ಮನೆ ಆರೋಗ್ಯ ಚಿಕ್ಕ ಮಕ್ಕಳ ಹೆಚ್.ಐ.ವಿ (ಏಡ್ಸ್)

ಚಿಕ್ಕ ಮಕ್ಕಳ ಹೆಚ್.ಐ.ವಿ (ಏಡ್ಸ್)

0

ವಿಷಯದಲ್ಲಿ ವಿಶೇಷವಾದ ಮುತುವರ್ಜಿವಹಿಸಬೇಕಾಗುತ್ತದೆ. ಅದರ ಅವರ ಚಿಕಿತ್ಸೆಯಲ್ಲಿ ಜಾಗರೂಕತೆ ಬಹಳ ಅಗತ್ಯ. ಮಕ್ಕಳಲ್ಲಿ ಹೆಚ್.ಐ.ವಿ ಇದ್ದಾಗ ಅವರಲ್ಲಾಗುವ ಬದಲಾವಣೆಗಳ ಬಗ್ಗೆ ತೊಂದರೆಗಳ ಬಗ್ಗೆ ಏನನ್ನು ಹೇಳಲಾಗದು. ದೊಡ್ಡವರು ಮಕ್ಕಳ ವೇದನೆಯನ್ನು ಅರ್ಥ ಮಾಡಿಕೊಂಡು ಅವರ ಬದುಕನ್ನು ರಕ್ಷಣೆ ಮಾಡಬೇಕಾಗುತ್ತದೆ. ಒಮ್ಮೊಮ್ಮೆ ತಂದೆ ತಾಯಿಗಳಿಬ್ಬರಿಗೂ ಮರಣ ಸಂಭವಿಸಿರುತ್ತದೆ. ಇಲ್ಲವೇ ಒಬ್ಬರು ಉಳಿದಿರುತ್ತಾರೆ. ಆಗ ಉಳಿದಿರುವ ಒಬ್ಬರು ಕೂಡ ಪೀಡಿತರಾಗಿದ್ದು ಮಗುವಿನ ಬಗ್ಗೆ ಕಾಳಜಿ ತೋರದವರಾಗಿರುತ್ತಾರೆ.

Join Our Whatsapp Group

ಮಕ್ಕಳಲ್ಲಿ ಹೆಚ್.ಐ.ವಿ/ ಏಡ್ಸ್ ಇದ್ದಾಗ ಅದು ಹೇಗೆ ಬಂತು ಎಂಬುದು ತಿಳಿದುಕೊಂಡು ರೋಗವನ್ನು ನಿರ್ಧರಿಸಬೇಕು. ಚಿಕಿತ್ಸೆಯನ್ನು ಯಾವ ರೀತಿ ಮಾಡಬೇಕೆಂಬುದು ನಿರ್ಧರಿಸಬೇಕು. ರೋಗನಿರೋಧಕ ವ್ಯಾಕ್ಸಿನ್ ಗಳನ್ನು ಹಾಕಿಸುವ ಬಗ್ಗೆ ಶ್ರದ್ಧೆ ವಹಿಸಬೇಕು. ಮಗುವಿನ ರೋಗದ ವಿಷಯದಲ್ಲಿ ಕುಟುಂಬ ಸದಸ್ಯರಿಗೆ ತಿಳುವಳಿಕೆ ಕೊಡಬೇಕು. ಮಗುವಿನ ಆರೋಗ್ಯದ ವಿಷಯದಲ್ಲಿ ಮತ್ತು ಇತರ ವಿಷಯಗಳಲ್ಲಿ ವಿಶೇಷವಾದ ಆಸಕ್ತಿ ತೋರಿಸಬೇಕು.


