ಪುರಾತನ ಕಾಲದಿಂದಲೂ, ಪ್ರಪಂಚದೆಲ್ಲೆಡೆ ಮನುಷ್ಯನನ್ನು ಕಾಡುತ್ತಾ ಬಂದಿರುವ ಈ ಕಾಯಿಲೆ, ಇತ್ತೀಚಿನವರೆಗೂ ನಿಗೂಢಾವಾಗಿಯೇ ಉಳಿದಿತ್ತು. ಇದು ರೋಗಿಗಳಿಗೆ ಹುಚ್ಚನ ಪಟ್ಟ ಕಟ್ಟುತ್ತದೆ. ಮೂರನೆಯ ಎರಟರಷ್ಟು ರೋಗಿಗಳಲ್ಲಿ ಈ ಕಾಯಿಲೆ ಹಲವು ವರ್ಚಗಳ ಕಾಲ ಉಳಿದುಬಿಡುತ್ತದೆ. ಅವರ ಮನೋಸಾಮಾಜಿಕ ಸಾಮರ್ಥ್ಯಗಳನ್ನು ನುಂಗಿಹಾಕುತತದೆ. ಈ ಕಾಯಿಲೆಯ ಪ್ರಮುಖ ಲಕ್ಷಣಗಳೆಂದರೆ…
ಆಲೋಚನೆಗಳ ಏರುಪೇರು :-
ವ್ಯಕ್ತಿ ಈಗ ಸರಾಗವಾಗಿ, ಅರ್ಥ ಪೂರ್ಣವಾಗಿ, ಕ್ರಿಯಾತ್ಮಕವಾಗಿ, ಸೃಜನಶೀಲತೆಯಿಂದ ಆಲೋಚಿಸಲಾರ. ಆಲೋಚನೆಗಳು ಹಳಿ ತಪ್ಪುತ್ತದೆ. ಅವಾಸ್ತವಿಕ ಕಲ್ಪನೆಗಳು ತುಂಬಿಕೊಳ್ಳುತ್ತದೆ. ಆಲೋಚನೆಗಳು ತುಂಡು-ತುಂಡಾಗಿ ಅಸಂಬಧ್ಧವಾಗುತ್ತದೆ. ಬದಲಾಯಿಸಲು ಅಸಾಧ್ಯವಾದ ತಪ್ಪು ಹಾಗೂ ವಿಚಿತ್ರ ನಂಬಿಕೆಗಲು ಮನಸ್ಸಿನಲ್ಲಿ ಮನೆ ಮಾಡುತ್ತದೆ. ತನ್ನ ಮನೆಯವರು ತನಗೆ ವಿಷವಿಕ್ಕುತ್ತಾರೆ. ಬಂಧು-ಮಿತ್ರರು ತನ್ನನ್ನು ಹಾಳುಮಾಡಲು ಸಂಚು ಮಾಡಿದ್ದಾರೆ ಎಂತಲೋ, ತನ್ನ ಮೆದುಳನ್ನು, ಮನಸ್ಸನ್ನು ಯಾರೋ ವಿಕಿರಣಗಳಿಂದ ಸುಟ್ಟು ಹಾಕುತ್ತಿದ್ದಾರೆ ಎಂತಲೋ, ತನ್ನ ಆಲೋಚನೆಗಳನ್ನು, ನಡವಳಿಕೆಗಳನ್ನು ಯಾರೋ ರಿಮೋಟ್ ಕಂಟ್ರೋಲ್ ಮಾಡುತ್ತಿದ್ದಾರೆ ಎಂತಲೋ ತಾನೊಬ್ಬ ದೇವಧೂತ-ತನಗೆ ಏನೆಲ್ಲವನ್ನೂ ಮಾಡುವ ವಿಶಿಷ್ಟ ಶಕ್ತಿ ಇದೆ ಎಂತಲೋ ನಂಬುತ್ತಾರೆ. ತನ್ನ ಶರೀರದ ಅಂಗಗಳೆಲ್ಲ ಸ್ಥಾನ ಪಲ್ಲಟ ಗೊಂಡಿದೆ. ಅಥವಾ ಇಲ್ಲವೇ ಇಲ್ಲ ಎಂದು ಹೇಳಬಹುದು. ತಾನು ಬಾಯಿ ಬಿಡದೇ ಇರುವ ವಿಚಾರಗಳನ್ನೆಲ್ಲಾ ಇತರರು ತಿಳಿದುಕೊಂಡು ಬಿಡುತ್ತಿದ್ದಾರೆ ಎಂದೂ ದೂರಬಹುದು. ಕೊನೆಕೊನೆಗೆ ಅಥವಾ ಕಾಯಿಲೆ ತೀವ್ರಮಟ್ಟಕ್ಕೆ ಹೋದಾಗ, ಆತ ಮಾತನಾಡುವುದು ಅತನ ವಿಚಾರಗಳು ಯಾರುಗೂ ಅರ್ಥವಾಗುವುದಿಲ್ಲ !
