ಮನೆ ಸ್ಥಳೀಯ ನ. 04 ರವರೆಗೆ ವಾಹನ ಸಂಚಾರ ಹಾಗೂ ವಾಹನ ನಿಲುಗಡೆ ಮೇಲೆ ನಿರ್ಬಂಧ

ನ. 04 ರವರೆಗೆ ವಾಹನ ಸಂಚಾರ ಹಾಗೂ ವಾಹನ ನಿಲುಗಡೆ ಮೇಲೆ ನಿರ್ಬಂಧ

0

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವ ದೀಪಾಲಂಕಾರವನ್ನು ನವೆಂಬರ್ 4 ರವರೆಗೆ ವಿಸ್ತರಿಸಿದ್ದು, ಅಕ್ಟೋಬರ್ 25 ರಿಂದ ನವೆಂಬರ್ 4 ರವರೆಗೆ ಪ್ರತಿದಿನ ಸಂಜೆ 4 ರಿಂದ ರಾತ್ರಿ 11 ಗಂಟೆಯವರೆಗೆ ನಗರದಲ್ಲಿ ವಾಹನ ಸಂಚಾರ ಅಧಿಕಗೊಳ್ಳುವುದರಿಂದ ವಾಹನಗಳ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಹಾಗೂ ಸಾರ್ವಜನಿಕರ ಹಿತ ದೃಷ್ಟಿಯಿಂದ ಕೆಲವೊಂದು ರಸ್ತೆಯಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಮತ್ತು ವಾಹನ ವ್ಯವಸ್ಥೆಯಲ್ಲಿ ಕೆಲವೊಂದು ನಿರ್ಬಂಧಗಳನ್ನು ವಿಧಿಸಲಾಗಿದೆ.

ಅರಮನೆ ಸುತ್ತಮುತ್ತಲಿನ ರಸ್ತೆಗಳಲ್ಲಿ: (ಆಂಟಿ ಕ್ಲಾಕ್ ವೈಸ್) ಶ್ರೀ ಶಿವರಾತ್ರಿ ರಾಜೇಂದ್ರ ವೃತ್ತ (ಗನ್ ಹೌಸ್) – ಕುಸ್ತಿ ಅಖಾಡ ಜಂಕ್ಷನ್ – ಬಿ.ಎನ್.ರಸ್ತೆ – ಜಯಚಾಮರಾಜ ಒಡೆಯರ್ ವೃತ್ತ (ಹಾರ್ಡಿಂಜ್ ವೃತ್ತ)- ಆಲ್ಬರ್ಟ್ ವಿಕ್ಟರ್ ರಸ್ತೆ – ಚಾಮರಾಜ ಒಡೆಯರ್ ವೃತ್ತ (ಓಲ್ಡ್ ಸ್ಟಾಚ್ಯು ವೃತ್ತ) -ಕೆ.ಆರ್.ವೃತ್ತ ನ್ಯೂ ಸಯ್ಯಾಜಿರಾವ್ ರಸ್ತೆ ಕಾರ್ಪೋರೇಷನ್ ವೃತ್ತ- ಬಸವೇಶ್ವರ ವೃತ್ತ- ಶ್ರೀ ಶಿವರಾತ್ರಿ ರಾಜೇಂದ್ರ ವೃತ್ತ (ಗನ್ ಹೌಸ್), (ಪುರಂದರ ರಸ್ತೆಯನ್ನು ಒಳಗೊಂಡoತೆ) ಈ ರಸ್ತೆಗಳಲ್ಲಿ ಅರಮನೆಯನ್ನು ಮಧ್ಯ ಬಿಂದುವನ್ನಾಗಿ ಪರಿಗಣಿಸಿ ಗಡಿಯಾರದ ಮುಳ್ಳು ಸುತ್ತುವ ದಿಕ್ಕಿಗೆ ವಿರುದ್ಧ ದಿಕ್ಕಿನಲ್ಲಿ Anti-Clockwise    ವಾಹನಗಳು ಸಂಚರಿಸಲು ಅವಕಾಶ ನೀಡಿರುತ್ತದೆ. ಈ ರಸ್ತೆಗಳಲ್ಲಿ ಗಡಿಯಾರದ ಮುಳ್ಳು ಸುತ್ತುವ ದಿಕ್ಕಿನಲ್ಲಿ ( Clockwise  ) ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

(ಬಸವೇಶ್ವರ ವೃತ್ತದಿಂದ ಪೂರ್ವಕ್ಕೆ ಶ್ರೀ ಶಿವರಾತ್ರಿ ರಾಜೇಂದ್ರ ವೃತ್ತದ ವರೆಗಿನ ರಸ್ತೆ ಹೊರತುಪಡಿಸಿ)