ಮಕ್ಕಳಿಗೆ ಮತ್ತು ದೊಡ್ಡವರಿಗೆ ಹೆಚ್.ಐ.ವಿಯಲ್ಲಿ ವ್ಯತ್ಯಾಸ :-
ಹೆಚ್.ಐ.ವಿ/ಏಡ್ಸ್ ವಿಷಯದಲ್ಲಿ ದೊಡ್ಡವರಿಗೆ ಮತ್ತು ಮಕ್ಕಳಿಗೆ ಬಹಳ ವ್ಯತ್ಯಾಸವಿರುತ್ತದೆ. ಮಕ್ಕಳಲ್ಲಿ ಹೆಚ್ಚಾಗಿ ರೋಗ ತೀವ್ರವಾಗಿ ಬೆಳವಣಿಗೆಯಾಗುತ್ತದೆ. ದುಷ್ಪರಿಣಾಮಗಳು ಕೂಡ ಬಹಳ ಸುಲಭವಾಗಿ ಆಗುತ್ತದೆ. ಮಕ್ಕಳಲ್ಲಿ ಹೆಚ್ಚಾಗಿ ತಲುಪಲು ಕೆಲವು ತಿಂಗಳುಗಳು ಬೇಕಾಗುತ್ತದೆ. ಸಮಯ ಸಾಧಕ ಸೋಂಕುಗಳು ಕೂಡ ಶೀಘ್ರವಾಗಿ ಹರಡುತ್ತದೆ. ನ್ಯೂಮೋಸಿಸ್ಟಿಸ್ ಕಾರ್ನಿ ನ್ಯುಮೋನಿಯಾ (ಪಿಸಿಪಿ), ಹೆಚ್.ಐ.ವಿ ಎನ್ ಕೆಫಲೋಪತಿ, ಬ್ಯಾಕ್ಟೀರಿಯಾ ಸೋಂಕುಗಳು ವೃಗವಾಗಿ ಬೆಳವಣಿಗೆಯಾಗುತ್ತದೆ. ಬಹಳ ಸಂದರ್ಭಗಳಲ್ಲಿ ಹೆಚ್.ಐ.ವಿ ಇದೆಯೆಂದು ಗುರುತಿಸುವುದರೊಳಗೆ ಸಮಯ ಸಾಧಕ ಸೋಂಕುಗಳು ಹೊಂದಿರವಾಗುತ್ತದೆ. ಹೆಚ್ಐವಿ ಇದ್ದಾಗ ಮಗುವಿನ ಬೆಳವಣಿಗೆ ತೃಪ್ತಿಕರವಾಗಿರುವುದಿಲ್ಲ. ಅನಾರೋಗ್ಯ ಕಾಡಿಸುತ್ತಿರುತ್ತದೆ. ಅಂತಹ ಸಮಯದಲ್ಲಿ ಮಗುವಿನ ವಿಷಯದಲ್ಲಿ ಜಾಗರೂಕರಾಗಬೇಕು. ತಾಯಿ ತಂದೆಯರಿಗೆ ಹೆಚ್.ಐ.ವಿ ಇದ್ದರೆ ಮಗು ಹುಟ್ಟಿದಾಗಿನಿಂದ ಹೆಚ್.ಐ.ವಿ ಬಗ್ಗೆ ಗಮನ ಹರಿಸಬೇಕು.


ಮಕ್ಕಳಿಗೆ ಹೆಚ್.ಐ.ವಿ ಹರಡುವುದು :-
ತಾಯಿಗೆ ಹೆಚ್.ಐ.ವಿ ಇದ್ದರೆ ಮಗುವಿಗೆ ಬರುತ್ತದೆ. ಈ ರೀತಿಯ ಸಾಂಕ್ರಾಮಿಕತೆಯನ್ನು ವರ್ಟಿಕಲ್ ಟ್ರಾನ್ಸ್ಮಿಷನ್ ಎನ್ನುತ್ತಾರೆ.

