ಮನೆ ದೇವರನಾಮ ಧರಿಸಿದೆನೋ, ಧರಿಸಿದೆನೋ

ಧರಿಸಿದೆನೋ, ಧರಿಸಿದೆನೋ

0

ಧರಿಸಿದೆನೋ, ಧರಿಸಿದೆನೋ ಗುರುರಾಯ ನಿನ್ನ

ಮಂತ್ರಾಕ್ಷತೆ ಶಿರದಲ್ಲಿ ಬಲವ ಬೇಡುತ | (ಪ)   

ನಿನ್ನ ಆಲಯದೊಳಗೆ ಬರುವ ಭಕ್ತರ ನೋಡುತ |

ಪಾವನ ಜನರ ಭಕ್ತಿ, ಭಾವ ಆನಂದಿಸುತ |

ನಾಲ್ಕು ದಿಕ್ಕುಗಳಲ್ಲಿ ಭಕ್ತ ಜನರ ಸೇವೆ ನೋಡುತ |

ಧರಿಸಿದೆನೋ, ಧರಿಸಿದೆನೋ ಗುರುರಾಯ ನಿನ್ನ  (1)    

ಶುಭ ಸಂಜೆಗೆ ನಿನ್ನ ರಥವ ಎಳೆಯುವದು ನೋಡುತ್ತಾ |

ಪ್ರಕಾರದಿ ಪ್ರದಕ್ಷಣೆಯ ಹಾಕಿ ಬರುವ ಉತ್ಸವ ಮೂರುತಿ |

ಆನಂದ, ಆನಂದ ಎನಗಾಯಿತೋ ||

ಧರಿಸಿದೆನೋ, ಧರಿಸಿದೆನೋ  ಗುರುರಾಯ ನಿನ್ನ  (2)  

ಬಲಬೇಡುವೆ ಗುರುವೇ ಹರಸು ನಿ ಸತತ |

ದಾರಿ ತೋರಿತ ನಿ ಬಾರೋ ಎನ್ನುತ |

ಎನ್ನ ಬಾಳ ರಥವ ಮುನ್ನುಡಿಸು ಎಂದು ಬೇಡುತ್ತ ||

ಧರಿಸಿದೆನೋ , ಧರಿಸಿದೆನೋ ಗುರುರಾಯ ನಿನ್ನ  (3)

ವರಗುರುವೆ ಪೊರೆಯೆಂದು ನಿನ್ನ ಬಳಿಗೆ ಬಂದೆ, |

ಗುರುರಾಯರ ರಾಘವೇಂದ್ರ ಸಲಹು ನೀನು |

ಜಾಹ್ನವಿ ವಿಠಲನ ಬಂಧು ||

ಧರಿಸಿದೆನೋ , ಧರಿಸಿದೆನೋ ಗುರುರಾಯ ನಿನ್ನ   (4)