ಮನೆ ಮನರಂಜನೆ ʻಹಿಂದಿ ರಾಷ್ಟ್ರಭಾಷೆ ಅಲ್ಲʼ: ಸುದೀಪ್‌ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ ಸಿಎಂ ಬೊಮ್ಮಾಯಿ

ʻಹಿಂದಿ ರಾಷ್ಟ್ರಭಾಷೆ ಅಲ್ಲʼ: ಸುದೀಪ್‌ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ ಸಿಎಂ ಬೊಮ್ಮಾಯಿ

0

ಹುಬ್ಬಳ್ಳಿ (Hubballi)- ʻಹಿಂದಿ ರಾಷ್ಟ್ರಭಾಷೆ ಅಲ್ಲʼ (Hindi is not a national language) ಎಂದಿರುವ ನಟ ಕಿಚ್ಚ ಸುದೀಪ್‌ (Kiccha Sudeep) ಅವರ ಹೇಳಿಕೆಗೆ ಮುಖ್ಯಮಂತ್ರಿ (Chief Minister) ಬಸವರಾಜ ಬೊಮ್ಮಾಯಿ (Basavaraj Bommai) ಅವರು ಬೆಂಬಲ ಸೂಚಿಸಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುದೀಪ್‌ ಅವರು ಹೇಳಿರುವುದು ಸರಿಯಿದೆ. ರಾಜ್ಯಗಳು ಭಾಷಾವಾರು ಪ್ರಾಂತ್ಯಗಳು ಆದ ಮೇಲೆ ಆಯಾ ರಾಜ್ಯಗಳಲ್ಲಿರುವ ಸ್ಥಳೀಯ ಮಾತೃ ಭಾಷೆಯೇ ಸಾರ್ವಭೌಮವಾಗುತ್ತದೆ. ಅದನ್ನೇ ಕಿಚ್ಚ ಸುದೀಪ್ ಅವರು ಹೇಳಿದ್ದಾರೆ. ಇದನ್ನು ಎಲ್ಲರೂ ಮನಗಂಡು ಗೌರವಿಸಬೇಕು ಎಂದು ಹೇಳಿದರು.

ಕಮ್ಯುನಲ್ ರಿಲೀಜಿಯಸ್ (ಕೋಮು ಸೌಹಾರ್ದತೆ) ಅವರವರ ಮನಸ್ಸಿನಲ್ಲಿದೆ, ಭಾರತ ದೇಶದಂತಹ ಎಲ್ಲ ವರ್ಗದ, ಎಲ್ಲ ಧರ್ಮದ ಜನರನ್ನು ಒಗ್ಗೂಡಿಸಿ ಬಾಳ್ವೆ ನಡೆಸುವ ದೇಶವಿದ್ದರೆ ಅದು ಭಾರತ ಮಾತ್ರ. ಬೇರೆ ಕಡೆ ಧರ್ಮದ ಹೆಸರಿನಲ್ಲಿ ಭಯೋತ್ಪಾದನೆಯಾಗಿರುವುದು ನೋಡಿದ್ದೇವೆ. ನಮ್ಮ ದೇಶದಲ್ಲಿ ಶಾಂತಿ, ಸುವ್ಯವಸ್ಥೆ, ಸೌಹಾರ್ದತೆಯನ್ನು ನಡೆಸಿಕೊಂಡು ಹೋದರೆ ಸಾಕು,. ಇಲ್ಲಿ ಒಬ್ಬರಿಗೊಬ್ಬರು ಸಲಹೆ ನೀಡಬೇಕಾಗಿಲ್ಲ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಚಂದ್ರಶೇಖರ್ ಅವರಿಗೆ ತಿರುಗೇಟು ಕೊಟ್ಟರು.