ತಾಯಿಯಿಂದ ಮಗುವಿಗೆ ಬಂದಿರುವ ಹೆಚ್ಐವಿಯನ್ನು ಹುಟ್ಟಿದ ತಕ್ಷಣ ಗುರಿತಿಸಬಹುದು :-
ಮಗು ಹುಟ್ಟಿದ 48 ಗಂಟೆಗಳಲ್ಲಿ ಹೆಚ್ಐವಿ, ಡಿಎನ್ಎ, ಪಿಸಿಆರ್ ಪರೀಕ್ಷೆ ಮಾಡಿದರೆ ಬಹುಮಟ್ಟಿಗೆ ತಿಳಿಯುತ್ತದೆ. ರಕ್ತವನ್ನು ಹೊಕ್ಕಳು ನಳ್ಳಿಯಿಂದಲ್ಲದೇ, ನೇರವಾಗಿ ತೆಗೆದುಕೊಳ್ಳಬೇಕು. ಒಂದುವೇಳೆ 48 ಗಂಟೆಗಳಲ್ಲಿ ಮಾಡುವ ಪರೀಕ್ಷೆಯಲ್ಲಿ ನಿರ್ಧಾರವಾಗದಿದ್ದರೆ, ಒಂದು ವಾರ ಕಳೆದ ನಂತರ ಮತ್ತೆ ಮೇಲಿನ ಪರೀಕ್ಷೆ ಮಾಡಬೇಕು. ಅಲ್ಲಿಯೂ ನಿರ್ಧರಿಸಲಾಗದಿದ್ದರೆ, ಕೆಲವರಿಗೆ ಮೂರು ತಿಂಗಳವರೆಗೆ ನಿರ್ಧರಿಸಲಾಗುವುದಿಲ್ಲ.


ಗರ್ಭದಲ್ಲಿರುವ ಮಗುವಿಗೆ ತಾಯಿಯ ರಕ್ತದ ಮೂಲಕ ಹೆಚ್.ಐ.ವಿ ಬರಬಹುದು. ಇಲ್ಲವೇ ಗರ್ಭದಲ್ಲಿದ್ದಾಗ ಬಾರದಿದ್ದರೆ ಸಹಜವಾಗಿ ಹೆರಿಗೆ ಆಗುವ ಯೋನಿ ಮಾರ್ಗದಲ್ಲಿನ ದ್ರವಗಳ ಮೂಲಕ ಹೆಚ್.ಐ.ವಿ ಹರಡುವುದು. ಇಲ್ಲವೇ ಹೆಚ್.ಐ.ವಿ ಪೀಡಿತ ತಾಯಿಯ ಹಾಲು ಕುಡಿಯುವಾಗ ಕೂಡ ಬರಬಹುದು. ಆಂಟಿರಿಟ್ರೋವೈರಲ್ ಡ್ರಗ್ಸ್ ಕೊಡುವುದರಿಂದ, ಹೆರಿಗೆಯಾಗುವಾಗ ಎಚ್ಚರವಹಿಸುವುದರಿಂದ, ತಾಯಿಯ ಹಾಲನ್ನು ಕುಡಿಸದೇ ಇರುವುದರಿಂದ ತಾಯಿಯ ಮೂಲಕ ಮಗುವಿಗೆ ಹೆಚ್.ಐ.ವಿ ಬರದಂತೆ ತಡೆಯಬಹುದು.

ತಾಯಿ ಮಗುವನ್ನು ಮುದ್ದಿಸುವುದರಿಂದ, ತನ್ನ ಮಡಿಲಲ್ಲಿ ಮಲಗಿಸಿಕೊಳ್ಳುವುದರಿಂದ, ಮಗುವಿನ ಯೋಗಕ್ಷೇಮ ನೋಡುವುದರಿಂದ ತಾಯಿಯಿಂದ ಮಗುವಿಗೆ ಹೆಚ್.ಐ.ವಿ ಬರುವುದಿಲ್ಲ.


