ವಾಷಿಂಗ್ಟನ್(Washington): ಅಮೆರಿಕದ(America) ಉಪಾಧ್ಯಕ್ಷೆ(Vice President) ಕಮಲಾ ಹ್ಯಾರಿಸ್(Kamala Harris) ಅವರಿಗೆ ಕೊರೊನಾ ಸೋಂಕು(Covid-19) ತಗಲಿರುವುದು ದೃಢಪಟ್ಟಿರುವುದಾಗಿ ಶ್ವೇತಭವನ, ಮಂಗಳವಾರ ಹೇಳಿಕೆ ನೀಡಿದ್ದು, ಸೂಕ್ತ ಚಿಕಿತ್ಸೆ ನೀಡುತ್ತಿರುವುದಾಗಿ ತಿಳಿಸಿದೆ.
ಹ್ಯಾರಿಸ್ ಅವರ ಮಾಧ್ಯಮ ಕಾರ್ಯದರ್ಶಿ ಕಿಸ್ಟನ್ ಅಲೆನ್ ಅವರು, ಕಮಲಾ ಹ್ಯಾರಿಸ್ ಜತೆ ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಆಗಲೀ, ಅಥವಾ ಜಿಲ್ ಬಿಡೆನ್ ಆಗಲೀ, ನಿಕಟ ಸಂಪರ್ಕಕ್ಕೆ ಬಂದಿಲ್ಲ, ಅವರಿಬ್ಬರ ಪ್ರವಾಸದ ದಿನಾಂಕಗಳು ಬೇರೆ ಬೇರೆಯಾಗಿದ್ದವು. ಏಪ್ರಿಲ್ 18ರಂದು ಬಿಡೆನ್ ಮತ್ತು ಹ್ಯಾರಿಸ್ ಭೇಟಿಯಾಗಿದ್ದರು ತಿಳಿಸಿದ್ದಾರೆ.
ವೆಸ್ಟ್ ಕೋಸ್ಟ್‌ಗೆ ತೆರಳಿದ್ದ ಕಮಲಾ ಹ್ಯಾರಿಸ್ ಅವರು ಮರಳಿ ಬಂದಿದ್ದು, ನಂತರ ಕೋವಿಡ್ ಪರೀಕ್ಷೆ ನಡೆಸಿದಾಗ, ಸೋಂಕು ತಗುಲಿರುವುದು ಪತ್ತೆಯಾಗಿದೆ. ಮನೆಯಲ್ಲೇ ಪ್ರತ್ಯೇಕವಾಸದಲ್ಲಿದ್ದು, ಚಿಕಿತ್ಸೆ ಪಡೆಯುವ ಜತೆಗೆ ಕಚೇರಿ ಕೆಲಸಗಳನ್ನು ನಿರ್ವಹಿಸಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.