಾ

0

ಮೈಸೂರು:- ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2023 ರ ಅಂಗವಾಗಿ ಯುವದಸರಾ 2023 ಕಾರ್ಯಕ್ರಮವು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಅಕ್ಟೋಬರ್ 18 ರಿಂದ 21 ರವರೆಗೆ ನಡೆಯಲಿದೆ.

Join Our Whatsapp Group

ಅಕ್ಟೋಬರ್ 18 ರಂದು ಸಂಜೆ 6 ಗಂಟೆಗೆ ಯುವ ದಸರಾ 2023 ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಘನ ಉಪಸ್ಥಿತಿಯಲ್ಲಿ ಚಲನಚಿತ್ರ ನಟ ಡಾ. ಶಿವರಾಜ್ ಕುಮಾರ್ ಉದ್ಘಾಟಿಸುವರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ. ಎಚ್ ಸಿ ಮಹದೇವಪ್ಪ ಮತ್ತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರಾದ ಕೆ ವೆಂಕಟೇಶ್ ಗೌರವ ಉಪಸ್ಥಿತಿಯಲ್ಲಿ ಭಾಗವಹಿಸುವರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಾಮರಾಜ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಹರೀಶ್ ಗೌಡ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಹಾನಗರ ಪಾಲಿಕೆಯ ಮಹಾಪೌರರಾದ ಶಿವಕುಮಾರ್, ಲೋಕಸಭಾ ಸದಸ್ಯರಾದ ಪ್ರತಾಪ್ ಸಿಂಹ, ಶ್ರೀನಿವಾಸ್ ಪ್ರಸಾದ್, ಸುಮಲತಾ ಅಂಬರೀಶ್ ಭಾಗವಹಿಸುವರು.

ಸಮಾರಂಭದ ಅತ್ತಿಗಳಾಗಿ ವಿಧಾನಸಭಾ ಶಾಸಕರಾದ ತನ್ವೀರ್ ಸೇಠ್, ಅನಿಲ್ ಕುಮಾರ್, ದರ್ಶನ್ ಧ್ರುವನಾರಾಯಣ್, ಜಿ ಟಿ ದೇವೇಗೌಡ, ರವಿಶಂಕರ್ ಡಿ, ಟಿ.ಎಸ್ ಶ್ರೀ ವತ್ಸ, ಜಿ.ಡಿ ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಮಧು ಜಿ ಮಾದೇಗೌಡ, ಎಚ್ ವಿಶ್ವನಾಥ್, ಮರಿತಿಬ್ಬೆಗೌಡ, ಸಿ.ಎನ್ ಮಂಜೇಗೌಡ, ಡಾ ತಿಮ್ಮಯ್ಯ ಮತ್ತು ಮೈಸೂರು ಮಹಾನಗರ ಪಾಲಿಕೆಯ ಉಪ ಮಹಾ ಪೌರರಾದ ಡಾ. ಜಿ ರೂಪ ಭಾಗವಹಿಸುವರು.

ಯುವದಸರಾ ಮುಖ್ಯ ಕಾರ್ಯಕ್ರಮಗಳ ವಿವರ

ಅಕ್ಟೋಬರ್ 18 ರಂದು ಸಂಜೆ 6 ಕ್ಕೆ ಚಲನಚಿತ್ರ ನಟರಾದ ಡಾ. ಶಿವರಾಜಕುಮಾರ್ ಉದ್ಘಾಟಿಸುವರು. ಸಂಜೆ 7 ರಿಂದ ಸಂಜೆ 10.30ರವರೆಗೆ ಸ್ಯಾಂಡಲ್‌ವುಡ್ ನೈಟ್ಸ್, 19 ರಂದು ಸಂಜೆ 6:30 ರಿಂದ 8 ಗಂಟೆವರೆಗೆ ಸಜಿತ್ ಹೆಗ್ಗಡೆ ಮತ್ತು ತಂಡ, ಸಂಜೆ 9:30 ರಿಂದ 10 ರವರೆಗೆ ಶಿಲ್ಪಾ ರಾವ್ ಮತ್ತು ತಂಡ, ಅಕ್ಟೋಬರ್ 20 ರಂದು ಸಂಜೆ 7 ರಿಂದ 8.30 ರವರೆಗೆ ಅಲ್ ಒಕೆ ಮತ್ತು ತಂಡ, ಮತ್ತು ತಂಡ ರಾತ್ರಿ 9 ರಿಂದ 10.30 ರವರೆಗೆ ಸಲೀಂ ಸುಲೈಮಾನ್ ಮತ್ತು ತಂಡ, ಅಕ್ಟೋಬರ್ 21 ರಂದು ಸಂಜೆ 7:10 ರಿಂದ 8:40 ರವರೆಗೆ ಮೋಹನ್ ಸಿಸ್ಟರ್ ತಂಡ, ರಾತ್ರಿ 9ರಿಂದ 10.30 ರವರೆಗೆ ಬೆನ್ನಿ ದಯಾಳ್ ಮತ್ತು ತಂಡಗಳು ಕಾರ್ಯಕ್ರಮಗಳನ್ನು ನಡೆಸಲಿವೆ.