ಮನೆ ಯೋಗಾಸನ ಯೋಗಸನಗಳು, ಬಂಧ ಮತ್ತು ಕ್ರಿಯೆ. ಸೂಚನೆಗಳು ಮುನ್ನೆಚ್ಚರಿಕೆ ಅಭ್ಯಾಸಕ್ರಮ ಮತ್ತು ಪರಿಣಾಮಗಳು.

ಯೋಗಸನಗಳು, ಬಂಧ ಮತ್ತು ಕ್ರಿಯೆ. ಸೂಚನೆಗಳು ಮುನ್ನೆಚ್ಚರಿಕೆ ಅಭ್ಯಾಸಕ್ರಮ ಮತ್ತು ಪರಿಣಾಮಗಳು.

0

[ ಸೂಚನೆ : ಪ್ರತಿಯೊಂದು ಆಸನದ ಹೆಸರಿನ ಅನಂತರ ನಕ್ಷತ್ರ ಚಿನ್ಹೆಯನ್ನು ಹೊಂದಿರುವ ಸಂಖ್ಯೆಯನ್ನು ಕೊಟ್ಟಿದೆ. ಈ ಸಂಖ್ಯೆಗಳು ಆಯಾ ಆಸನಗಳ ಅಭ್ಯಾಸದ ತೀವ್ರತೆಯನ್ನು ಸೂಚಿಸುತ್ತದೆ. ಈ ಸಂಖ್ಯೆಯು ಬೆಲೆ ಕಡಿಮೆ ಆದಷ್ಟು ಅವುಗಳನ್ನು ಅಭ್ಯಾಸ ಮಾಡುವುದು ಅಷ್ಟು ಸುಲಭವೆಂದು ಅವುಗಳ ಮೇಲೆ ಹೆಚ್ಚಿದಷ್ಟು ಆಸನಗಳ ಅಭ್ಯಾಸ ಮಾಡುವಷ್ಟು ಕಷ್ಟವೆಂದು ತಿಳಿಯಬೇಕು. ಈ ಆಸನಗಳಲ್ಲಿ ಅತ್ಯಂತ ಸುಲಭವಾದ ಆಸನಕ್ಕೆ ʼಒಂದುʼ ಎಂಬ ಸಂಖ್ಯೆಯನ್ನು ಹೇಗೆ ಮೇಲೇರುತ್ತ ಅತಿ ಕ್ಲಿಷ್ಟವಾದ ಆಸನಕ್ಕೆ 60 ಎಂಬ ಸಂಖ್ಯೆಯನ್ನು ಎಂಬ ( ನಕ್ಷತ್ರ ) ಗುರುತಿನೋಡನೆ ಅಳವಡಿಸಿದೆ.]

Join Our Whatsapp Group

ಯೋಗಸನಗಳು ಆಸನಗಳ ಅಭ್ಯಾಸಕ್ಕೆ ಅತ್ಯಾವಶ್ಯಕವೆನಿಸಿದ ಸೂಚನೆಗಳು ಮತ್ತು ಮುನ್ನೆಚ್ಚರಿಕೆಗಳು

ಆಸನಬ್ಯಾಸಿಗೆ ಇರಬೇಕಾದ ಮುಖ್ಯ ಗುಣಗಳು:

ಸುಭದ್ರವಾದ ತಳಹದಿ (ಬುನಾದಿ)ಯಿರದಿದ್ದರೆ ಕಟ್ಟಡವು ಹೇಗೆ ಬಹುದಿನ ನಿಲ್ಲಲಾರದೋ ಆದರಂತೆ ಯಮನಿಯಮಗಳಲ್ಲಿರುವ ತತ್ವವನ್ನು ಆಚರಿಸದಿದ್ದಲ್ಲಿ ಮಾನವರು ಸಚಾರಿತ್ಯವೆಂಬ ಭವ್ಯ ಸೌಧವನ್ನು ಎಂದಿಗೂ ಕಟ್ಟಲಾರ ಮತ್ತು ಅವನಿಗೆ ಮಾನವೀಯತೆಯ ಪೂರ್ಣ ವ್ಯಕ್ತಿತ್ವ ದೊರಕಲಾರದು. ಈ ಯಮನಿಯಮಗಳ ಆಶ್ರಯ ಹೊಂದದೆ ಆಸನಗಳನ್ನು ಅಭ್ಯಾಸೀಸುವುದೆಂದರೆ ಅದು ಒಂದು ದೊಂಬರಾಟ.

ಆಸನಗಳ ಅಭ್ಯಾಸದಲ್ಲಿ ಪರಿಣತಿಯನ್ನ ಪಡೆಯ ಬಯಸುವವನಿಗೆ ಶಿಸ್ತು, ದೃಢ, ನಂಬಿಕೆ, ಮನೋದಾರ್ಢ್ಯಾ ಮತ್ತು ಗುರಿಯನ್ನು ಸಾಧಿಸಲು ಎಡೆತಡೆಗಳನೆದುರಿಸುವ ಸತತ ಪ್ರಯತ್ನ – ಈ ಮುಖ್ಯ ಗುಣಗಳಿರಬೇಕಾದದ್ದು ಅತ್ಯವಶ್ಯಕ.

