ಮನೆ ಆರೋಗ್ಯ ಜನರಲೈಜ್ಡ್ ಟೋನಿಕ್ ಕ್ರೋನಿಕ್ ಸೀಜರ್ಸ್

ಜನರಲೈಜ್ಡ್ ಟೋನಿಕ್ ಕ್ರೋನಿಕ್ ಸೀಜರ್ಸ್

0

ಈ ರೀತಿಯಲ್ಲಿ ಫಿಟ್ಸ್ ತೀವ್ರವಾಗಿ ಬರುತ್ತದೆ .ಕೆಲವರಿಗೆ ಮೊದಲು ಪಾರ್ಷಿಯಲ್ ಮಾದರಿಯಲ್ಲಿ ಆರಂಭವಾಗಿ ನಂತರ ದೊಡ್ಡ ಫಿಟ್ಸ್ ಗೆ (ಜನರಲೈಸ್ಡ್ ಟೋನಿಕ್ ಕ್ರೋನಿಕ್) ಬದಲಾಗುತ್ತದೆ. ಕೆಲವರಿಗೆ ಆರಂಭವೇ ದೊಡ್ಡ ಫಿಟ್ಸ್ ಆಗಿರುತ್ತದೆ. ಇದು ಸಂಪೂರ್ಣ ಫಿಟ್ಸ್ ಗೆ ಸಂಬಂಧಿಸಿದ ಎಲ್ಲ ಕ್ಷಣಗಳು ಇರುತ್ತದೆ. ಈ ಫಿಟ್ಸ್ ಬರುವ ಮುಂಚೆ ವ್ಯಕ್ತಿಯಲ್ಲಿ ಕೆಲವು ವಿಲಕ್ಷಣಗಳೂ ಅನುಭವಗಳಾಗಬಹುದು.

ವಿಲಕ್ಷಣ ಅನುಭವಗಳನ್ನ ʼಆರಾʼ ಎನ್ನುತ್ತಾರೆ. ಈ ಆರಾದಲ್ಲಿ ಕಣ್ಣಿನ ಮುಂದೆ ಮಿಂಚಿದಂಥಾಗಬಹುದು, ಇಲ್ಲವೇ ಮೂಗಿಗೆ ವಾಸನೆ, ದುರ್ವಾಸನೆ ಅನುಭವ ಆಗಬಹುದು. ಇದೆಲ್ಲ ಕ್ಷಣಕಾಲವಷ್ಟೇ ಹಿಂದೆಯೇ ಫಿಟ್ಸ್ ಬಂದು ಪ್ರಜ್ಞೆಕಳೆದುಕೊಳ್ಳುತ್ತಾರೆ. ಆರಾ ಬರುತ್ತಿದ್ದಂತೆ ಫಿಟ್ಸ್ ಬರುತ್ತಿರುವುದು ರೋಗಿಗೆ ತಿಳಿಯುತ್ತದೆ. ಆದರೆ ಕ್ಷಣಾರ್ಧದಲ್ಲಿ ಫಿಟ್ಸ್ ಬರುವುದರಿಂದ ತನ್ನನ್ನು ತಾನು ನಿಯಂತ್ರಿಸಿ ಕೊಳ್ಳಲಾಗುವುದಿಲ್ಲ. ಕೆಲವರಿಗೆ ʼಆರಾʼ ಇಲ್ಲದಿರಬಹುದು.