ಕೆ.ಆರ್.ವೃತ-ಆಯುರ್ವೇದಿಕ್ ವೃತ- ನೆಹರು ವೃತ್ತ ಚಾಮರಾಜ ಒಡೆಯರ್ ವೃತ್ತ (ಓಲ್ ಸ್ಟ್ಯಾಚ್ಯು ವೃತ್ತ)- ಕೆ.ಆರ್.ವೃತ್ತ(  Clockwise   : ಕೆ,.ಆರ್. ವೃತ್ತ – ನ್ಯೂ ಸಯ್ಯಾಜಿರಾವ್ ರಸ್ತೆ- ಬಾಬಾ ಜಂಕ್ಷನ್ -ಆಯುರ್ವೇದಿಕ್ ವೃತ್ತ – ಇಶ್ವಿನ್ ರಸ್ತೆ ನೆಹರು ವೃತ್ತ ಅಶೋಕ ರಸ್ತೆ – ಮಹಾವೀರ ವೃತ್ತ (ದೊಡ್ಡ ಗಡಿಯಾರ)ಚಾಮರಾಜ ಒಡೆಯರ್ ವೃತ್ತ (ಓಲ್ಡ್ ಸ್ಟಾಚ್ಯು ವೃತ್ತ)- ಕೆ.ಆರ್.ವೃತ್ತ ಈ ರಸ್ತೆಗಳ ಮಧ್ಯ ಇರುವ ಪ್ರದೇಶವನ್ನು ಮಧ್ಯ ಬಿಂದುವನ್ನಾಗಿ ಪರಿಗಣಿಸಿ ಗಡಿಯಾರದ ಮುಳ್ಳು ಸುತ್ತುವ ದಿಕ್ಕಿಗೆ (  Anti-Clockwise  ) ವಾಹನಗಳು ಸಂಚರಿಸಲು ಅವಕಾಶ ನೀಡಿರುತ್ತದೆ. ಗಡಿಯಾರದ ಮುಳ್ಳು ಸುತ್ತುವ ವಿರುದ್ಧ ದಿಕ್ಕಿನಲ್ಲಿ Anti-Clockwise   ವಾಹನಗಳು ಸಂಚರಿಸದoತೆ ನಿರ್ಬಂಧಿಸಲಾಗಿದೆ.