ಭಾವನೆಗಳ ಏರುಪೇರು :-
ಸಮಯ, ಸಂದರ್ಭ ಮತ್ತು ವಿಷಯ ಹಾಗೂ ಪ್ರಚೋದನೆಗೆ ತಕ್ಕಂತೆ ಭಾವನೆಗಳನ್ನು ತೋರಿಸುವುದಿಲ್ಲ. ರೋಗಿ ತನ್ನಷ್ಟಕ್ಕೆ ತಾನೇ ವಿನಾಕಾರಣ ನಗಬಹುದು, ಅಳಬಹುದು, ಕೋಪಿಸಿಕೊಳ್ಳಬಹುದು, ಭಯಪಡಬಹುದು. ಅಥವಾ ತೀವ್ರ ಭಾವೋದ್ವೇಗದ ಸನ್ನಿನೇಶದಲ್ಲೂ ನಿರ್ಲಿಪ್ತನಾಗಿ ಭಾವರಹಿತನಾಗಿ ಕೂರಬಹುದು. ಪ್ರೀತಿ, ದಯೆ, ಅನುಕಂಪ, ಲಜ್ಜೆಯಂತಹ ನವಿರಾದ ಭಾವನೆಗಳು ಮರೆಯಾಗುತ್ತವೆ.
*ಸಂವೇದನೆಗಳು, ತನ್ನ ಪಂಚೇಂದ್ರೀಯಗಳನ್ನು ಉಪಯೋಗಿಸಿ ಪರಿಸರವನ್ನು ಅರ್ಥೈಸುವುದರಲ್ಲಿ ವ್ಯಕ್ತಿ ಅಸಮರ್ಥನಾಗುತ್ತಾನೆ. ಭ್ರಮೆ, ವಿಭ್ರಮೆಗಳು ಕಾಣಿಸಿಕೊಳ್ಳುತ್ತವೆ. ಹಾವನ್ನು ಹಗ್ಗವೆಂತಲೂ, ಹಗ್ಗವನ್ನು ಹಾವೆಂದೂ ಹೇಳತೊಡಗುತ್ತಾನೆ. ಮಗುವಿನ ಹೆಜ್ಜೆಯ ಶಬ್ದ ಅವನಿಗೆ ಬಂದೂಕಿನಿಂದ ಗುಂಡು ಹಾರಿದ ಶಬ್ಧವಾಗುತ್ತದೆ. ಸುತ್ತಮುತ್ತ ಯಾರೂ ಇಲ್ಲದಿದ್ದರೂ, ಯಾವ ಪ್ರಚೋದನೆಯೂ ಇಲ್ಲದಿದ್ದರೂ, ಆತನಿಗೆ ಯಾರೋ ಮಾತಾನಾಡಿದಂತೆ ಧ್ವನಿಗಳು ಕೇಳಬಹುದು. ಹೆದರಿಸುವ ಆಜ್ಞೆಮಾಡುವ ಮಾತುಗಳು ಕೇಲಿಸಬಹುದು. ಕಣ್ಣಿಗೆ ಭಯಾನಕ ಅಥವಾ ಅಸಂಬದ್ಧ ದೃಶ್ಯಗಳು ಕಾಣಿಸಿಕೊಳ್ಳಬಹುದು. ಮೂಗಿಗೆ ವಾಸನೆ ಬಡಿಯಬಹುದು. ಮೈ ಮೇಲೆ ಏನೋ ಹರಿದಾಡಿದಂತೆ ಅನಿಸಬಹುದು. ಯಾರೋ ತನ್ನನ್ನು ಮುಟ್ಟಿದಂತೆ, ಹಿಸುಕಿದಂತೆ ತೋರಬಹುದು.
