ಮನೆ ಮನರಂಜನೆ “ಗಣ’ ಚಿತ್ರದ  ರೊಮ್ಯಾಂಟಿಕ್‌ ಸಾಂಗ್‌ ಬಿಡುಗಡೆ

“ಗಣ’ ಚಿತ್ರದ  ರೊಮ್ಯಾಂಟಿಕ್‌ ಸಾಂಗ್‌ ಬಿಡುಗಡೆ

0

ಪ್ರಜ್ವಲ್‌ ದೇವರಾಜ್‌ ನಾಯಕರಾಗಿ ನಟಿಸಿರುವ “ಗಣ’ ಚಿತ್ರಕ್ಕಾಗಿ ಪ್ರಮೋದ್‌ ಮರವಂತೆ ಅವರು ಬರೆದಿರುವ ರೊಮ್ಯಾಂಟಿಕ್‌ ಸಾಂಗ್‌ ಇತ್ತೀಚೆಗೆ ಬಿಡುಗಡೆಯಾಗಿದೆ.

ಅನೂಪ್‌ ಸೀಳಿನ್‌ ಸಂಗೀತ ನೀಡಿರುವ ಈ ಹಾಡನ್ನು ವಿಜಯ ಪ್ರಕಾಶ್‌ ಹಾಡಿದ್ದಾರೆ. ಮುರಳಿ ಮಾಸ್ಟರ್‌ ನೃತ್ಯ ಸಂಯೋಜಿಸಿರುವ ಈ ಹಾಡಿಗೆ ಪ್ರಜ್ವಲ್‌ ದೇವರಾಜ್‌ ಹಾಗೂ ಯಶ ಶಿವಕುಮಾರ್‌ ಹೆಜ್ಜೆ ಹಾಕಿದ್ದಾರೆ. ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು ಸದ್ಯದಲ್ಲೇ ತೆರೆಗೆ ಬರಲಿದೆ.

ಚಿತ್ರದ ಬಗ್ಗೆ ಮಾತನಾಡುವ ಪ್ರಜ್ವಲ್‌, “ಇದು ಎರಡು ಕಾಲಘಟ್ಟಗಳಲ್ಲಿ ನಡೆಯುವ ಸಿನಿಮಾ. ಮುಖ್ಯವಾಗಿ ಎರಡು ಕಾಲಘಟ್ಟಗಳ ಸಮಯ ಸುತ್ತ ಇಡೀ ಸಿನಿಮಾ ಸಾಗುತ್ತದೆ. ಕಥೆ ತುಂಬಾ ವಿಭಿನ್ನವಾಗಿದೆ. ತೆಲುಗಿನ ನಿರ್ಮಾಪಕರು ಬಂದು ಕಥೆ ಹೇಳಿ, ಉಳಿದ ತಂಡವನ್ನು ನೀವೇ ಸಿದ್ಧಪಡಿಸಬೇಕೆಂದರು. ಅದರಂತೆ ನನ್ನ ಜೊತೆಗೆ ಅನೇಕ ವರ್ಷ ಟ್ರಾವೆಲ್‌ ಮಾಡಿರುವ ಹಾಗೂ ಪ್ರತಿಭಾನ್ವಿತರನ್ನು ಸೇರಿಸಿ ಒಂದು ತಂಡ ರಚಿಸಲಾಗಿದೆ. ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿವೆ’ ಎಂದು ಸಿನಿಮಾದ ವಿವರ ನೀಡಿದರು.

ಚೆರಿ ಕ್ರಿಯೇಷನ್ಸ್‌ ಲಾಂಛನದಲ್ಲಿ ಪಾರ್ಥು ಅವರು ನಿರ್ಮಿಸಿರುವ ಈ ಚಿತ್ರವನ್ನು ಹರಿಪ್ರಸಾದ್‌ ಜಕ್ಕ ನಿರ್ದೇಶಿಸಿದ್ದಾರೆ. ಜೈ ಆನಂದ್‌ ಛಾಯಾಗ್ರಹಣ, ಅನೂಪ್‌ ಸೀಳಿನ್‌ ಸಂಗೀತ ನಿರ್ದೇಶನ, ಹರೀಶ್‌ ಕೊಮ್ಮೆ ಸಂಕಲನ, ಸತೀಶ್‌ ಎ ಕಲಾ ನಿರ್ದೇಶನವಿದೆ. ಪ್ರಜ್ವಲ್‌ ದೇವರಾಜ್, ಯಶಾ ಶಿವಕುಮಾರ್‌, ವೇದಿಕಾ, ಕೃಷಿ ತಾಪಂಡ, ವಿಶಾಲ್‌ ಹೆಗಡೆ, ರವಿ ಕಾಳೆ ನಟಿಸಿದ್ದಾರೆ.