ಹುಟ್ಟಿದ ಮಗುವಿಗೆ ಎಲಿಜಾ ಟೆಸ್ಟ್ ಪಾಸಿಟಿವ್ ಬಂದರೆ ಹೆಚ್.ಐ.ವಿ ಇದ್ದಂತೆಯೆ ? :-

ಗರ್ಭದಲ್ಲಿರುವ ಮಗುವಿಗೆ ತಾಯಿಯಿಂದ ಹೆಚ್.ಐ.ವಿ ಹರಡದಿದ್ದರು ಕೂಡ ಆಕೆಯಲ್ಲಿನ ಆಂಟಿಬಾಡೀಸ್ ಸಂಕ್ರಮಣ ಆಗುತ್ತದೆ. ಇದರಿಂದಾಗಿ ಮಗುವಿಗೆ ಎಲಿಜಾ ಟೆಸ್ಟ್, ಟ್ರೈಡಾಟ್ ಟೆಸ್ಟ್ ಮಾಡಿದಾಗ ಪಾಸಿಟಿವ್ ಬರುತ್ತದೆ. ಈ ಟೆಸ್ಟ್ ಪಾಸಿಟಿವ್ ಮಾತ್ರಕ್ಕೆ ಹೆಚ್ಐವಿ ಹರಡಿದೆ ಎಂದು ಅರ್ಥವಲ್ಲ. ಮೇಲಿನ ಟೆಸ್ಟ್ ಗಳಲ್ಲಿ ತಿಳಿದುಬರುವುದು ಕೇವಲ ಹೆಚ್.ಐ.ವಿ ಆಂಟಿಬಾಡೀಸ್ ಕುರುತಾಗಿ ಮಾತ್ರ . ತಾಯಿಗೆ ಹೆಚ್.ಐ.ವಿ ಇದ್ದರೆ ಹುಟ್ಟುವ ಮಕ್ಕಳಿಗೆಲ್ಲ ಸಾಮಾನ್ಯವಾಗಿ ಆಂಟಿಬಾಡೀಸ್ ಸಂಕ್ರಮಣವಾಗುತ್ತದೆ. ಹೆಚ್ಚಾಗಿ ವೈರಸ್ ಮಾತ್ರ ಹರಡುವುದಿಲ್ಲ. ಹೆಚ್.ಐ.ವಿ ಗರ್ಭಿಣಿ ರಿಟ್ರೋವೈರಲ್ ಗಳಿಸಿದರೆ ಗರ್ಭದಲ್ಲಿರುವ ಮಗುವಿಗೆ ಹರಡುವುದಿಲ್ಲ. ತಾಯಿ ಎ.ಆರ್.ವಿ ಔಷಧಿಗಳನ್ನು ಬಳಸದಿದ್ದರೂ ಕೂಡ, ಗರ್ಭದಲ್ಲಿರುವ ಮಗುವಿಗೆ ಹೆಚ್ಚಾಗಿ ಹರಡುವ ಸಾಧ್ಯತೆ ಕೇವಲ 15% ರಷ್ಟು ಮಾತ್ರ. ಮತ್ತೆ 15% ರಷ್ಟು ಹೆರಿಗೆ ಸಮಯದಲ್ಲಿ ಮತ್ತೊಂದು 15% ರಷ್ಟು ತಾಯಿ ಹಾಲು ಕುಡಿಯುವುದರಿಂದ ಹರಡುತ್ತದೆ. ಹೆರಿಗೆ ಸಮಯದಲ್ಲಿ ನೆವರಾಪಿನ್ ಗುಳಿಗೆಗಳನ್ನು ತಾಯಿಗೆ ಕೊಡುವುದರಿಂದ ಮಗು ಹುಟ್ಟಿದಾಗ ಮಗುವಿಗೆ ನೆವರಾಪಿನ್ ಸೊಲ್ಯೂಷನ್ ಕೊಡುವುದರಿಂದ ಹೆಚ್.ಐ.ವಿ ಹರಡುವ ಸಾಧ್ಯತೆ ಮತ್ತಷ್ಟು ಕಡಿಮೆಯಾಗುತ್ತದೆ.


ತಾಯಿಯಿಂದ ಹೆಚ್.ಐ.ವಿ ಆಂಟಿಬಾಡೀಸ್ ಬಂದಿದ್ದರು ಕೂಡ ಮಗುವಿಗೆ 18 ತಿಂಗಳು ಆಗುವಷ್ಟುರಲ್ಲಿ ಅವು ಕೂಡ ತೊಲಗುತ್ತದೆ. 18 ತಿಂಗಳ ನಂತರ ಎಲಿಜಾಟೆಸ್ಟ್ ಆಗಲಿ, ಟ್ರೈಡಾಟ್ಟೆಸ್ಡ್ ಆಗಲಿ ಮಾಡಿದರೆ ಫಲಿತಾಂಶ ನೆಗೆಟಿವ್ ಬರುತ್ತದೆ. ಮಗು ಹುಟ್ಟಿದ 18 ತಿಂಗಳ ನಂತರವೂ ಕೂಡ ಈ ಟೆಸ್ಟ್ಗಳಲ್ಲಿ ಪಾಸಿಟಿವ್ ಬಂದರೆ ಹೆಚ್.ಐ.ವಿ ಇದೆ ಎಂದು ತಿಳಿಯಬೇಕು.