ಸುಮಾತ್ರಾ(ಇಂಡೋನೇಷ್ಯಾ)(Indonesia) : ಇಂಡೋನೇಷ್ಯಾದ ಸುಮಾತ್ರಾ ದ್ವೀಪದಲ್ಲಿರುವ ಮೆಡಾನ್ ನಲ್ಲಿ ಕಾನೂನುಬಾಹಿರವಾಗಿ(Illegal) ನಡೆಸುತ್ತಿದ್ದ ಚಿನ್ನದ ಗಣಿಯಲ್ಲಿ(Gold Mining) ಮಣ್ಣು ಕುಸಿದು 12 ಮಹಿಳೆಯರು ಸಾವನ್ನಪ್ಪಿದ್ದಾರೆ(12 Womens dead).
ಈ ಕುರಿತು ಮಾಹಿತಿ ನೀಡಿರುವ ಅಧಿಕಾರಿಗಳು, ಘಘಟನೆಯಲ್ಲಿ ಇಬ್ಬರು ಮಹಿಳೆಯರು ಗಾಯಗೊಂಡಿದ್ದು, ಅವರನ್ನು ರಕ್ಷಿಸಿ, ಚಿಕಿತ್ಸೆಗೆ ದಾಖಲಿಸಲಾಗಿದೆ. ಮಣ್ಣಿನೊಳಗೆ ಹೂತುಹೋಗಿದ್ದ 12 ಮಹಿಳೆಯರ ಶವಗಳನ್ನು ರಕ್ಷಣಾ ಪಡೆಗಳು ಹೊರತೆಗೆದಿವೆ ಎಂದು ತಿಳಿಸಿದ್ದಾರೆ.
ಉತ್ತರ ಸುಮಾತ್ರದ ಮಾಂಡೈಲಿಂಗ್ ನಟಾಲ್ ಜಿಲ್ಲೆಯ ದೂರದ ಹಳ್ಳಿಯೊಂದರಲ್ಲಿ ಸಣ್ಣ ಪ್ರಮಾಣದಲ್ಲಿ ಕಾನೂನು ಬಾಹಿರವಾಗಿ ಚಿನ್ನದ ಗಣಿಗಾರಿಕೆ ನಡೆಸಲಾಗುತ್ತಿತ್ತು. 2 ಮೀಟರ್ (6.5 ಅಡಿ) ಆಳದ ಹೊಂಡದಲ್ಲಿ ಸುಮಾರು 14 ಮಹಿಳೆಯರು ಗುರುವಾರ ಚಿನ್ನ ಗಣಿಗಾರಿಕೆಯಲ್ಲಿ ತೊಡಗಿದ್ದರು. ಈ ವೇಳೆ, ಭೂಕುಸಿತವಾಗಿ ಅವರಲ್ಲಿ 12 ಮಂದಿ ಸಮಾಧಿಯಾಗಿದ್ದಾರೆ ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.