ಮಕ್ಕಳಿಗೆ ಹೆಚ್.ಐ.ವಿ ಸಂಕ್ರಮಣವಾಗಿದ್ದರೆ 8-17 ತಿಂಗಳೊಳಗೆ ಹೆಚ್.ಐ.ವಿ ಹಂತದಿಂದ ಎಣಿಕೆ ಬದಲಾವಣೆಯಾಗುತ್ತದೆ. ತಾಯಿಯಿಂದ ಮಗುವಿಗೆ ಹೆಚ್ಚಾಗಿ ಸಂಕ್ರಮಣವಾಗಿದ್ದಾಗ ವರ್ಷದೊಳಗೆ ಕಾಣಿಸುತ್ತವೆ. ಮಗುವಿನ ಆರೋಗ್ಯ ಕ್ಷೀಣಿಸುತ್ತದೆ. ಹಾಗಾಗಿ ಮಗುವಿಗೆ ಹೆಚ್.ಐ.ವಿ ಹರಡಿರುವುದು, ಇಲ್ಲದಿರುವುದನ್ನ ಆರಂಭದಲ್ಲಿಯೇ ತಿಳಿದುಕೊಳ್ಳುವುದು ಸರಿಯಾದ ಕ್ರಮ ಹೆಚ್.ಐ.ವಿ ಹರಡಿದೆ ಎಂದು ನಿರ್ಧಾರವಾದರೆ ಸಿಡಿ4 ಕೌಂಟ್ ಗೆ ಅನುಗುಣವಾಗಿ ಆ ಮಗುವಿನಲ್ಲಿ ಇಮ್ಯೂನಿಟಿ ಪ್ರಮಾಣವನ್ನು ಗುರುತಿಸಬೇಕು. ಇಮ್ಯೂನಿಟಿ ಪ್ರಮಾಣ ಬಹಳ ಕಡಿಮೆ ಇದ್ದರೆ ತಕ್ಷಣ ಆಂಟಿ ರಿಟ್ರೋವೈರಲ್ ಡ್ರಗ್ಸ್ ಆರಂಭಿಸಬೇಕು.
ಮಕ್ಕಳಲ್ಲಿ ಏಡ್ಸ್ ಲಕ್ಷಣಗಳು :-
ಸಾಮಾನ್ಯವಾಗಿ 10-12 ತಿಂಗಳ ನಂತರ ಏಡ್ಸ್ ಲಕ್ಷಣಗಳು ಬೆಳವಣಿಗೆಯಾಗುತ್ತದೆ. ಅಪರೂಪಕ್ಕೆ ಕೆಲ ಮಕ್ಕಳಲ್ಲಿ ಹುಟ್ಟಿದ ತಿಂಗಳೊಳಗೆ ಏಡ್ಸ್ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಮತ್ತೊಂದು ಅಪರೂಪದ ಸಂದರ್ಭಗಳಲ್ಲಿ ಕೆಲವು ಮಕ್ಕಳಲ್ಲಿ 12 ವರ್ಷಗಳವರೆಗೆ ಏಡ್ಸ್ ಲಕ್ಷಣಗಳು ಬೆಳವಣಿಗೆಯಾಗುವುದಿಲ್ಲ. ಶೇ. 80ರಷ್ಟು ಹೆಚ್ಚಾಗಿ ಮಕ್ಕಳಲ್ಲಿ ಎರಡು ವರ್ಷದ ವಯಸ್ಸಿನಲ್ಲಿ ಸದಾ ಜ್ವರ ಬರುವುದು. ನಿಗದಿತವಾದ ಬೆಳವಣಿಗೆ ಇರದಿರುವುದು, ತೂಕ ಕಡಿಮೆಯಾಗುವುದು, ಶರೀರದ ವಿವಿಧ ಭಾಗಗಳದ ಲಿಮ್ಸ್ ಗ್ರಂಥಿಗಳ ಉರಿಯುತ ಬರುವುದು, ಬಾಯಲ್ಲಿ ಪಾಚಿ ಸದಾ ನೀರಿನ್ಂತೆ ಭೇದಿಯಾಗುವುದು, ಇತ್ಯಾದಿ ಸಮಸ್ಯೆಗಳಿರುತ್ತದೆ.