ನೈರ್ಮಲ್ಯ (ಶುಚಿತ್ವ) ಮತ್ತು ಆಹಾರ ನಿಯಮ :-

ಆಸನಗಳನ್ನು ಅಭ್ಯಾಸಿಸುವ ಮುನ್ನ ಅಭ್ಯಾಸಿಯು ತನ್ನ ಮಲಮೂತ್ರ ಕೋಶಗಳನ್ನು ಬರಿದು ಮಾಡಿರಬೇಕು. ತಲೆಕೆಳಾಗುಮಾಡಬೇಕಾದ ಆಸನಭಂಗಿಗಳು ಕರುಳಿನ ಚಲನೆ ಹೆಚ್ಚಿಸಿ ಮಲವಿಸರ್ಜನೆಗೆ ಅನುಕೂಲವುಂಟುಮಾಡುತ್ತದೆ. ಅಭ್ಯಾಸಕ್ಕೆ ಮಲಬದ್ಧತೆ ಇದ್ದು ಆಸನಗಳನ್ನು ಅಭ್ಯಾಸಕ್ಕೆ ಮುಂಚೆ ಮಲವಿಸರ್ಜನೆ ಆಗಿಲ್ಲದಿದ್ದರೆ, ಆತನು ಇತರ ಆಸನಗಳನ್ನು ಅಭ್ಯಾಸನ ಸರ್ವಂಗ ಮತ್ತು ಅವುಗಳಲ್ಲಿಯ ವಿವಿಧ ವ್ಯತ್ಯಾಸ ಭಂಗಿಗಳ ಅಭ್ಯಾಸದಲ್ಲಿ ತೊಡಗಬೇಕು. ಮಲಕೋಶವನ್ನು ಮೊದಲು ಬರೆದುಕೊಂಡು ಬಳಿಕವೇ ಮುಂದುವರಿದ ಆಸನಭ್ಯಾಸಗಳನ್ನು ಮಾಡಬೇಕು…
ಸ್ನಾನ :-
ಚೆನ್ನಾಗಿ ಕೈ ತೊಳೆದುಕೊಂಡಮೇಲೆ ಆಸನಭ್ಯಾಸವು ಸುಗಮವಾಗುತ್ತದೆ. ಆಸನ ಅಭ್ಯಾಸಗಳು ಮುಗಿದ ಮೇಲೆ ಬೆವರಿಟ್ಟು ಮೈ ಆಂಟಾಗಿರುವುದರಿಂದ ಸುಮಾರು 15 ನಿಮಿಷಗಳು ಕಳೆದ ನಂತರ ಮಯೂಜ್ಜಿ ಸ್ನಾನ ಮಾಡುವುದು ಒಳ್ಳೆಯದು. ಆಸನ ಅಭ್ಯಾಸ ಮಾಡುವ ಮುನ್ನ ಮತ್ತು ಅದು ಮುಗಿದ ಮೇಲೆ ಚೆನ್ನಾಗಿ ಮೈ ತೊಳಿಯುವುದರಿಂದ ಮೈ ಹಗುರವಾಗಿ ಮನಸ್ಸಿನಲ್ಲಿ ಲವಲವಿಕೆ ಮೂಡುವುದು.
ಆಹಾರ ನಿಯಮ :-
ಖಾಲಿ ಹೊಟ್ಟೆಯಲ್ಲಿಯೇ ಆಸನ ಅಭ್ಯಾಸಗಳನ್ನು ಮಾಡುವುದು ಉತ್ತಮ ಪದ್ಧತಿ. ಇದು ಅಭ್ಯಾಸ ಕಲಿಕೆ ಕಷ್ಟವೆಂದು ಕಂಡುಬಂದಲ್ಲಿ ಒಂದು ಲೋಟ ಕಾಫಿ, ಟೀ, ಕೋಕೋ, ಇಲ್ಲವೇ ಹಾಲು ಇವನ್ನು ಸೇವಿಸಿ, ಬಳಿಕ ಅಭ್ಯಾಸವನ್ನು ಕೈಗೊಳ್ಳಬಹುದು. ಅಲ್ಲದಿದ್ದರೆ ಹಗುರವಾದ ಆಹಾರವನ್ನು ಮಿತವಾಗಿ ಬೋಧಿಸಿ ಒಂದು ಗಂಟೆಯಾದ ಮೇಲೆ ಆಸನ ಅಭ್ಯಾಸ ತೊಳಗಬಹುದು. ಆದರೆ ಹೊಟ್ಟೆ ತುಂಬಾ ಉಂಡ ಮೇಲೆ ಕಡೆಯ ಪಕ್ಷ ನಾಲ್ಕು ತಾಸನಾದರೂ ಬಿಟ್ಟು ಈ ಅಭ್ಯಾಸಕ್ಕೆ ಕೈ ಹಚ್ಚಬಹುದು. ಆಸನ ಅಭ್ಯಾಸ ಮುಗಿದ ಅರ್ಧ ತಾಸನಾದರೂ ಕಳೆದು ಆಹಾರವನ್ನ ಸೇವಿಸಬಹುದು.
