ಮನೆ ಜ್ಯೋತಿಷ್ಯ ಕಾವ್ ಗಳು (ಬನ)

ಕಾವ್ ಗಳು (ಬನ)

0

ʼಕಾವ್ʼ ಎಂದರೆ ಸಣ್ಣ ಕಾಡು (ಬನ) ಅಥವಾ ಗಾಳಿ, ಮಳೆ, ಬಿಸಿಲು ಎಲ್ಲವೂ ಸಿಗುವಂತಹ ಸ್ಥಳವೆಂದರ್ಥ. ಆರಾಧನೆ, ಅನುಷ್ಠಾನ, ಉತ್ಸವ, ಸಾಂಸ್ಕೃತಿಕ ಕ್ರಮಗಳಲ್ಲಿ ವೃಕ್ಷಗಳಿಗೆ ಪ್ರಾಧ್ಯಾನ್ಯತೆಯಿರುವುದಾಗಿದೆ. ವೃಕ್ಷಾರಾಧನೆಯು ದೇವತಾರಾಧನೆಗಿಂತಲೂ ಹಿಂದಿನದ್ದಾಗಿದೆಯೆಂದು ತಿಳಿಯಬಹುದು. ದೈವರಾಧನೆಯಲ್ಲಿ ವೃಕ್ಷರಾಧನೆಯು ಇದ್ದೇ ಇರುತ್ತದೆ. ದೇವತಾ ಸಂಕಲ್ಪದಲ್ಲಿ ವಿಳಕ್ಕ್(ದೀಪ), ವಿಗ್ರಹ ಇತ್ಯಾದಿಗಳನ್ನು ವೃಕ್ಷದಡಿಯಲ್ಲಿಟ್ಟು ಆರಾಧಿಸುವ ಕ್ರಮ ಇಂದಿಗೂ ಇದೆ. ದೈವಾರಾಧನೆತು ವೃಕ್ಷಾರಾಧನೆಯಿಂದಲೇ ಆರಂಭಗೊಂಡಿತೆಂದು ತಿಳಿಯಬಹುದಾಗಿದೆ. ಅತ್ತಿ, ಇತ್ತಿ, ಆಲ, ಅಶ್ವತ್ಥ, ಪಾಲಾಶ, ಸಂಪಿಗೆ ಮೊದಲಾದ ವೃಕ್ಷಗಳನ್ನು ದೇವಸ್ಥಾನಗಳಲ್ಲಿ ಕಾಣಬಹುದು. ʼಇರ್ವರ್ ತೆಯ್ಯಂಙಳ್ʼ ಎಂಬ ದುರ್ದೇವತೆಗಳಿಗೆ ಕಾಸರಕ್ಕನ ಮರವು ಹೆಚ್ಚಿನ ಬಂಧವುಳ್ಳಾಗಿದೆ.

