ಮನೆ ರಾಜ್ಯ ಕಾವೇರಿ ಸಮಸ್ಯೆಗೆ  ರಾಷ್ಟ್ರೀಯ ಜಲ ನೀತಿ ಪರಿಹಾರ: ಜಯ ಮೃತ್ಯುಂಜಯ ಸ್ವಾಮೀಜಿ

ಕಾವೇರಿ ಸಮಸ್ಯೆಗೆ  ರಾಷ್ಟ್ರೀಯ ಜಲ ನೀತಿ ಪರಿಹಾರ: ಜಯ ಮೃತ್ಯುಂಜಯ ಸ್ವಾಮೀಜಿ

0

ಮಂಡ್ಯ: ಕಾವೇರಿ ಸಮಸ್ಯೆ ಪರಿಹಾರಕ್ಕೆ ರಾಷ್ಟ್ರೀಯ ಜಲ ನೀತಿ ಜಾರಿಗೆ ತರಬೇಕು. ರಾಷ್ಟ್ರೀಯ ಜಲ ನೀತಿ ಜಾರಿಗೆ ತಂದು ದೇಶವ್ಯಾಪಿ ಅಣೆಕಟ್ಟುಗಳನ್ನು ಜಾರಿಗೆ ತನ್ನಿ. ನೀರಿನ ಹಕ್ಕು ಪ್ರತಿಯೊಬ್ಬನಿಗೂ ಸಲ್ಲುವಂತೆ ಮಾಡಿ ಎಂದು ಕೂಡಲಸಂಗಮ ಮಠದ ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ಮಂಡ್ಯ ಜಿಲ್ಲಾ ರೈತಹಿತರಕ್ಷಣಾ ಸಮಿತಿ ಹೋರಾಟದಲ್ಲಿ ಕೂಡಲಸಂಗಮ ಮಠದ ಜಯಮೃತ್ಯುಂಜಯ ಸ್ವಾಮೀಜಿ ಭಾಗಿಯಾಗಿದ್ದಾರೆ.

ಮಂಡ್ಯದ ಸಂಜಯ್ ವೃತ್ತದಲ್ಲಿ ರೈತರ ಜೊತೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ಸಂಜಯ್ ವೃತ್ತದಿಂದ ವಿಶ್ವೇಶ್ವರಯ್ಯ ಪ್ರತಿಮೆವರೆಗೆ ಮೆರವಣಿಗೆ ನಡೆಸಲಾಯಿತು. ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಎತ್ತಿನಗಾಡಿಯಲ್ಲಿ ಸ್ವಾಮೀಜಿ ಆಗಮಿಸಿದ್ದಾರೆ.

ಈ ವೇಳೆ ಮಾತನಾಡಿದ ಅವರು, ಅಧಿಕಾರ ಶಾಶ್ವತ ಅಲ್ಲ, ಆದರೆ ಕಾವೇರಿ ನೀರು ಶಾಶ್ವತ. ಕಾವೇರಿ ವಿಚಾರದಲ್ಲಿ ಜಾತಿ ಬೇದ, ಪಕ್ಷ ಮರೆತು ಜೊತೆಯಲ್ಲಿ ಇರಬೇಕು ಎಂದರು.

ಕಾವೇರಿ ನೀರನ್ನ ಕದ್ದುಮುಚ್ಚಿ ತಮಿಳುನಾಡಿಗೆ ಹರಿಸುತ್ತಿರುವ ಸರ್ಕಾರದ ನಡೆಯನ್ನ ಖಂಡಿಸಿ ಇಲ್ಲಿಗೆ ಬಂದಿದ್ದೆವೆ. ಕಾವೇರಿ ಚಳುವಳಿ ಸದಾಕಾಲ ಬೆಂಬಲ ನೀಡುತ್ತಾ ಬಂದಿದ್ದೆವೆ. ಕಳೆದ 5 ವರ್ಷಗಳ ಹಿಂದೆಯೂ ಬೆಂಬಲ ಕೊಟ್ಟಿದ್ದೆ. ಉತ್ತರ ಕರ್ನಾಟಕದ ಪರವಾಗಿ ಇಂದು‌ ಹಾಗೂ ಮುಂದು ಬೆಂಬಲ ಕೊಟ್ಟೇ ಕೊಡ್ತಿನಿ ಎಂದರು.

