ಮನೆ ರಾಜಕೀಯ ಮುಂದಿನ ತಿಂಗಳು ಕ್ವಾಡ್ ಶೃಂಗಸಭೆಯಲ್ಲಿ ಮೋದಿ-ಬೈಡನ್ ಭೇಟಿ

ಮುಂದಿನ ತಿಂಗಳು ಕ್ವಾಡ್ ಶೃಂಗಸಭೆಯಲ್ಲಿ ಮೋದಿ-ಬೈಡನ್ ಭೇಟಿ

0

ವಾಷಿಂಗ್ಟನ್(Washington)(ಅಮೆರಿಕ): ಜಪಾನ್​ನ ಟೋಕಿಯೊದಲ್ಲಿ(Tokyo) ನಡೆಯಲಿರುವ ಕ್ವಾಡ್ ಶೃಂಗಸಭೆಯಲ್ಲಿ(Quad Summit) ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರನ್ನು ಜೋ ಬೈಡನ್ ಭೇಟಿ ಮಾಡಲಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.

ಬೈಡನ್ ಅವರ ದಕ್ಷಿಣ ಕೊರಿಯಾ ಮತ್ತು ಜಪಾನ್ ಪ್ರವಾಸವನ್ನು ಮೇ 20ರಿಂದ 24ರವರೆಗೆ ನಿಗದಿಪಡಿಸಲಾಗಿದೆ. ಬೈಡನ್ ಅವರ ಪ್ರವಾಸವು ಮುಕ್ತ ಇಂಡೋ – ಪೆಸಿಫಿಕ್‌ಗೆ ಅಮೆರಿಕದ ಬದ್ಧತೆಯನ್ನು ಮುನ್ನಡೆಸುವಂತೆ ಮಾಡುತ್ತದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ ಬುಧವಾರ ಮಾಹಿತಿ ನೀಡಿದ್ದಾರೆ.

ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯೆಲ್ ಮತ್ತು ಜಪಾನ್ ಪ್ರಧಾನಿ ಕಿಶಿಡಾ ಫ್ಯೂಮಿಯೊ ಅವರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ಬೈಡನ್ ನಡೆಸಲಿದ್ದಾರೆ. ಭದ್ರತಾ ಸಂಬಂಧಗಳನ್ನು ಗಾಢವಾಗಿಸಲು, ಆರ್ಥಿಕ ಸಂಬಂಧಗಳನ್ನು ಹೆಚ್ಚಿಸಲು, ಸಹಕಾರ ವಿಸ್ತರಿಸಲು ವಿವಿಧ ದೇಶಗಳ ನಾಯಕರು ಚರ್ಚಿಸುತ್ತಾರೆ. ಟೋಕಿಯೊದಲ್ಲಿ ಬೈಡನ್ ಅವರು ಆಸ್ಟ್ರೇಲಿಯಾ, ಜಪಾನ್, ಭಾರತದ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ. ಈ ಕುರಿತು ಶೀಘ್ರದಲ್ಲೇ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಲಿದ್ದೇವೆ ಎಂದು ಜೆನ್​​ ಪ್ಸಾಕಿ ಹೇಳಿದ್ದಾರೆ.