ಇದೇ ರೀತಿಯಾಗಿ ತೆಂಗು, ಇಡಲ, ಪೂವಂ, ನೆಲ್ಲಿ, ಪುನ, ಕೈತ ಮೊದಲಾದ ವೃಕ್ಷಗಳಿಗೆ ಸಂಬಂಧಿಸಿದ ದೈವಗಳೂ ಉಂಟು. ಆಯಿರಂ ತೆಙ್ಙ್ಭಗವತಿ ಕೈತಕ್ಕಿಲ ಭಗವತಿ,ಪೂವತ್ತಿಲ್ ಭಗವತಿ, ಮುಂಡ್ಯಪುರತ್ತ ಭಗವತಿ ಮೊದಲಾದ ಹೆಸರಿನ ದೈವಗಳು ಈ ವೃಕ್ಷಗಳಿರುವ ಪ್ರಾಧ್ಯಾನತೆಯನ್ನು ಸೂಚಿಸುತ್ತದೆ. ದೈವಗಳ ಭಂಡಾರ ಸಾಧನಗಳಾದ ಚುರಿಕಾಯುಧ, ಶೂಲ, ಬಿಲ್ಲು ಇತ್ಯಾದಿಗಳನ್ನು ವೃಕ್ಷಮೂಲದಲ್ಲಿ ನಾಟಿರುವುದನ್ನ ಕಾಣಬಹುದು. ದೈವಸ್ಥಾನಗಳಲ್ಲಿ ಒಂದು ವಿಧದ ಕಬ್ಬಿಣದ ದೀಪವಾಗಿರುವ ʼಕಾಳವಿಳಕ್ಕುಗಳ್ʼ ನ್ನು ವೃಕ್ಷಗಳಲ್ಲಿಯೇ ನಾಟಿರುತ್ತಾರೆ. ಕೆಲವು ದೇವಸ್ಥಾನಗಳಲ್ಲಿರುವ ವೃಕ್ಷಗಳಿಗೆ  ಉಚ್ಛಾಟನೆಗೈದ ಪ್ರೇತಗಳ ಪ್ರತಿರೂಪವಾಗಿ ಕಬ್ಬಿಣದ ಮೊಳೆಗಳನ್ನು ಹೊಡೆಯುತ್ತಾರೆ. ಎರ್ನಾಕುಳಂ ಚೋಟ್ಟಾನಿಕ್ಕರಭಗವತಿ ಭಗವತಿ ದೇವಸ್ಥಾನವು ಈ ಕ್ರಮಕ್ಕೆ ಪ್ರಸಿದ್ಧಿಯಾಗಿದೆ.  

ವೃಕ್ಷಗಳನ್ನು ನೇರವಾಗಿಯೇ ದೇವತಾ ಸಾನಿಧ್ಯದ ಸಂಕಲ್ಪವಾಗಿಯೂ ಪೂಜಿಸಲಾಗುತ್ತಿದೆ. ಕಾವುಗಳ ಉದ್ಭವವಾಗಲು ವೃಕ್ಷಗಳ ಆರಾಧನೆಯ ಮೂಲವಾಗಿದೆ. ಕಾಡನ್ನು ನಾಶಮಾಡುತ್ತಾ ಹೋದರೂ ಅನೇಕ ಎತ್ತರದ ಪ್ರಾಯವಾದ ಮರಗಳಲ್ಲಿ ಬಳ್ಳಿಗಳು ಹಬ್ಬಿಕೊಂಡಿರುತ್ತದೆ. ಆದರೆ ಒಳಗಡೆ ದೈವಗಳ ಕಾವ್ ಗಳಿರುವುದನ್ನ ಕೇರಳದ ಗ್ರಾಮಗಳಲ್ಲಿ ಈಗಲೂ ಕಾಣಬಹುದು. ʼಕಾವ್ʼಗಳಲ್ಲಿ ದೈವ ಸಂಕಲ್ಪವಾಗಿ ಪ್ರತ್ಯಕ್ಷವಾದ ʼಪೀಠವೋʼ, ʼತೆರೆಯೋʼ (ಕಟ್ಟೆ) ಇರುವುದಾಗಿದೆ. ದೈವದ ತಿರುವಾಯುಧಗಳನ್ನೋ, ಮೊಗಗಳನ್ನೋ ತಂದು ಇದರಲ್ಲಿ ಇಟ್ಟು ಪೂಜಿಸುತ್ತಾರೆ. ದೀಪಾವಳಿ-ಪಾಡ್ಯ, ವಿಷು, ಪತ್ತನಾಜೆ ಇತ್ಯಾದಿ ವಿಶೇಷ ದಿನಗಳಲ್ಲಿ ಇಲ್ಲಿ ʼತಂಬಿಲʼ ಕೊಡುವ ಸಾಂಪ್ರದಾಯವಿದೆ.