ಆರಾ ಇರುವ ಕೆಲವು ಫಿಟ್ಸ್ ಬರುವ ಮುಂಚೆ ಅರಚುತ್ತಾರೆ. ಹಿಂದೆಯೇ ಪ್ರಜ್ಞೆ ಕಳೆದುಕೊಳ್ಳುತ್ತಾರೆ. ಮೊದಲು ಕಣ್ಣು ಗುಡ್ಡೆಗಳು ವರ್ತುಲವಾಗಿ ಸುತ್ತುತ್ತದೆ. ಶರೀರದ ಮಾಂಸ ಖಂಡಗಳಲ್ಲ ಬಿಗಿದುಕೊಳ್ಳುತ್ತದೆ. ಗಂಟಲು ಬಳಿಯ ಸ್ನಾಯುಗಳು ಕೂಡ ಬಿಗಿದುಕೊಳ್ಳುವುದರಿಂದ, ಕ್ಷಣಕಾಲ ಉಸಿರಾಟ ನೀಡುತ್ತದೆ. ಇದರಿಂದ ಕೆಲವು ಮಕ್ಕಳ ಮೈ ನೀಲಿಯಾಗುತ್ತದೆ. ನಂತರ ಸ್ನಾಯುಗಳು ಸಡಿಲವಾದಂತಾಗುತ್ತದೆ, ಮಡಚಿಕೊಳ್ಳುತ್ತದೆ.   ಆನಂತರ ಶರೀರದ ಸ್ನಾಯುಗಳೆಲ್ಲ ತೀವ್ರವಾದ ಸ್ಪಾಂಜಿಗೀಡಾಗಿ ಫಿಟ್ಸ್ ಗೆ ರೂಪಾಂತರವಾಗುತ್ತದೆ. ತೀರ ತರಹದ ಫಿಟ್ಸ್ ಸ್ವಲ್ಪ ಸಮಯ ಇದ್ದು ನಂತರ ಕಡಿಮೆಯಾಗುತ್ತದೆ. ಫಿಟ್ಸ್ ಬಂದಾಗ ನಾಲಿಗೆ ಕಚ್ಚಿಕೊಳ್ಳುವುದು, ಬಟ್ಟೆಗಳಲ್ಲಿ ಮೂತ್ರ ವಿಸರ್ಜನೆ ಮಾಡಿಕೊಳ್ಳುವುದು ನಡೆಯುತ್ತದೆ. ಅನಂತರ ವಾಂತಿಯಾಗಬಹುದು ತಲೆನೋವು ತೀವ್ರವಾಗಿರಬಹುದು.

ಫಿಟ್ಸ್ – ಮುಂಜಾಗ್ರತೆಗಳು :-

ಫಿಟ್ಸ್ ಬಂದಾಗ ಬಾಯಿಯನ್ನು ಬಿಗಿಯಾಗಿ ಕಚ್ಚಿಕೊಳ್ಳುತ್ತಾರೆ. ಹಲ್ಲುಗಳ ಮಧ್ಯದಲ್ಲಿ ನಾಲಿಗೆ ಸಿಕ್ಕಿಕೊಳ್ಳುತ್ತದೆ. ಹಲ್ಲುಗಳು ನಾಲಿಗೆಯಲ್ಲಿ ನಾಟಿರುತ್ತದೆ. ಬಲಪ್ರಯೋಗ ಮಾಡಿದರೆ ಹಲ್ಲು ಮುರಿವ ಸಾಧ್ಯತೆ ಇರುತ್ತದೆ. ಹಾಗೆ ಮಾಡಿದ ಹಲ್ಲುಗಳು ಹಿಂದಕ್ಕೆ ಹೋಗಿ ಶ್ವಾಸಕೋಶಗಳೊಳಗೆ ಸೇರಬಹುದು.

ಜನರಲೈಜ್ಡ್ ಕ್ರೋನಿಕ್ ಟ್ರೋನಿಕ್ ಸೀಜರ್ಸ್ ಇರುವವರಿಗೆ ಜ್ವರ ಬಂದರೆ, ಹೆಚ್ಚು ಸುಸ್ತಾದರೆ, ಮಾನಸಿಕ ಒತ್ತಡ ಜಾಸ್ತಿ ಆದರೆ ಫಿಟ್ಸ್ ಬರುವ ಸಂಭವವಿರುತ್ತದೆ.

ಫಿಟ್ಸ್ ಬಂದ ತಕ್ಷಣ ಮೈಮೇಲೆ ಬಿಗಿಯಾಗಿರುವ ಬಟ್ಟೆಗಳನ್ನು ಸಡಿಲಗೊಳಿಸಬೇಕು. ಫಿಡ್ಸ್ ರೋಗಿಯನ್ನು ನೆಲದ ಮೇಲೆ ಪಕ್ಕಕ್ಕೆ ತಿರುಗಿಸಿ ಮಲಗಿಸಬೇಕು. ಕತ್ತನ್ನು ಹಿಂದಕ್ಕೆ ಬಾಗಿಸಿ ಹಿಡಿದುಕೊಳ್ಳಬೇಕು. ಕತ್ತನ್ನು ಹಿಂದಕ್ಕೆ ಬಾಗಿಸಿ ಹಿಡಿದುಕೊಳ್ಳುವುದರಿಂದ ಸರಾಗವಾಗಿ ಉಸಿರಾಡಲು ಸಾಧ್ಯವಾಗುತ್ತದೆ.

