ಮನೆ ಸ್ಥಳೀಯ ಕಾಸ್ಮೋಸ್ ಕಾರ್ಯಾಗಾರದ ಸಮಾರೋಪ ಸಮಾರಂಭ

ಕಾಸ್ಮೋಸ್ ಕಾರ್ಯಾಗಾರದ ಸಮಾರೋಪ ಸಮಾರಂಭ

0

ಮೈಸೂರು: ಕಾಸ್ಮೋಸ್ ಕಾರ್ಯಾಗಾರದ ಕಡೆಯ ದಿನವಾದ ಬುಧವಾರ (ಅ.18)ರ ಬೆಳಗ್ಗೆ ವಿದ್ಯಾರ್ಥಿಗಳು ಸನ್ ಪ್ರಾಜೆಕ್ಟರ್, ಭಾರತ ಉಡಾವಣೆ ಮಾಡಿದ ಹತ್ತನೇ ಉಪಗ್ರಹ ರಿಯೋ ಸ್ಯಾಟ್ ಮಾದರಿ ತಯಾರು ಮಾಡಿದರು.

ನಂತರ ಲೋಕಲ್ ನೂನ್ ಅಂದರೆ ಮಧ್ಯಾಹ್ನದ ಸಮಯ ಕಂಡುಹಿಡಿಯುವ ಪ್ರಯೋಗವನ್ನು ಮಾಡಿದರು ಮತ್ತು ಶೂನ್ಯ ನೆರಳು ದಿನದ ಬಗ್ಗೆ ಮಾಹಿತಿ ಪಡೆದುಕೊಂಡರು.

ಮಧ್ಯಾಹ್ನದ ಅವಧಿಯಲ್ಲಿ ಡಾ.ಟಿ. ಶಿವಲಿಂಗಸ್ವಾಮಿ ರವರು ನಮ್ಮ ಸೌರಮಂಡಲದ ಹಲವು ಮಾಹಿತಿಗಳನ್ನು ನೀಡಿದರು.

ನಂತರ ಸಮಾರೋಪ ಸಮಾರಂಭದಲ್ಲಿ ಪೋಷಕರು ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು.

ಎಲ್ಲ ವಿದ್ಯಾರ್ಥಿಗಳು ಅಭಿನಂದನಾ ಪತ್ರವನ್ನು ಪಡೆದುಕೊಂಡರು.