ಮನೆ ಜ್ಯೋತಿಷ್ಯ ನೆಪ್ಚೂನ್

ನೆಪ್ಚೂನ್

0

ಜರ್ಮನ್ ದೇಶದ ಖಗೋಳ ವಿಜ್ಞಾನಿ ಬರ್ಲಿನ್ ಸಂಶೋಧನಾಲಯದಲ್ಲಿ 25 ಸೆಪ್ಟೆಂಬರ್ 1846 ರಾತ್ರಿಯಲ್ಲಿ ಆಕಾಶ ವೀಕ್ಷಣೆ ಮಾಡುತ್ತ ಈ ಗ್ರಹವನ್ನು ಕಂಡುಹಿಡಿದರು. ಅವನು ಯುರೇನಸ್ ಗ್ರಹದ ಪಥದ ಬಗ್ಗೆ ಅಧ್ಯಯನ ಮಾಡುತ್ತಿದ್ದನು. ಒಮ್ಮೆಲೆ ಅವನ ಲಕ್ಷ್ಯ ನೆಪ್ಚೂನ್ ಗ್ರಹದ ಮೇಲೆ ಬಿದ್ದಿತು. ಕೆಲವು ವರ್ಷಗಳ ಸತತ ಅಧ್ಯಯನದಿಂದ ಯುರೇನಸ್ ಗ್ರಹದ ಬಳಿಯಲ್ಲಿ ಚಲಿಸುವ ಇನ್ನೊಂದು ಗ್ರಹವನ್ನು ನೋಡಿದನು.    

ಯುನಾನಿಗಳು ಈ ಗ್ರಹಕ್ಕೆ ಜಲದೇವತೆ ವರುಣ ಎಂದು ಹೆಸರಿಟ್ಟರು. ಭಾರತೀಯರು ಸಹ ಅದೇ ಹೆಸರಿನಿಂದ ಕರೆದರು. ಸೂರ್ಯನನ್ನು ಒಂದು ಬಾರಿ ಸುತ್ತಿ ಬರಲು ವರುಣಗ್ರಹಕ್ಕೆ 165 ವರ್ಷಗಳ ಅವಧಿಯು ಬೇಕಾಗುವದು. ಒಂದು ರಾಶಿಯಲ್ಲಿ ಸುಮಾರು 14 ವರ್ಷ ಇರುವುದು. ಈ ಗ್ರಹವನ್ನ ಮೀನ ರಾಶಿಯ ಸ್ವಾಮಿ ಎಂದಿದ್ದಾರೆ. ಇದಕ್ಕೆ ಸಹ 7 ಅಂಕೆ ನೀಡಲಾಯಿತು.   

ವಿಜ್ಞಾನಿಗಳು ದೂರದರ್ಶಕದಿಂದಲೇ ಈ ಗ್ರಹವನ್ನು ವೀಕ್ಷಿಸಿ, ಈ ಗ್ರಹದಲ್ಲಿ ಶೀತ ವಾತಾವರಣವಿದೆ. ಯುರೇನಸ್ ಮತ್ತು ಶನಿ ಗ್ರಹಗಳಿಗಿಂತ ಭಿನ್ನ ಪ್ರಕಾಶವಿದೆ. ಆಕಾರದಲ್ಲಿ ಅತಿ ಚಿಕ್ಕದಾಗಿದೆ ಎಂದು ನಿರೂಪಿಸಿದರು. ಆದರೂ ಕೂಡ ಸ್ಪಷ್ಟವಾಗಿ ಏನನ್ನು ತಿಳಿಯಲಾಗಿಲ್ಲ.

ನೆಪ್ಚೂನ್  ಗ್ರಹದ ಪ್ರಭಾವ ಗುರು ಗ್ರಹದ ಪ್ರಭಾವದಂತಿದೆ. ಗುಣ ಧರ್ಮಗಳಲ್ಲಿ ಚಂದ್ರನಂತಿರುವುದು. ನೀರು ಬೇರೆ ಬಣ್ಣಗಳ ಸಂಬಂಧದಿಂದಾಗಿ ಬದಲಾಗದಂತೆ ಈ ಗ್ರಹವು ಇತರ ಗ್ರಹಗಳ ಯೋಗದಿಂದ ಅಧಿಕ ಪ್ರಭಾವವನ್ನುಂಟು ಮಾಡುವುದು.  

ನೆಪ್ಚೂನ್ ಗ್ರಹವು ಅಶುಭವಾದರೆ ಪಾಪಾಚರಣೆ ಮತ್ತು ಮರಣಗಳ ಸೂಚಕವಾಗಿರುವುದು. ಕರ್ಕ ಮತ್ತು ವೃಶ್ಚಿಕ ರಾಶಿಯಲ್ಲಿದ್ದಾಗ ಉತ್ತಮ ಫಲ ನೀಡುವುದು. ನೆಪ್ಚೂನ್ ಗ್ರಹವು ಸಮುದ್ರ ಯಾತ್ರೆ, ನದಿ ದಾಟುವುದು, ಸಮುದ್ರಶೋಧನೆ, ರಾಸಾಯನಿಕಗಳ ಸಂಶೋಧನೆ, ಮುಂತಾದ ವಿಷಯಗಳೊಂದಿಗೆ ಸಂಬಂಧ ಹೊಂದುವುದು. ಚಂದ್ರಗ್ರಹದೊಂದಿಗೆ ಪ್ರತಿ ಯೋಗ ಹೊಂದಿದರೆ ವ್ಯಕ್ತಿಗೆ ಪ್ರೇರಣೆ ಮತ್ತು ಸಿದ್ಧಿಯಾಗುವುದು.