ಆಸನಾಭ್ಯಾಸಕ್ಕೆ ತಕ್ಕಕಾಲ :-
ಆಸನಭ್ಯಾಸಕ್ಕೆ ಬೆಳಗಿನ ಮುಂಜಾನೆ ಮತ್ತು ಮುಂಬರಿತ ಸಂಜೆ ಅತ್ಯುತ್ತಮ. ಪ್ರಾಂತಕಾಲದಲ್ಲಿ ಶರೀರ ಅಂಗಾಂಗಗಳ ಚಲನವಲನಗಳು ಸ್ವಲ್ಪ ಕಷ್ಟವಾಗಿರುವುದರಿಂದ, ಆಗ ಆಸನ ಅಭ್ಯಾಸಗಳು ಸುಲಭವಾಗಿರದಿದ್ದರೂ, ಮನಸ್ಸು ಮಾತ್ರ ಬಹಳ ತಿಳಿಯಾಗಿರುತ್ತದೆ. ಕಾಲವೇರುತ್ತಾ ಬರಲು ಮನಸ್ಸಿನ ಚಟುವಟಿಕೆ ಮತ್ತು ಸ್ಥೈರ್ಯ ಇವು ಕುಂದುತ್ತಾ ಬರುತ್ತದೆ. ಪ್ರತಿದಿನವೂ ತಪ್ಪದೆ ಅಭ್ಯಾಸಮಾಡುತ್ತಾ ಬಂದಲ್ಲಿ ಅಂಗಾಂಗಗಳಲ್ಲಿ ಜಡ್ಡು ಸುಲಭವಾಗಿ ಹೋಗುತ್ತಾ ಬಂದು ಆಸನ ಅಭ್ಯಾಸವು ಬಲು ಸುಗಮವೆನಿಸುತ್ತದೆ. ಸಾಯಂಕಾಲದ ಅಭ್ಯಾಸದಲ್ಲಿ ದೇಹದ ಆವಯವಗಳ ಚಲನವಲನಗಳು ಬಲು ಸುಲಭವಾಗಿರುವುದರಿಂದ ಈ ಆಸನಗಳು ಬೆಳಗಿನ ಕಾಲಕ್ಕಿಂತ ಹೆಚ್ಚು ಸರಳವೂ, ಮೇಲ್ಮೈಯಾಗಿಯೂ ಪರಿಣಮಿಸುತ್ತದೆ. ಆದರೆ ಬೆಳಗಿನ ಒಂದು ಸೌಲಭ್ಯತೆಯನ್ನು ಒದಗಿಸುತ್ತದೆ. ಸಂಜೆ ಮಾಡುವ ಅಭ್ಯಾಸವಾದರೂ ಅಭ್ಯಾಸಿಯ ದಿನದ ಬಳಕೆಯನ್ನು ದೂಡಿ, ಅವನಲ್ಲಿ ಹೊಸ ಹುಡುಕು ಶಾಂತಿ ಇವನ್ನು ಮೂಡಿಸುತ್ತದೆ. ಈ ಕಾರಣದಿಂದ ಕಷ್ಟ ತರವೆನಿಸುವ ಆಸನಗಳ ಅಭ್ಯಾಸವದರೂ ಧೈರ್ಯಸ್ಥೈರ್ಯಗಳನ್ನೊದಗಿಸಬಲ್ಲ ಬೆಳಗಿನ ಸಮಯಕ್ಕೆ ಅಳವಡಿಸಿ ಸರಳವಾದ ಹುರುಪು ಕೊಡಬಲ್ಲ ಶಿರಸನ ಪಶ್ಚಿಮ ಮತ್ತು ಅವುಗಳಲ್ಲಿಯೂ ವ್ಯತ್ಯಾಸ ಬಂಗಿಗಳನ್ನು ಸಂಜೆ ಅಭ್ಯಾಸಕ್ಕಾಗಿ ಮೀಸಲಿರಿಸಬೇಕು.
ಬಿಸಿಲು

ಬಿಸಿಲಿನಲ್ಲಿ ಕೆಲವು ತಾಸುಗಳು ತಿರುಗಾಡಿದ ಮೇಲೆ ಈ ಆಸನಗಳ ಅಭ್ಯಾಸಕ್ಕೆ ತೊಳಗಬಾರದು.