ಒಂದು ಕಣ್ಣಿಗೆ ನೋವಾದರೇ ಎಲ್ಲ ಜನರು ಸ್ಪಂದನೆ ಮಾಡಬೇಕು. ಪ್ರತಿಯೊಬ್ಬ ಪ್ರಜೆಗೂ ಕಾವೇರಿ ತಾಯಿಯ ಋಣ ಇದೆ. ಇದು ಶತಕಗಳ ಸಮಸ್ಯೆಯಾಗಿ ಪರಿಣಮಿಸಿದೆ. ಇದು ಮೈಸೂರು ರಾಜ ಕಾಲದಿಂದಲೂ ಈ ಸಮಸ್ಯೆ ಇದೆ. ಕಾವೇರಿ ನದಿ ನೀರು ನಮ್ಮ ಹಕ್ಕು ಎಂಬ ಪ್ರತಿಪಾದನೆ ಮಾಡುವ ಕೆಲಸವನ್ನ ಸರ್ಕಾರಗಳು ಮಾಡ್ತಿಲ್ಲ. ಸರ್ಕಾರಗಳ ಮೇಲಾಟದಿಂದ ಈ ಸಮಸ್ಯೆ ಸಮಸ್ಯೆಯಾಗಿಯೇ ಇದೆ ಎಂದರು.

ಪ್ರಾಧಿಕಾರ ನೀಡಿದ ತೀರ್ಪು ಅಂದಿನ ಕಾಲಕ್ಕೆ ಸರಿ ಇತ್ತು. ಆದರೆ ಇಂದು ಆ ಪರಿಸ್ಥಿತಿ ಇಲ್ಲ. ಪ್ರಾಧಿಕಾರ ಅಮಾನವೀಯವಾಗಿ ತೀರ್ಪು ನೀಡ್ತಿದ್ದಿರಿ ಎಂದು ಕಿಡಿಕಾರಿದರು.

ಮೇಕೆದಾಟು ಯೋಜನೆಗೂ ತಮಿಳುನಾಡು ಅಡ್ಡಗಾಲು ಹಾಕುತ್ತಿದೆ. ಪ್ರಾಧಿಕಾರ ಪ್ರತಿ ಬಾರಿಯೂ ಅನ್ಯಾಯ ಮಾಡ್ತಾ ಬಂದಿದೆ. ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದರು.

ಸರ್ಕಾರ ಜಂಟಿ ಅಧಿವೇಶನ ಕಡೆದು ಸುರ್ಗಿವಾಜ್ಙೆ ತನ್ನಿ. ರೈತರ ಸಹನೆ ಒಡೆದಿದೆ. ಇವತ್ತು ಕಾವೇರಿ ಗ್ಯಾರಂಟಿ ಬೇಕಾಗಿದೆ. ಅದನ್ನು ಕೊಡುವ ಕೆಲಸ ಮಾಡಬೇಕು. ಕರ್ನಾಟಕದ ಎಲ್ಲಾ ಮಠಾಧೀಶರ ಬೆಂಬಲ ಇದ್ದೆ ಇರುತ್ತೆ. ಕೃಷ್ಣೆ ಹೋರಾಕ್ಕೆ ನೀವು ಬೆಂಬಲಕೊಟ್ಟಿದ್ದಿರಿ. ಕಾವೇರಿ ಹೋರಾಟಕ್ಕೆ ನಾವು ಬೆಂಬಲ ಕೊಡ್ತಿವಿ. ಕಿವಿ ಇದ್ದು ಕಿವುಡಾಗಿರೋ ಸರ್ಕಾರದ ನಡೆ ಖಂಡನೀಯ ಎಂದು ಹೇಳಿದರು.