ಮನೆ ಕ್ರೀಡೆ ಐಸಿಸಿ ಏಕದಿನ ವಿಶ್ವಕಪ್: ಸಂಗಕ್ಕರ, ಶಕಿಬ್ ಅಲ್ ಹಸನ್, ರೋಹಿತ್ ಶರ್ಮ ದಾಖಲೆ ಮುರಿದ ವಿರಾಟ್...

ಐಸಿಸಿ ಏಕದಿನ ವಿಶ್ವಕಪ್: ಸಂಗಕ್ಕರ, ಶಕಿಬ್ ಅಲ್ ಹಸನ್, ರೋಹಿತ್ ಶರ್ಮ ದಾಖಲೆ ಮುರಿದ ವಿರಾಟ್ ಕೊಹ್ಲಿ

0

ಮುಂಬೈ: ಐಸಿಸಿ ಏಕದಿನ ವಿಶ್ವಕಪ್ ಕೂಟದ ತನ್ನ ಏಳನೇ ಪಂದ್ಯದಲ್ಲಿ ಭಾರತ ತಂಡವು ಶ್ರೀಲಂಕಾವನ್ನು ಎದುರಿಸುತ್ತಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತವು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದಿದೆ.

ನಾಯಕ ರೋಹಿತ್ ಶರ್ಮಾ ಅವರನ್ನು ಆರಂಭದಲ್ಲೇ ಕಳೆದುಕೊಂಡರೂ ತಂಡಕ್ಕೆ ಶುಭಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಆಧರಿಸಿದರು. ಲಂಕನ್ ಬೌಲರ್ ಗಳನ್ನು ದಂಡಿಸಿದ ಉಭಯರು ಶತಕದ ಜೊತೆಯಾಟ ಆಡಿದ್ದಾರೆ.

ಗಿಲ್ ಗಿಂತ ವೇಗವಾಗಿ ಬ್ಯಾಟ್ ಬೀಸಿದ ವಿರಾಟ್ ಕೊಹ್ಲಿ 17ನೇ ಓವರ್ ನಲ್ಲಿ ತನ್ನ ಅರ್ಧ ಶತಕ ಪೂರೈಸಿದರು. ಇದೇ ವೇಳೆ ಏಕದಿನ ವಿಶ್ವಕಪ್ ನಲ್ಲಿ ಹೆಚ್ಚು ಬಾರಿ 50ಕ್ಕಿಂತ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದರು.

ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರು 21 ಬಾರಿ ಏಕದಿನ ವಿಶ್ವಕಪ್ ನಲ್ಲಿ ಹೆಚ್ಚು ಬಾರಿ 50ಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ 13ನೇ ಬಾರಿ ಈ ಸಾಧನೆ ಮಾಡಿದರು.

ಶ್ರೀಲಂಕಾದ ಕುಮಾರ ಸಂಗಕ್ಕರ, ಬಾಂಗ್ಲಾದೇಶದ ಶಕಿಬ್ ಅಲ್ ಹಸನ್ ಮತ್ತು ಭಾರತದ ರೋಹಿತ್ ಶರ್ಮ ಅವರು 12 ಬಾರಿ 50ಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ.