ಮನೆ ಮನೆ ಮದ್ದು ಅರಿಷಿಣ

ಅರಿಷಿಣ

0

ಅರಿಷಿಣಗೆ ಭಾರತೀಯ ಸಮಾಜದಲ್ಲಿ ವಿಶೇಷ ಪೂಜನೀಯ ಸ್ಥಳವಿದೆ. ಅಡುಗೆಯಲ್ಲಿ ಆಹಾರ ಪದಾರ್ಥವಾಗಿ ಉಪಯೋಗವಾಗುತ್ತದೆ. ಧಾರ್ಮಿಕ ಕಾರ್ಯಗಳಲ್ಲಿಯೂ ಸಹ ಇದನ್ನು ಉಪಯೋಗಿಸುತ್ತಾರೆ. ಮದುವೆಯ ಸಂದರ್ಭದಲ್ಲಿ ವಧು-ವರರಿಗೆ ಇದನ್ನು ಹಚ್ಚಿ ಸ್ನಾನ ಮಾಡಿಸುತ್ತಾರೆ. ಇದನ್ನು ಅಕ್ಕಿಯಲ್ಲಿ ಮಿಶ್ರಣ ಮಾಡಿ ವಧು-ವರರ ಮೇಲೆ ಆಶೀರ್ವಾದವಾಗಿ ಹಾಕಲಾಗುತ್ತದೆ.  ಮಹಿಳೆಯರು ಸಹ ತಮ್ಮ ಹಣೆಯಲ್ಲಿ ಇದನ್ನು ಹಚ್ಚಿಕೊಳ್ಳುತ್ತಾರೆ. ಕಾರಣ ಅರಿಷಿಣಗೆ ಭಾರತೀಯ ಸಮಾಜದಲ್ಲಿ ವಿಶೇಷ ಸ್ಥಾನವಿದೆ.    

ಅರಿಷಿಣವು ಭಾರತೀಯ ಅಡುಗೆಯ ಒಂದು ಅವಿಭಾಜ್ಯ ಅಂಗವಾಗಿದೆ. ಇದು ಅಲ್ಲದೆ ಅಡುಗೆಯಿಲ್ಲ, ವಿಶೇಷವಾಗಿ ಪ್ರತಿಯೊಂದು ಅಡಿಗೆಗೆ ಇದು ಉಪಯೋಗಿಸಲ್ಪಡುತ್ತದೆ. ಅರಿಶಿನದಲ್ಲಿ ನಾಲ್ಕು ಪ್ರಕಾರಗಳಿವೆ. ೧.ಸಾಮಾನ್ಯ ಅರಿಷಿಣ. ೨.ದಾರೂ ಅರಿಷಿಣ ೩.ಅಂಬಾ ಅರಿಷಿಣ. 4 ಕರಿ ಅರಿಷಿಣ. ಈ ನಾಲ್ಕರಲ್ಲಿ ಸಾಮಾನ್ಯ ಅರಿಷಿಣ ಮಾತ್ರ ದೈನಂದಿನ ಕಾರ್ಯಗಳಲ್ಲಿ ಅತ್ಯುಪಯೋಗವಾಗಿದೆ.

ಆರೋಗ್ಯ ದೃಷ್ಟಿಯಲ್ಲಿ ಇದರ ಉಪಯೋಗ ಆಶ್ಚರ್ಯಕರವಾಗಿದೆ. ಆಯುರ್ವೇದ ಔಷಧಿಗಳಲ್ಲಿ ಇದರ ಮಿಶ್ರಣವಿರುತ್ತದೆ. ಇದೊಂದು ಉಪಯೋಗಿ ರೋಗ ನಿರೋಧಕವಾಗಿದೆ.          

ಅರಿಷಿಣವು ಸುಮಾರು 3 ಅಡಿ ಎತ್ತರ ಬೆಳೆಯುವ ಸಸ್ಯ, ಎಲೆಗಳು ಸೌಗಂಧ ಭರಿತ, ಬಾಳೆ ಎಲೆಯಂತೆ ಉದ್ದನೆಯ ಸುಂದರ ಎಲೆ, ಹೊಸ ಎಲೆ ಚಿಗುರುವಾಗ ಹಳೆಯ ಎಲೆ ಬಾಡುತ್ತದೆ. ಆರು ಇಂಚು ಉದ್ದನೆಯ ಪುಷ್ಪ ಮಂಡರಿ, ಹಸಿರು ತಿಳಿ ಹಸಿರಿನ ಹೂ, ನೆಲದಡಿಯ ಬೆರಳು ಗಾತ್ರದ ತೋರ ಗೆಡ್ಡೆಯಲ್ಲಿ ಬಳಸಿಕೊಳ್ಳುವ ಅರಿಶಿಣ. ನೆಲದಡಿಯಿಂದ ತೆಗೆದ ಗಡ್ಡೆಯನ್ನು ಬೇಯಿಸಿ, ಒಣಗಿಸಿ ಮಾರುಕಟ್ಟೆಗೆ ಅಣಿಗೊಳಿಸುತ್ತಾರೆ. ಕುದಿಸಿದ ಗಡ್ಡೆಯಲ್ಲಿ ಅದರ ತೀಕ್ಷ್ಣತೆ, ತೀವ್ರತೆ ಕಮ್ಮಿ.  ಕರ್ಕುಮಿನ, ಕರ್ಕುಮೆನ್, ಟರ್ಪಿನ್, ಕೊಲೆಸ್ಟಿರಾಲ, ಅಲ್ಬುಮೀನಾಯಿಡು ಮತ್ತು ಪಿಷ್ಟಗಳಿಂದ ಅರಿಷಿಣ ಗಡ್ಡೆಯ ಅಸಂಖ್ಯೆ ಔಷಧಿಯ ಗುಣಗಳ ತವರೂರಾಗಿದೆ.       