ಶನಿಗ್ರಹದೊಂದಿಗೆ ಯೋಗ ಉಂಟಾದರೆ ವ್ಯಕ್ತಿಯು ಭಾವಕನಾಗವನು. ವಂಚಕತನ, ಮಾಯಾವಿತನ, ಕಳ್ಳತನ, ಮುಂತಾದ ರಾಹಸ್ಯಮಯ ಕಾರ್ಯ ಮಾಡಿಸುವನು. ಪಿತೃಧನ ಅಥವಾ ವಾರಸು ಆಸ್ತಿಯ ವಿಷಯದಲ್ಲಿ ನೆಪ್ಚೂನ್ ಗ್ರಹ ಪ್ರಭಾವಶಾಲಿಯಾಗಿರುವುದು. ಕೆಲವೊಮ್ಮೆ ಅಣೆಕಟ್ಟು ದುರ್ಘಟನೆ, ನೆರೆಹಾವಳಿ, ಸಮುದ್ರ ಯುದ್ಧದಲ್ಲಿ ಪ್ರಭಾವ ಬೀರುವುದು, ಅತಿವೃಷ್ಟಿ, ಅನಾವೃಷ್ಟಿಗಳ ಸೂಚಕವಾಗಿರುವುದು. 

ಈ ನೆಪ್ಚೂನ್ ಗ್ರಹವು ಸಂಯಮಿ, ವಿನಯ ಶೀಲಾ ಮತ್ತು ಸಾತ್ವಿಕ ಪ್ರಕೃತಿಯ ಗ್ರಹವಾಗಿದೆ.  ವಿನಾಶ, ಉಪದ್ರವ, ದಂಗೆ ಮುಂತಾದ ಧಾರ್ಮಿಕ ಆಂದೋಲನಗಳನ್ನು ಸಹ ಸೂಚಿಸುವುದು. ವರುಣ ಗ್ರಹವು ಜಲ ಸಂಬಂಧಿಸಿದ ವಿಚಾರಗಳು ಭೂತ, ಪ್ರೇತ ವಿಷಯಗಳು, ಜಾದೂ, ರಹಸ್ಯ, ವಿಜ್ಞಾನಗಳೊಂದಿಗೆ ಸಂಬಂಧ ಹೊಂದಿರುವುದು.

ನೆಪ್ಚೂನ್ ಗ್ರಹವು ಹೇಗಿದೆ ಎಂದು ತಿಳಿಯಲು ಸುಮಾರು 2 ನೂರು ವರ್ಷಗಳಿಂದ ಪ್ರಯತ್ನ ನಡೆದಿದೆ. ಏನನ್ನು ಹೇಳಲಾರದ ಸ್ಥಿತಿಯಲ್ಲಿ ವಿಜ್ಞಾನಿಗಳಿಸಿದ್ದಾರೆ. ಇದರ 7 ಅಂಕವು ವಿನಾಶದ ಹಾದಿಯನ್ನು ಸೂಚಿಸುವುದು. ಕರ್ಕ, ವೃಶ್ಚಿಕ ಅಥವಾ ಮೀನ ರಾಶಿಯಲ್ಲಿ ಸೂರ್ಯ ಅಥವಾ ಚಂದ್ರಯೊಂದಿಗೆ ಹುಟ್ಟಿದವರಿಗೆ ತೊಂದರೆ ಉಂಟಾಗುವುದೆಂದು ನಂಬಲಾಗಿದೆ. 

ನೆಪ್ಚೂನ್ ಗ್ರಹದಿಂದ ವ್ಯಕ್ತಿಯು ಚತುರ, ಸಮಯದ ಲಾಭ ಪಡೆಯುವನು, ವ್ಯಾಪಾರಿ, ಸಗಟು ವ್ಯಾಪಾರ ಮಾಡುವವನು, ವಿಶ್ರಾಂತಿ ಪ್ರಿಯ, ಮೀನು ರಕ್ಷಕ, ಸರ್ಕಸ್ ಮುಂತಾದ ಆಯಾಮಗಳನ್ನು ಸಾಧಿಸುವ ಲಾಭವನ್ನು ಈ ಗ್ರಹದ ಪ್ರಭಾವದಿಂದ ಜಲದಲ್ಲಿ ನೌಕೆ ನಡೆಸುವುದು, ರಕ್ತವಿಚಾರ ರೋಗ ಹೊಂದುವುದು, ಪಾಲುದಾರಿಕೆಯಲ್ಲಿ ಲಾಭಗಳಿಸುವುದು, ವಿದೇಶ ಪ್ರವಾಸ ಮಾಡುವುದು, ಅಂತರ್ಜಾತಿಯ ವಿವಾಹವಾಗುವುದು, ವೀರ್ಯ, ಅಪಚನ ವಾಗುವುದು ಮುಂತಾದವುಗಳನ್ನು ವ್ಯಕ್ತಿ ಹೊಂದಬಹುದಾಗಿದೆ.    

ನೆಪ್ಚೂನ್ ಗ್ರಹದ ನೇರ ಪರಿಣಾಮದ ಬಗ್ಗೆ ಇನ್ನೂ ಅಧ್ಯಯನ ಅಧ್ಯಯನವು ಮುಂದುವರೆದಿರುವುದು. ಈ ಎಲ್ಲಾ ರೀತಿಯ ಅನುಭವಗಳನ್ನು ಊಹಿಸಲಾಗಿದೆ ಆದರೆ ವಿದ್ವಾಂಸರು ಮುಂದಿನ ಶೋಧನೆಯಲ್ಲಿ ಸದಾ ನಿರತರಾಗಿದ್ದಾರೆ.