ಮನೆ ಹವಮಾನ ಮುಂಬೈಗೆ ಅಪ್ಪಳಿಸಲಿರುವ ‘ತೇಜ್ ಚಂಡಮಾರುತ’: ಹವಾಮಾನ ಇಲಾಖೆ ಎಚ್ಚರಿಕೆ

ಮುಂಬೈಗೆ ಅಪ್ಪಳಿಸಲಿರುವ ‘ತೇಜ್ ಚಂಡಮಾರುತ’: ಹವಾಮಾನ ಇಲಾಖೆ ಎಚ್ಚರಿಕೆ

0

ಮುಂಬೈ: ಮುಂಬೈಗೆ ‘ತೇಜ್ ಚಂಡಮಾರುತ’ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಅರಬ್ಬಿ ಸಮುದ್ರದ ಆಗ್ನೇಯ ಭಾಗದಲ್ಲಿ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗಿದ್ದು, ಇನ್ನೆರಡು-ಮೂರು ದಿನಗಳಲ್ಲಿ ಪ್ರಬಲ ಚಂಡಮಾರುತವಾಗಿ ಬದಲಾಗುವ ನಿರೀಕ್ಷಿಯಿದೆ. ಸದ್ಯ ಹವಾಮಾನ ಇಲಾಖೆ ಈ ಬಗ್ಗೆ ನಿರಂತರ ನಿಗಾ ಇರಿಸಿದೆ. ಅದೇ ಸಮಯದಲ್ಲಿ, ಅರಬ್ಬಿ ಸಮುದ್ರದಲ್ಲಿನ ಪರಿಸ್ಥಿತಿಗಳು ಚಂಡಮಾರುತವಾಗಿ ಮಾರ್ಪಟ್ಟರೆ, ಗಾಳಿಯು ಗಂಟೆಗೆ 60 ಕಿಮೀ ವೇಗದಲ್ಲಿ ಬೀಸಲಿದೆ. ಅಕ್ಟೋಬರ್ 20ರ ವೇಳೆಗೆ ಕಡಿಮೆ ಒತ್ತಡ ಉಂಟಾಗುವ ಸಾಧ್ಯತೆ ಇದೆ. ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ಉಂಟಾಗಿರುವ ಹಿನ್ನೆಲೆಯಲ್ಲಿ ಅಲ್ಲಿನ ಮೀನುಗಾರರು ದಡಕ್ಕೆ ಮರಳುವಂತೆ ಐಎಂಡಿ ಎಚ್ಚರಿಕೆ ನೀಡಿದೆ. ಮುಂದಿನ ಐದು ದಿನಗಳ ಕಾಲ ಬಹುತೇಕ ಭಾಗಗಳಲ್ಲಿ ಮಳೆಯ ವಾತಾವರಣ ಮುಂದುವರಿಯಬಹುದು.

ಕಡಿಮೆ ಒತ್ತಡದ ಪ್ರದೇಶವು ಇನ್ನೂ ಚಂಡಮಾರುತವಾಗಿ ಬದಲಾಗಿಲ್ಲ ಆದರೆ ಮುಂದಿನ 48 ಗಂಟೆ ನಿರ್ಣಾಯಕ ಎಂದು ಪರಿಗಣಿಸಲಾಗಿದೆ. ಒಂದು ವೇಳೆ ಚಂಡಮಾರುತ ತೇಜ್ ರೂಪುಗೊಂಡರೆ ಅದು ಕರಾವಳಿಯಿಂದ ಗುಜರಾತ್​ ಕಡೆಗೆ ಚಲಿಸಬಹುದು, ಚಂಡಮಾರುತವು ಮುಂಬೈ, ಪುಣೆಯಲ್ಲಿ ಬಿರುಗಾಳಿ ಸಹಿತ ಮಳೆಯನ್ನು ತರಬಹುದು ಎಂದು ಅಂದಾಜಿಸಲಾಗಿದೆ.

ಚಂಡಮಾರುತ ಪ್ರಭಾವದಿಂದಾಗಿ ಮುಂಬೈನಲ್ಲಿ ರಾತ್ರಿ ಉಷ್ಣಾಂಶ 22-23 ಡಿಗ್ರಿ ಸೆಲ್ಸಿಯಸ್​ ಇತ್ತು. ಚಂಡಮಾರುತದಿಂದಾಗಿ ದಕ್ಷಿಣ ಕೊಂಕಣದಲ್ಲಿ ಮಳೆಯಾಗಬಹುದು ಎಂದು ಅಂದಾಜಿಸಲಾಗಿದೆ.