ಮನೆ ಜ್ಯೋತಿಷ್ಯ ಭರಣಿ

ಭರಣಿ

0

ಕ್ಷೇತ್ರ 13 ಡಿಗ್ರಿ 20 ಕಲೆಯಿಂದ 29 ಡಿಗ್ರಿ 40 ಕಲೆ. ಕಲಾ – ಮೇಷ ರಾಶಿ, ಸ್ವಾಮಿ – ಮಂಗಳ, ನಕ್ಷತ್ರಸ್ವಾಮಿ – ಶುಕ್ರ, ಯೋನಿ – ಗಜ, ಗಣ – ಮನುಷ್ಯ, ನಾಡಿ – ಮಧ್ಯ, ನಾಮಾಕ್ಷರವಾದ ತಲೆ ಮತ್ತು ಮೆದುಳಿನ ಅರ್ಧಭಾಗದಲ್ಲಿರುತ್ತದೆ.  

ರೋಗಗಳು :- ತಲೆಯ ಗಾಯ, ಹಣೆ ಮತ್ತು ಕಣ್ಣುಗಳ ಪಕ್ಕದಲ್ಲಿ ನೋವು, ಸೀತ ರೋಗ, ದೃಷ್ಟಿ ದೋಷ, ಅಜೀರ್ಣ, ತಲೆಯಲ್ಲಿ ನೋವು, ನೆಗಡಿ, ರತಿ ರೋಗದಿಂದ ಅಸ್ವಸ್ಥ, ಧಮನಿಗಳಲ್ಲಿ ವಿಕಾರ, ವ್ಯಸನಗಳಿಂದ ಪೀಡೆ ಚಡಪಡಿಕೆ ಮುಂತಾದವು.

ಸಂರಚನೆ :- ಅತ್ಯಂತ ಧೂಮಪಾನ ಮಾಡುವುದು, ಸಾರಾಯಿ ಅಥವಾ ರಸಮಯ ವಸ್ತುಗೆ ಹೊಂದಿರುವುದು. ಯಾವಾಗಲೂ ಸುಖ ಬಯಸುವರು, ಸಾಹಸ ಮತ್ತು ರಸಿಕತೆಗಳನ್ನು ಬಯಸುವುದು, ಮಾಂಸಹಾರದಲ್ಲಿ ಆಸಕ್ತಿ, ಜನರ ಮಧ್ಯದಲ್ಲಿ ಇರುವುದು. ಕೋಲಿನಿಂದ ಹೊಡೆಯುವುದು, ಹಿಡಿದು ಕಟ್ಟುವುದು, ಒಳ್ಳೆಯ ನಡತೆ ಇಟ್ಟುಕೊಳ್ಳುವುದು, ತನ್ನ ಉದ್ದೇಶವನ್ನು ಈಡೇರಿಸಿಕೊಳ್ಳುವುದು, ರೋಗಭಾದೆ ಒಳಗಾಗದಿರುವುದು, ಬುದ್ಧಿವಂತಿಕೆ ಮತ್ತು ಪ್ರಸನ್ನವಾಗಿರುವನು.

ಉದ್ಯೋಗ, ವಿಶೇಷ ಗುಣಗಳು :- ಈ ನಕ್ಷತ್ರದಲ್ಲಿ ಜನಿಸಿದವನು ಮನೋರಂಜನೆ ಅಥವಾ ಆನಂದ ಉಂಟು ಮಾಡುವ ಕಾರ್ಯದಿಂದ ಹಣ ಗಳಿಸುತ್ತಾನೆ.   ಆಟ, ಸಿನಿಮಾ, ಸಂಗೀತ ವಾದ್ಯಗಳು, ಕಲೆ ಪ್ರದರ್ಶನಗಳು, ಬೆಳ್ಳಿ ಪಾತ್ರೆ, ತಿರುಗಾಡುವ ಕಾರ್ಯ, ಹೊಂದಿರುವ ಸಂಗ್ರಹಾಲಯದಲ್ಲಿ ಕೆಲಸ ಮಾಡುವುದು, ಗೊಬ್ಬರ ಕರ್ಖಾನೆಯಲ್ಲಿ, ಸ್ಟುಡಿಯೋದಲ್ಲಿ ಕೆಲಸ ಮಾಡುವುದು, ವಿವಾಹ, ಪಶುಪಾಲನೆ ಮುಂತಾದ ಕಾರ್ಯಗಳಲ್ಲಿ ಆಗಿರುವುದು ಚಿಕಿತ್ಸಾಲಯ, ಕಟುಕರ ಮನೆಗಳಲ್ಲಿ ಕೆಲಸ ಮಾಡುವುದು, ಚಹಾ, ಕಾಫಿ, ಹೋಟೆಲ್ ಊಟದ ವ್ಯವಸ್ಥೆ ಮಾಡುವುದು, ನ್ಯಾಯಾಧೀಶ, ನಿಯಂತ್ರಕ, ಇಂಜಿನಿಯರ್, ಹಣದ ಲೆಕ್ಕ ಮಾಡುವುದು, ಇಲ್ಲವೇ ಸಾಮಾಜಿಕ ಕಾರ್ಯಕರ್ತನಾಗಬಹುದು.

ಈ ನಕ್ಷತ್ರದಲ್ಲಿ ಶುಕ್ರ ಗ್ರಹವು ಸ್ವಾಮಿಯಾಗಿದ್ದು, ಬಲವನ್ನ ನೀಡುವುದು, ಶತ್ರುಗಳನ್ನು ಸೋಲಿಸಿ, ವಿಜಯಶಾಲಿ ಎನಿಸುವ ಜನರು, ಧಾರ್ಮಿಕ, ಆಸಕ್ತಿ ಸಹ ಹೊಂದಿರುತ್ತಾನೆ. ಚಿತ್ರ ನಿರ್ಮಾಣ, ಫೋಟೋಗ್ರಾಫಿ, ಕಾಲಾಕ್ಷೇತ್ರದಲ್ಲಿ ನಿಷ್ಣಾತರಾದ ಈ ನಕ್ಷತ್ರದವರು, ವಂಚಿಕರೂ ಆಗಬಹುದು. ಕೆಳಗಿನ ಸ್ವರದಲ್ಲಿದ್ದು ಉನ್ನತಿ ಬಯಸುವವರಾಗುವುದು. ಕುಜದಶಾ, ಶುಕ್ರ ಬುಕ್ತಿ ಅಥವಾ ಶುಕ್ರ ದಶ, ಕುಜ ಬುತ್ತಿಗಳಲ್ಲಿ ಎಲ್ಲಾ ಫಲಗಳಾಗುವುವು.   

ಸೂರ್ಯ ಚಂದ್ರರು ಈ ನಕ್ಷತ್ರದಲ್ಲಿ ಇದ್ದಾಗ ಭಾವನುಸಾರ ಫಲ ಉಂಟಾಗುವುದು. ಪ್ರತಿ ವರ್ಷ ಸೂರ್ಯನು ಏಪ್ರಿಲ್ 27ರಿಂದ ಮೇ ಹತ್ತರವರೆಗೆ ಈ ನಕ್ಷತ್ರದಲ್ಲಿ ಇರುತ್ತಾನೆ. ಚಂದ್ರನು 27 ದಿನಗಳಲ್ಲಿ ಒಂದು ದಿನವಿರುತ್ತಾನೆ.