 ಅಶೋಕ ರಸ್ತೆ-ದಾವೂದ್‌ಖಾನ್ ರಸ್ತೆ ಜಂಕ್ಷನ್ ನಿಂದ ನೆಹರು ವೃತ್ತದವರೆಗೆ: ಅಶೋಕ ರಸ್ತೆಯಲ್ಲಿ ದಾವೂದ್‌ಖಾನ್ ರಸ್ತೆ ಜಂಕ್ಷನ್ (ಗಾಂಧಿ ಮೆಡಿಕಲ್ಸ್) ಇಂದ ನೆಹರು ಸರ್ಕಲ್‌ವರೆಗೆ ದಕ್ಷಿಣಕ್ಕೆ ವಾಹನಗಳ ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದೆ. – ಅಶೋಕ ರಸ್ತೆಯಲ್ಲಿ ನೆಹರು ಸರ್ಕಲ್‌ನಿಂದ ದಾವೂದ್‌ಖಾನ್ ರಸ್ತೆ ಜಂಕ್ಷನ್‌ವರೆಗೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಬನುಮಯ್ಯ ರಸ್ತೆಯಲ್ಲಿ ಚಾಮರಾಜ ಜೋಡಿ ರಸ್ತೆ ಜಂಕ್ಷನ್‌ ನಿಂದ  ಬನುಮಯ್ಯ ಚೌಕದವರೆಗೆ: ಚಾಮರಾಜ ಜೋಡಿ ರಸ್ತೆಯಿಂದ ಬನುಮಯ್ಯ ಚೌಕದವರೆಗೆ ಉತ್ತರಕ್ಕೆ ವಾಹನಗಳ ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಬನುಮಯ್ಯ ಚೌಕದಿಂದ ಚಾಮರಾಜ ಜೋಡಿ ರಸ್ತೆ ವರೆಗೆ ಉತ್ತರದಿಂದ ದಕ್ಷಿಣಕ್ಕೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ತ್ಯಾಗರಾಜ ರಸ್ತೆಯಲ್ಲಿ ಎನ್.ಮಾಧವರಾವ್ ವೃತ್ತ (ಅಗ್ರಹಾರ ವೃತ್ತ) ದಿಂದ ಚಾಮರಾಜ ಜೋಡಿ ರಸ್ತೆ ಜಂಕ್ಷನ್‌ ವರೆಗೆ: ಎನ್.ಮಾಧವರಾವ್‌ವೃತ್ತ (ಅಗ್ರಹಾರ ವೃತ್ತ) ದಿಂದ ಉತ್ತರಕ್ಕೆ ತ್ಯಾಗರಾಜ ರಸ್ತೆಯಲ್ಲಿ ಚಾಮರಾಜ ಜೋಡಿ ರಸ್ತೆಯವರೆಗೆ ವಾಹನಗಳ ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ಚಾಮರಾಜ ಜೋಡಿ ರಸ್ತೆಯಿಂದ ತ್ಯಾಗರಾಜ ರಸ್ತೆಯಲ್ಲಿ ಎನ್.ಮಾಧವರಾವ್ ವೃತ್ತ (ಅಗ್ರಹಾರ ವೃತ್ತ) ದವರೆಗೆ ದಕ್ಷಿಣಕ್ಕೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಲೋಕರಂಜನ್ ರಸ್ತೆಯಲ್ಲಿ ಎಸ್.ಅಂಗಣ್ಣ ವೃತ್ತದಿಂದ (ಚಿರಾಗ್ ಜಂಕ್ಷನ್) ಪೂರ್ವಕ್ಕೆ ಸರ್ಕಸ್ ಮೈದಾನದ ಜಂಕ್ಷನ್‌ ವರೆಗೆ: ಸರ್ಕಸ್ ಮೈದಾನದ ಜಂಕ್ಷನ್‌ ನಿಂದ ಪೂರ್ವದಿಂದ ಪಶ್ಚಿಮಕ್ಕೆ ಜಯಚಾಮರಾಜ ಒಡೆಯರ್ ವೃತ್ತದ (ಹಾರ್ಡಿಂಜ್ ವೃತ್ತ) ವರೆಗೆ ವಾಹನಗಳ ಏಕಮುಖ ಸಂಚಾರಕ್ಕೆ ಅವಕಾಶ ನೀಡಿರುತ್ತದೆ. ಎಸ್.ಅಂಗಣ್ಣ ವೃತ್ತದಿಂದ (ಚಿರಾಗ್ ಜಂಕ್ಷನ್) ಪೂರ್ವಕ್ಕೆ ಸರ್ಕಸ್ ಮೈದಾನದವರೆಗೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಚಂದ್ರಗುಪ್ತ ರಸ್ತೆಯಲ್ಲಿ ಬಿ.ಎನ್.ರಸ್ತೆ ಜಂಕ್ಷನ್‌ ನಿಂದ ಅಶೋಕ ರಸ್ತೆ ಜಂಕ್ಷನ್‌ವರೆಗೆ: ಚಂದ್ರಗುಪ್ತ ರಸ್ತೆಯಲ್ಲಿ ಬಿ.ಎನ್.ರಸ್ತೆ ಜಂಕ್ಷನ್‌ ನಿಂದ ಅಶೋಕ ರಸ್ತೆ ಜಂಕ್ಷನ್‌ವರೆಗೆ ಏಕಮುಖ ಸಂಚಾರ ವ್ಯವಸ್ಥೆ ಜಾರಿಯಲ್ಲಿದ್ದು, ದಿನಾಂಕ 25.10.2023 ರಿಂದ 0411.2023 ರವರೆಗೆ ಏಕಮುಖ ಸಂಚಾರ ವ್ಯವಸ್ಥೆಯನ್ನು ತಾತ್ಕಲಿಕವಾಗಿ ರದ್ದುಗೊಳಿಸಿ, ಅಶೋಕ ರಸ್ತೆಯಿಂದ ಬಿ.ಎನ್.ರಸ್ತೆ ಜಂಕ್ಷನ್‌ವರೆಗೆ ಪಶ್ಚಿಮದಿಂದ ಪೂರ್ವ ದಿಕ್ಕಿಗೆ ಏಕಮುಖ ಸಂಚಾರ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.

ಮೃಗಾಲಯ ರಸ್ತೆಯಲ್ಲಿ ಎಸ್.ಲಿಂಗಣ್ಣ ವೃತ್ತದಿಂದ (ಚಿರಾಗ್ ಜಂಕ್ಷನ್) ಎಫ್.ಕೆ.ಇರಾನಿ ವೃತ್ತದವರೆಗೆ (ಮಿರ್ಜಾ ವೃತ್ತ): ಎಸ್.ಅಂಗಣ್ಣ ವೃತ್ತದಿಂದ (ಚಿರಾಗ್ ಜಂಕ್ಷನ್) ಎಫ್.ಕೆ.ಇರಾನಿ ವೃತ್ತದವರೆಗೆ (ಮಿರ್ಜಾ ವೃತ್ತ) ದಕ್ಷಿಣದಿಂದ ಉತ್ತರಕ್ಕೆ ವಾಹನಗಳ ಏಕಮುಖ ಸಂಚಾರಕ್ಕೆ ಅವಕಾಶ ನೀಡಿರುತ್ತದೆ. ಎಫ್.ಕೆ.ಇರಾನಿ ವೃತ್ತದಿಂದ (ಮಿರ್ಜಾ ವೃತ್ತ)ಎಸ್.ಅಂಗಣ್ಣ ವೃತ್ತದವರೆಗೆ (ಚಿರಾಗ್ ಜಂಕ್ಷನ್) ಉತ್ತರದಿಂದ ದಕ್ಷಿಣಕ್ಕೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.