ಮನೆ ಮನೆ ಮದ್ದು ಜಾಜಿಕಾಯಿ

ಜಾಜಿಕಾಯಿ

0

ಜಾಜಿಕಾಯಿ ಒಂದು ಸುವಾಸಿಕ ಹಾಗೂ ಮಸಾಲೆಗಳಲ್ಲಿ ಉಪಯೋಗಿಸುವ ಪದಾರ್ಥವಾಗಿವೆ. ಇದು ಸಾಮಾನ್ಯ ಉಷ್ಣದಿಂದ ರಕ್ಷಣೆ ನೀಡುತ್ತದೆ. ಲೈಂಗಿಕ ಶಕ್ತಿಯನ್ನು ವೃದ್ಧಿಸುತ್ತದೆ. ಇದು ಊತ, ನೋವು ದುರ್ವಾಸನೆ ನಿವಾರಕವಾಗಿದೆ. ಕೀಟನಾಶಕ, ನಾಡಿ ವ್ಯವಸ್ಥೆಯ ಮೇಲೆ ಪರಿಣಾಮಕಾರಿ, ಪಚನ ಕ್ರಿಯೆ, ಯಕೃತವನ್ನು ಕ್ರಿಯಾಶೀಲಗೊಳಿಸುತ್ತದೆ. ನಿದ್ರಾಭಂಗ, ಕೆಮ್ಮು, ಬಿಕ್ಕಳಿಕೆ, ಆಮ್ಲತೆ ನಿವಾರಕ ಮತ್ತು ಪೌರುಷ ಶಕ್ತಿ ಹೆಚ್ಚಿಸುತ್ತದೆ. ಜಾಜಿಕಾಯಿ ಮರ, ಜಾವಾ, ಸುಮಾತ್ರಾ, ಮಲೇಶಿಯಾ ಇನ್ನಿತರ ದ್ವೀಪಗಳಲ್ಲಿ ಕಂಡುಬರುತ್ತದೆ. ಇದರ ಫಲದ ಸುತ್ತಲಿನ ಸಿಪ್ಪೆ ಒಣಗಿದ ಮೇಲೆ ಬೇರೆಯಾಗುತ್ತದೆ. ಇದನ್ನು ಜಾಜಿ ಪತ್ರಿ ಎನ್ನುತ್ತಾರೆ.

Join Our Whatsapp Group

ಔಷಧೀಯ ಗುಣಗಳು :-

  • ಅತಿಸಾರ – ದೊಡ್ಡವರಿಗೆ ಸ್ತ್ರೀ-ಪುರುಷರಿಗೆ ಭೇಧಿಯಾಗುತ್ತಿದ್ದರೆ ಒಂದು ಗ್ರಾಂ ಜಾಜಿಕಾಯಿಯ ಚೂರ್ಣಾ, ಅರ್ಧಕಪ್ಪು ನೀರಿನೊಂದಿಗೆ ಮುಂಜಾನೆ-ಸಂಜೆ ಸೇವಿಸಿದರೆ ಹೊಟ್ಟೆಯ ಊತ, ಹೊಟ್ಟೆ ನೋವು ನಿವಾರಣೆ ಆಗುತ್ತದೆ.
  • ತ್ವಚೆಯ ಅರವಳಿಕೆ ಇಲ್ಲದ್ದು – ಎರಡು ಚಮಚ ಕೊಬ್ಬರಿ ಎಣ್ಣೆಯಲ್ಲಿ 2-3 ಹನಿ ಜಾಜಿಕಾಯಿ ಎಣ್ಣೆ ಬೆರೆಸಿ ಚೆನ್ನಾಗಿ ಕಲಸಿ ಸ್ಪರ್ಶ ಇಲ್ಲದ ಚರ್ಮದ ಮೇಲೆ ಈ ಎಣ್ಣೆ ಹಚ್ಚಿ ಸಾವಕಾಶವಾಗಿ ಮಾಲೀಶು ಮಾಡುವುದರಿಂದ ನಿವಾರಣೆಯಾಗುತ್ತದೆ.
  • ಬಾಯಿಯ ಹುಣ್ಣು- ಜಾಜಿಕಾಯಿಯನ್ನುನೀರಿನಲ್ಲಿ ಚನ್ನಾಗಿ ತೇಯ್ದು ಅರ್ಧಚಮಚ ಲೇಪ, ಅರ್ಧ ಕಪ್ಪು ನೀರಿನಲ್ಲಿ ಬೆರೆಸಿ ಮುಂಜಾನೆ-ಸಂಜೆ ಬಾಯಿ ಮುಕ್ಕಳಿಸಿದರೆ, ಬಾಯಿಯಲ್ಲಾಗುವ ಹುಣ್ಣು ಗುಣವಾಗುತ್ತದೆ.