ತಲೆಗೆ ಪೆಟ್ಟಾದಾಗ ಪಿಟ್ಸ್ :-

ತಲೆಗೆ ಪೆಟ್ಟಾದಾಗ ಮೂರ್ಛೆ ಬರಬಹುದು. ಪೆಟ್ಟು ಸಣ್ಣದಿದ್ದರೂ ಮುರ್ಛೆ ಬರಬಹುದು. ಇಂತಹ ಫಿಟ್ಸ್ ತಾತ್ಕಾಲಿಕವಾಗಿರುತ್ತದೆ. ಬಹಳ ಕಡಿಮೆ ಸಮಯವಷ್ಟೇ ಇರುತ್ತದೆ. ಇಂತಹ ಫಿಟ್ಸ್ ಕಡಿಮೆಯಾಗಲು ಮತ್ತೆ ಮತ್ತೆ ಬಾರದಿರಲು ಔಷಧಿ ಬಳಸುವ ಅಗತ್ಯವೇನೂ ಇಲ್ಲ. ಒಂದೆರಡು ದಿನ ಬಿಟ್ಟು ಮತ್ತೆ ಫಿಟ್ಸ್ ಬಂದರೆ ಅದು ಕಡಿಮೆಯಾಗಲು ಔಷಧಿ ಬಳಸಬೇಕಾಗುತ್ತದೆ. ತಲೆಗೆ ಪೆಟ್ಟಾದ ಕೆಲ ಕಾಲದ ನಂತರ ಫಿಟ್ಸ್ ಕಂಡುಬಂದರೆ, ಪೆಟ್ಟಿನಿಂದ ಮೆದುಳಿಗೆ ನೀರು ಸೇರಿರುವ ಕಾರಣವಾಗಿರಬಹುದು. ಇಲ್ಲವೇ ಮೆದುಳಿನಲ್ಲಿ ರಕ್ತಸ್ರಾವವಾಗಿರಲೂಬಹುದು. ಇಂತಹ ಫಿಟ್ಸ್ ಗೆ ಔಷಧಿ ಬಳಸಬೇಕು. ಈ ಔಷಧಿಯಿಂದ ಪ್ರತ್ಯೇಕವಾಗಿ ಮಂಪರು ಬರುವುದಿಲ್ಲ.

ಮಕ್ಕಳಲ್ಲಿ ಮಯೋಕ್ಲೋನಿಕ್ ಸೀಜರ್ಸ್ :-

ಈ ರೀತಿಯಲ್ಲಿ ಫಿಟ್ಸ್ ಒಂದೇ ರೀತಿಯಲ್ಲಿ ಹಿಂದಿಂದೆಯೇ ಬರುತ್ತದೆ. ಬಹಳ ಚಡಿಲವಾಗಿರುವುದರಿಂದ ಹಿಡಿತ ಸಿಗದೇ ಮುಂದಕ್ಕೆ ಬೀಳುವ ಸಂಭವಿಸುತ್ತದೆ. ಆದ್ದರಿಂದ ಬಾಯಿಗೆ, ಮುಖಕ್ಕೆ ಪೆಟ್ಟಾಗುತ್ತದೆ. ಇಂತಹ ಫಿಟ್ಸ್ ಗೆ ಸೋಡಿಯಂ ವೇಲಪೆರೇಟ್ ಕ್ಲೋನಜo ಔಷಧಿಗಳನ್ನು ಬಳಸಬೇಕು.

ಸಿಜರ್ಸ್ ನಿರ್ಧಾರ :-

ಫಿಟ್ಸ್ ಏಕೆ ಬರುತ್ತದೆ ಎಂಬುದನ್ನ ನಿರ್ಧರಿಸಲು ಮಗುವಿನ ವಯಸ್ಸು, ಆರೋಗ್ಯದ ಸ್ಥಿತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ಮಗುವಿಗೆ ಆ ಮುಂಚೆ ಯಾವುದೇ ಆರೋಗ್ಯದ ಸಮಸ್ಯೆಗಳಿಲ್ಲದೆ ಫಿಟ್ಸ್ ಬಂದರೆ, ಆ ಜ್ವರ ಯಾವುದೆಂಬುದನ್ನ ಪರಿಶೀಲಿಸಬೇಕು. ಮಾಮೂಲಿ ಜ್ವರದಿಂದಲೂ ಫಿಟ್ಸ್ ಬರಬಹುದು. ಸೋಂಕಿನಿಂದಲೂ ಫಿಟ್ಸ್ ಬರಬಹುದು. ಇಂತಹ ಮಕ್ಕಳಿಗೆ ಫಾಸ್ಟಿಂಗ್ ಗ್ಲುಕೋಸ್, ಕ್ಯಾಲ್ಸಿಯಂ, ಮೆಗ್ನೀಷಿಯಂ, ಎಲೆಕ್ಟ್ರೋಲೈಟ್ಸ್, ಎಸ್ಟಿಮೇಟ್ ಮಾಡಬೇಕು. ಇ.ಇ.ಜಿ. ತೆಗೆಯಬೇಕು. ಎನ್ ಕೆಫಲೈಟಿಸ್, ಮೆನಿಂಜೈಟಿಸ್ ಅನುಮಾನವಿದ್ದರೆ ಸಿಎನ್ಎಫ್ ಪರೀಕ್ಷೆ ಮಾಡಬೇಕು.    