ಹೆಚ್.ಐ.ವಿ ಏಡ್ಸ್ ಮಕ್ಕಳಲ್ಲಿ ಮೈಲೊಸ್ಟೋನ್ ಸರಿಯಾಗಿ ಬೆಳವಣಿಗೆಯಾಗುವುದಿಲ್ಲ. ಮೈಕ್ರೋಕೆಫಲಿ (ತಲೆ ಚಿಕ್ಕದಾಗಿರುವುದು) ಹೆಜ್ಜೆ ಸರಿಯಾಗಿ ಇಡಲಾಗದಿರುವುದು. ಪರಾಟಿಡ್ ಗ್ಲ್ಯಾಂಡ್ ಊತ ಬರುವುದು ಮುಂತಾದ ಸಮಸ್ಯೆಗಳಿರುತ್ತದೆ.
ಈ ಸೋಂಕು ಪೀಡಿದ ಮಕ್ಕಳಿಗೆ ಬಿಳಿರಕ್ತ ಕಣಗಳ ಸಂಖ್ಯೆ ಕಡಿಮೆಯಾಗುತ್ತದೆ. ಲಿಂಪೋಸೈಟ್ಸ್, ಪ್ಲೇಟ್ ಲೆಟ್ಸ್ ಕೂಡ ಕಡಿಮೆಯಾಗುತ್ತದೆ. 50% ರಷ್ಟು ಮಕ್ಕಳಲ್ಲಿ ಲಿವರ್ ದೊಡ್ಡದಾಗುತ್ತದೆ. ಹೃದಯ ಮತ್ತು ಮೂತ್ರಪಿಂಡಗಳು ಘಾಸಿಗೊಳ್ಳುತ್ತವೆ, ಚರ್ಮರೋಗ ಬರುತ್ತದೆ.
ಮಕ್ಕಳಲ್ಲಿ ಇಳಿಮುಖವಾಗುವ ಇಮ್ಯೂನಿಟಿ ಪ್ರಮಾಣ ತಿಳಿದುಕೊಳ್ಳುವುದು ಹೇಗೆ ? :-
ರಕ್ತದಲ್ಲಿ ಸಿ.ಡಿ 4 ಕಣಗಳ ಸಂಖ್ಯೆಗನುಗುಣವಾಗಿ ಹೆಚ್.ಐ.ವಿ ಪೀಡಿತ ಮಗುವಿನಲ್ಲಿರುವ ಇಮ್ಯೂನಿಟಿ ಸ್ಥಾನವನ್ನು ವರ್ಗೀಕರಿಸಲಾಗುತ್ತದೆ. ಹೆಚ್ಚಾಗಿರುವರಲ್ಲಿ ಇಮ್ಯೂನಿಟಿ ಕಡಿಮೆಯಾಗುತ್ತದೆ. ಇಮ್ಯುನಿಟಿ ಇಳಿದಾಗ ಸಿ.ಡಿ4 ಕಣಗಳು ಕೂಡ ಇಳಿಕೆಯಾಗುತ್ತದೆ. ಇಮ್ಯುನಿಟಿ ಕಣಗಳ ಬಹಳ ಇಳಿಕೆಯಾಗಿರುವುದರಿಂದ ರೋಗನಿರೋಧಕ ಶಕ್ತಿ ಇಲ್ಲವಾಗಿ ವಿವಿಧ ಸಮಯ ಸಾಧಕ ಸೋಂಕುಗಳು ಉದ್ಭವವಾಗಿ, ಆರೋಗ್ಯ ಬಹಳ ಕ್ಷೀಣಿಸುತ್ತದೆ. ಇಲ್ಲವೇ ಪ್ರಾಣಾಪಾಯವಾಗುತ್ತದೆ.