ವೈಯುಕ್ತಿಕ ಮತ್ತು ಸಾಮಾಜಿಕ ಪ್ರಜ್ಞೆ :-
ಸ್ಕಿಜೋಫ್ರೀನಿಯಾ ರೋಗಿ ತನ್ನ ಬೇಕು ಬೇಡಗಳನ್ನು ಗಮನಿಸುವುದಿಲ್ಲ. ಆಹಾರ ಸೇವನೆ, ನಿದ್ದೆ, ಸ್ಚಚ್ಛತೆ, ಅಲಂಕಾರದ ಬಗ್ಗೆ ನಿರ್ಲಕ್ಷ್ಯ ತೋರುತ್ತಾನೆ. ಹಾಗೆಯೇ ತನ್ನ ಕೆಲಸ ಕರ್ತವ್ಯಗಳನ್ನು ಮರೆಯುತ್ತಾನೆ. ತಾವುದೇ ಸಾಮಾಜಿಕ ಸಂಪ್ರದಾಯಗಳನ್ನು ಪಾಲಿಸುವುದಿಲ್ಲ. ಉರೆಲ್ಲ ಅಲೆಯಬಹುದು, ಜನರೋಂದಿಗೆ ಅನುಚಿತವಾಗಿ ನಡೆದುಕೊಳ್ಳಬಹುದು. ಇತರರಿಗೆ ತೊಂದರೆದಾಯಕನಾಗಬಹುದು.
ಸ್ಕಿಜೋಪದರೀನಿಯಾ ಕಾಯಿಲೆ ಶೇ.10 ರಷ್ಟು ಪ್ರಕರಣಗಳಲ್ಲಿ ಅನುವಂಶೀಯವಾಗಿರಬಹುದು. ಉಳಿದ 90 ರಷ್ಟು ಪ್ರಕರಣಗಳಲ್ಲಿ ಅನುವಂಶೀಯತೆ ಇರುವುದೇ ಇಲ್ಲ. ಸ್ಕಿಜೋಫ್ರೀನಿಯಾ ಒಂದು ಮಿದುಳಿನ ಕಾಯಿಲೆಯೆಂದು ಈಗ ಸಾಬೀತಾಗಿದೆ.
ಈ ರೋಗದಲ್ಲಿ ಅನೇಕ ವಿಧಗಳಿವೆ. ಪೆರನಾಯ್ಡ್ (ಸಂಶಯವೇ ಪ್ರಧಾನ ಲಕ್ಷಣ). ಕೆಟಟೋನಿಕ್ (ಅತಿಚಟುವಟಿಕೆ/ ಮಂಕುತನವೇ ಪ್ರಧಾನ) ಹೆಬಿಫ್ರಿನಿಕ್ (ತೀವ್ರ ಅಲೋಚನಾ ಏರುಪೇರು), ಸಿಂಪಲ್ (ಸಾಮಾಜಿಕ ನಿಷ್ಕಿಯತೆಯೇ ಪ್ರಮುಖ ಲಕ್ಷಣ) ಸ್ಕಿಜೋಫ್ರಿನಿಯಾ ಎಂಬ ನಾಲ್ಕು ಬಗೆಯ ಪ್ರಬೇದಗಳಿವೆ.
ಔಷಧಿಗಳು, ವಿದ್ಯುತ್ ಕಂಪನಾ ಚಿಕಿತ್ಸೆ, ಆಪ್ತ ಸಲಹೆ ಸಮಾಧಾನ, ಚಟುವಟಿಕೆ, ಉದ್ಯೋಗ ಚಿಕಿತ್ಸೆ, ಮನೆಯವರ ಆಸರೆ-ಪ್ರೋತ್ಸಾಹಗಳಿಂದ ಸ್ಕಿಜೋಫ್ರೀನಿಯಾ ರೋಗ, ಬಹುತೇಕ ಪ್ರಕರಣಗಳಲ್ಲಿ ಹತೋಟಿಗೆ ಬರುತ್ತದೆ. ಹಲವಾರು ವರ್ಷಗಳ ಕಾಲ ಚಿಕಿತ್ಸೆಯನ್ನು ಮುಂದುವರಿಸಬೇಕು. ಆಗಾಗ ವೈದ್ಯರನ್ನು ಕಾಣುತ್ತಿರಬೇಕು.