ಕೆಲವು ಸಂದರ್ಭಗಳಲ್ಲಿ ಸಿ.ಟಿ. ಸ್ಕ್ಯಾನ್, ಎಂ.ಆರ್.ಇ ಕೂಡ ಅಗತ್ಯವಾಗುತ್ತದೆ.

ಫಿಟ್ಸ್ ಔಷಧಿಗಳ ಬಗ್ಗೆ ತಿಳುವಳಿಕೆ :-

ಪಿಟ್ಸ್ ಔಷಧಿಗಳನ್ನು ಆರಂಭಿಸುವ ಮೊದಲು ಅದು ಮತ್ತೊಂದು ಎಂಬುದನ್ನು ಸ್ಪಷ್ಟವಾಗಿ ಗಮನಿಸಬೇಕು.  ಶಾರೀರಿಕವಾದ ಫಿಟ್ಸ್ ಕೆಲವರಿಗೆ ಬರುತ್ತದೆ. ಹಾಗಾಗಿ ನಿಜವಾದ ಫಿಟ್ಸ್ ಮತ್ತು ಶಾರೀರಿಕವಾದ ಫಿಟ್ಸ್ ವ್ಯತ್ಯಾಸವನ್ನು ಗುರುತಿಸಬೇಕು. ಫಿಟ್ಸ್ ಬರಲು ಮೂಲ ಕಾರಣವನ್ನು ಸ್ಪಷ್ಟವಾಗಿ ತಿಳಿದಿರಬೇಕು.

ಫಿಟ್ಸ್ ಬಂದಾಗ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು, ಫಿಟ್ಸ್ ಬರುವ ಮೊದಲು ಎಲ್ಲಾ ರೀತಿಯಿಂದಲೂ ಆರೋಗ್ಯವಾಗಿದ್ದು, ಕುಟುಂಬದಲ್ಲಿ ಯಾರಿಗೂ ಫಿಟ್ಸ್ ನ ಸಮಸ್ಯೆ ಇಲ್ಲವೆಂದಾಗ ಒಂದು ಸಾರಿ ಫಿಟ್ಸ್ ಬಂದ ಮಾತ್ರಕ್ಕೆ ಔಷಧಿಗಳನ್ನ ಆರಂಭಿಸುವ ಅಗತ್ಯವಿಲ್ಲ. ಸಾಮಾನ್ಯವಾಗಿ ಇಂಥ ಶೇ. 70 ರಷ್ಟು ಮಂದಿಗೆ ಮತ್ತೆ ಪಿಟ್ಸ್ ಬರುವುದಿಲ್ಲ. ತಂದೆ ತಾಯಿಯರಿಗಾಗಲಿ, ಕುಟುಂಬದಲ್ಲಾಗಲಿ ಯಾರಿಗಾದರೂ ಫಿಟ್ಸ್ ಇದ್ದರೆ ಮಾತ್ರ ಔಷಧಿಗಳನ್ನ ಆರಂಭಿಸಬೇಕು. ಫಿಟ್ಸ್ ಬರುವಂತಹ ಅನಾರೋಗ್ಯ ಮಗುವಿನಲ್ಲಿದ್ದರೂ ಕೂಡ ಮೊದಲ ಸಲವೇ ಔಷಧಿ ಆರಂಭಿಸಬಹುದು. ಒಂದು ಸಾರಿ ಫಿಟ್ಸ್ ಬಂದಿದ್ದು, ನಂತರ ಕೆಲವು ದಿನಗಳ ಅಥವಾ ವಾರಗಳೊಳಗೆ ಫಿಟ್ಸ್ ಬಂದರೆ ತಕ್ಷಣ ಔಷಧಿ ಆರಂಭಿಸಬೇಕು.

-ಮುಂದುವರೆಯುತ್ತದೆ….