ರಕ್ತದಲ್ಲಿರುವ ಸಿ.ಡಿ4 ಸಂಖ್ಯೆಯನ್ನವಲಂಬಿಸಿ ಹೆಚ್.ಐ.ವಿ ರೋಗಿಯ ಇಮ್ಯುನಿಟಿ ಸ್ಥಾನವನ್ನು ʼಎʼ ವಿಭಾಗ, ʼಬಿʼ ವಿಭಾಗ, ʼಸಿʼ ವಿಭಾಗ ಎಂದು ಮೂರು ಭಾಗಗಳಾಗಿ ವರ್ಗೀಕರಿಸುತ್ತಾರೆ. ಮಗುವಿನ ವಯಸ್ಸಿಗನುಗುಣವಾಗಿ ಈ ವಿಭಾಗದ ಸಿ.ಡಿ4 ಕಣಗಳ ಸಂಖ್ಯೆ ಕೂಡ ಬದಲಾಗುತ್ತದೆ. 12 ತಿಂಗಳ ಒಳಗಿನ ಮಗುವಿನಲ್ಲಿ ಸಿ.ಡಿ4 ಕಣಗಳು 1500ಕ್ಕಿಂತಲೂ ಹೆಚ್ಚಾಗಿದ್ದರೆ, ʼಎʼ ವಿಭಾಗವೆಂದು ಪರಿಗಣಿಸುತ್ತಾರೆ. 750-1500ರ ಮಧ್ಯದಲ್ಲಿರುವ ʼಬಿʼ ವಿಭಾಗವೆಂದು 750ಕ್ಕಿಂತ ಕಡಿಮೆಯಿದ್ದರೆ ʼಸಿʼ ವಿಭಾಗ ಎಂದು ಪರಿಗಣಿಸಲಾಗುತ್ತದೆ.
1-5 ವರ್ಷಗಳ ಮಧ್ಯದಲ್ಲಿರುವ ಮಗುವಿನ ಸಿ.ಡಿ 4 ಕಣಗಳು ಸಾವಿರಕ್ಕಿಂತ ಜಾಸ್ತಿಯಿದ್ದರೆ ಆ ಮಗುವಿನ ಇಮ್ಯುನಿಟಿ ವಿಭಾಗ ʼಎʼ, 500-1000 ದ ಮಧ್ಯದಲ್ಲಿದ್ದರೆ, ʼಬಿʼ ವಿಭಾಗ 500 ರಕ್ಕಿಂತಲೂ ಕಡಿಮೆ ಇದ್ದರೆ ʼಸಿʼ ವಿಭಾಗ ಪರಿಗಣಿಸುತ್ತಾರೆ.
ಮಗುವಿನ ವಯಸ್ಸು 6-12 ವರ್ಷಗಳ ಮಧ್ಯದಲ್ಲಿದ್ದಾಗ ಸಿ.ಡಿ4 ಕಣಗಳ ಸಂಖ್ಯೆ 500ಕ್ಕಿಂತ ಹೆಚ್ಚಾಗಿದ್ದರೆ. ಆ ಮಗುವಿನ ಇಮ್ಯೂನಿಟಿ ʼಎʼ 200-500ರ ಮಧ್ಯದಲ್ಲಿದ್ದರೆ ʼಸಿʼ, 200 ಕ್ಕಿಂತಲೂ ಕಡಿಮೆಯಿದ್ದರೆ ʼಸಿʼ ಎಂದು ಪರಿಗಣಿಸುತ್ತಾರೆ. ಯಾವುದೇ ವಯಸ್ಸಿನಲ್ಲಾದರೂ ಇಮ್ಯುನಿಟಿ ವಿಭಾಗ ʼಸಿʼ ಈ ಸ್ಥಾನದಲ್ಲಿರುತ್ತದೆ. ರೋಗನಿರೋಧಕ ಶಕ್ತಿ ಸಂಪೂರ್ಣ ಕುಸಿದಿದೆಯೆಂದು ಅರ್ಥ ಮಾಡಿಕೊಳ್ಳಬೇಕು. ʼಸಿʼ ವಿಭಾಗದ ಮಕ್ಕಳಿಗೆಲ್ಲ ಆಂಟಿ ರಿಟ್ರೋವೈರಲ್ ಡ್ರಗ್ಸ್ ತಪ್ಪದೇ ಕೊಡಬೇಕು.
-ಮುಂದುವರೆಯುತ್ತದೆ…