ಚರ್ಮರೋಗ ನಿವಾರಕ, ಉಚ್ಛೇಜಕ, ರಕ್ತಶೋಧಕ, ಶೋಭ ಭಾವು ನಿವಾರಕ, ಭೇದಿ ಪರಿಹಾರ, ಕಫ ನಿವಾರಕ, ವಿಷಹರ ಗುಣ ಧರ್ಮಗಳನ್ನು ಅರಿಷಿಣ ಹೊಂದಿದೆ. ವ್ರಣಗಾಯ ಮಾಯಿಸುವುದರಲ್ಲಿ ದೇಶ, ವಿದೇಶಿಗಳ ಗಮನ ಸೆಳೆದಿದೆ. ನೆಗಡಿ, ಕಾಮಾಲೆ, ಮಧುಮೇಹ, ಲಿವರ್ ಕಾಯಿಲೆ, ಮರುಕಳಿಸುವ ಜ್ವರ, ಕಣ್ಣು ತೊಂದರೆಗಳಲ್ಲಿ ಅರಿಷಿಣ ಬಹಳ ಉಪಯುಕ್ತವಾದ ಮದ್ದು.

ಔಷಧೀಯ ಗುಣಗಳು :-

* ಗಾಯ – ಯಾವುದೇ ತರಹದ ಗಾಯವಾಗಿದ್ದರೆ ಒಳ್ಳೆಯ ಅರಿಷಿಣ ಪುಡಿಯಲ್ಲಿ ಸಮ ಪ್ರಮಾಣದಲ್ಲಿ ತುಪ್ಪ ಬೆರೆಸಿ ಸ್ವಲ್ಪ ಬಿಸಿ ಮಾಡಿ ಗಾಯದ ಮೇಲೆ ಲೇಪಿಸಬೇಕು ಇದರಿಂದ ಎಂತಹ ಗಾಯವಿದ್ದರೂ ಗುಣವಾಗುತ್ತದೆ.     

* ಶೀತ ನೆಗಡಿ – ಅರಿಶಿಣ ಪುಡಿಯನ್ನು ಬೆಂಕಿಯ ಮೇಲೆ ಹಾಕಿ ಇದರ ಹೊಗೆಯನ್ನು ಮೂಸಲು ನೆಗಡಿಯು ಕಡಿಮೆಯಾಗುತ್ತದೆ. ಅರಿಶಿಣ ಪುಡಿಯಲ್ಲಿ ಸ್ವಲ್ಪ ಜೇನು ಬೆರೆಸಿ, ನೆಕ್ಕಿಸಿದರೆ ಕೆಮ್ಮು, ಕಫ ನಿವಾರಣೆ ಆಗುತ್ತದೆ. ಸುಣ್ಣ ಮತ್ತು ಅರಿಷಿಣ ಪುಡಿ ಕೂಡಿಸಿ ಸೇವಿಸಿದರೆ ಹಳೆ ನೆಗಡಿ, ಕೆಮ್ಮು ಪರಿಹಾರವಾಗುತ್ತದೆ.      

* ಮುಖದ ಸುಕ್ಕು ಗೆರೆ – ಅರಿಶಿನ ಮತ್ತು ಕರಿ ಎಳ್ಳು ಸಮಪ್ರಮಾಣದಲ್ಲಿ ನೀರಿನಲ್ಲಿ ಅರೆದು ಮುಖಕ್ಕೆ ಲೇಪಿಸಬೇಕು.      

* ಮೂಲವ್ಯಾಧಿಗೆ – ಮೂಲವ್ಯಾದಿಯ ಉರಿಯುತಕ್ಕೆ ಲೋಳೆಸರದ ಸಂಗಡ ಅರಿಶಿಣ ಲೇಪದಿಂದ ಗುಣವಿದೆ.        

* ತಲೆನೋವಿಗೆ – ತಲೆನೋವಿದ್ದಾಗ ಹಣೆಯಲ್ಲಿ ಅರಿಶಿಣ ಪುಡಿಯನ್ನು ಲೇಪಿಸಿದರೆ ತಲೆನೋವು ದೂರವಾಗುತ್ತದೆ. 

* ದುರ್ಗಂಧ ನಾತ ದೂರ ಮಾಡಲಿಕ್ಕೆ – ಮೀನು ಅಡಿಗೆಯಲ್ಲಿ ದುರ್ಗಂಧ ಪರಿಹಾರಕ್ಕೆ, ತುಪ್ಪ ಕಾಯಿಸುವಾಗ ಸುಗಂಧ ಹೆಚ್ಚಿಸುವ ಸಲುವಾಗಿ ಅರಿಶಿನ ಎಲೆಗಳನ್ನು ಹಾಕುವುದರಿಂದ ದುರ್ಗಂಧ ವಾಸನೆ ದೂರವಾಗುತ್ತದೆ.   

ಹಾನಿಕಾರಕ ಅಂಶಗಳು :-

ಅತಿಯಾದ ಅರಿಷಿಣ ಸೇವನೆಯು ಹೃದಯಕ್ಕೆ ಹಾನಿಕಾರಕವಾಗಿದೆ.