ಮನೆ ಅಪರಾಧ ಪಾಲಹಳ್ಳಿ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಸಹಾಯ ಮಾಡಿದ ಆರೋಪ: ಪೊಲೀಸ್ ಪೇದೆ ಅಮಾನತು

ಪಾಲಹಳ್ಳಿ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಸಹಾಯ ಮಾಡಿದ ಆರೋಪ: ಪೊಲೀಸ್ ಪೇದೆ ಅಮಾನತು

0


ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಗ್ರಾಮದ ವಿನೋದ್ ಅಲಿಯಾಸ್ ಕುಂಟ ವಿನು ಎಂಬತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಪೊಲೀಸ್ ಪೇದೆಯನ್ನು ಅಮಾನತು ಮಾಡಲಾಗಿದೆ.
ಪೊಲೀಸ್ ಪೇದೆ ಕೆಂಡಗಣ್ಣಯ್ಯ ಅಮಾನತು ಆದವರು.
ಸದರಿ ಕೊಲೆ ಪ್ರಕರಣದಲ್ಲಿ ಪೊಲೀಸ್ ಪೇದೆ ಕೆಂಡಗಣ್ಣಯ್ಯ ಎಂಬುವವರು ಕೊಲೆ ಎಸಗಿರುವ ಆರೋಪಿಗಳಿಂದ ಹಣದ ಆಮಿಷಕ್ಕೆ ಒಳಗಾಗಿ ಸಹಾಯ ಮಾಡಿರುವ ಕುರಿತು ಎಸ್ ಪಿ ಯತೀಶ್ ರವರಿಗೆ ಮಾಹಿತಿ ದೊರೆತ ಕೂಡಲೇ ಪೊಲೀಸ್ ಪೇದೆಯಾದ ಕೆಂಡಗಂಡಯ್ಯ ರವರನ್ನು ಅಮಾನತು ಮಾಡಿದ್ದಾರೆ.

ಈ ವಿಷಯವಾಗಿ ಪ್ರತಿಕ್ರಿಯೆ ನೀಡಿರುವ ಕೊಲೆಯಾದ ವಿನೋದ್ ರವರ ಅಣ್ಣನಾದ ಪ್ರಮೋದ್, ಆರಕ್ಷಕರೇ ಆರೋಪಿಗಳಿಗೆ ದುಡ್ಡಿನ ಆಸೆಗಾಗಿ ಸಹಾಯ ಮಾಡಿದರೆ ಸಾಮಾನ್ಯ ಜನರ ಪರಿಸ್ಥಿತಿ ಯಾವ ರೀತಿ ಆಗಬಹುದು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ನನ್ನ ತಮ್ಮನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಜನರ ಹೆಸರನ್ನು ನೀಡಲಾಗಿದೆ. ಪೊಲೀಸ್ ಠಾಣೆಯಲ್ಲಿ 9 ಜನ ಅಥವಾ ಹತ್ತು ಜನ ಆರೋಪಿಗಳನ್ನು ಮಾತ್ರ ಬಂಧಿಸಲಾಗಿದೆ. ಇನ್ನೂ ಐದು ಆರೋಪಿಗಳನ್ನು ಬಂಧಿಸಲು ವಿಫಲವಾಗಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ತಕ್ಷಣವೇ ಉಳಿದಿರುವ ಆರೋಪಿಗಳನ್ನು ಬಂಧಿಸಿ ನ್ಯಾಯ ದೊರಕಿಸಿ ಕೊಡಿ ಎಂದು ಎಸ್ಪಿ ಯತೀಶ್ ರವರಿಗೆ ಮನವಿ ಮಾಡಿದ್ದಾರೆ.