ಕೆಲವು ಕಾವ್ ಗಳಲ್ಲಿ ಸಣ್ಣ-ಪುಟ್ಟ ದೇವಸ್ಥಾನಗಳೇ ಇರುತ್ತದೆ. ಇವುಗಳನ್ನ ʼಪಳ್ಳಿಯರʼ ಅಥವಾ ʼಅರಕ್ಕಾಲ್ʼ ಎಂದು ಕರೆಯುತ್ತಾರೆ. ಶಿಲ್ಪಶಾಸ್ತ್ರಾರೀತ್ಯಾ ಲೆಕ್ಕಾಚಾರದ ಅಂಗಣವಿದ್ದು ದೇವಾಲಯಗಳಿರುವ ಕಾವ್ ಗಳು ಧಾರಾಳವಾಗಿದೆ. ಇವುಗಳು ಕೆಲವು ಎಕ್ರೆಗಳಷ್ಟು ಜಾಗದಲ್ಲಿ ಹರಡಿಕೊಂಡಿರುತ್ತದೆ. ತಳಿಪರಂಬದ ಮಾಡಾಯಿಕಾವ್, ನೀಲೇಶ್ವರದ ದೇವಿಕಾವ್, ಕುನ್ನತ್ತೂರ್ ಪಾಡಿಯ ಮುತ್ತಪ್ಪನ್ ಕಾವ್ ಇಂತಹುಗಳಾಗಿದ್ದು ಅದರ ಮರಗಳೆಲ್ಲ ನಶಿಸಿ, ಇದೀಗ ಕೇವಲ ʼಪಳ್ಳಿಯರ್ʼಗಳು ಮಾತ್ರವೇ ಇರುವ ನಾಮವಿಶೇಷ ಕಾವ್ ಗಳೂ ಇವೆ. ಕಾವ್ ಗಳಲ್ಲಿ ಕಾಳಿ (ಭಗವತಿ) ಕಾವ್ ಗಳು ನಾಗ ಕಾವ್ ಗಳು, ಅಯ್ಯಪ್ಪನ ಕಾವ್ ಗಳು, ಯೋಗೀಶ್ವರ ಕಾವ್ ಗಳು ಎಂಬೀ ವಿಧಗಳಿವೆ.

ಕೇರಳದಲ್ಲಿರುವ ಕ್ಷೇತ್ರಗಳೆಲ್ಲಾ ಗ್ರಂಥಗಳಲ್ಲಿ ಹೇಳಲ್ಪಟ್ಟಿರುವ ನಿರ್ದಿಷ್ಟ ವಾಸ್ತು ಶಿಲ್ಪಕ್ಕನುಸಾರವಾಗಿದ್ದರು ಕಾವ್ ಗಳಲ್ಲಿರುವ ಪ್ರತಿಷ್ಠೆಗೆ ನಿರ್ದಿಷ್ಟ ಶಿಲ್ಪದ ಆಧಾರಗಳಿದ್ದಿಲ್ಲ. ಹೆಚ್ಚಾಗಿ ಗಿಡ-ಮರ- ಬಳ್ಳಿಗಳಿಂದಾವರಿಸಿದ ಎಡೆಯಲ್ಲಿ ಒಂದು ತೆರೆಯೋ, ಸಣ್ಣ ಮಂಟಪವೋ, ಅಥವಾ ಒಂದು ಚಿತ್ರಕೂಟವಷ್ಟೇ ಕಾಣಬಹುದಾಗಿದೆ. ಕೆಲವೆಡೆ ಕೇವಲ ದೀಪ ಸಂಕಲ್ಪ ಮಾತ್ರವಿರುವುದಾಗಿದೆ. ಶಾಕ್ತೇಯಕ್ರಮವಾಗಿ ಅಸುರಕ್ರಿಯೆಯ ಉಪಾಸನೆ ಈ ಕಾವ್ ಗಳಲ್ಲಿ ನಡೆಯುವುದಾಗಿದೆ. ಕೆಲವು ಕಾವ್ ಗಳಲ್ಲಿ ಪ್ರಾಣಿಬಲಿ ನೀಡುವಂತಹ ಕ್ರಮವೂ ಇತ್ತು.